ಕೋಲಾರ : ಮಾವಿನ ಬಲೆ ತೀವ್ರವಾಗಿ ಕುಸಿತಗೊಂಡಿದ್ದರಿಂದ ವ್ಯಾಪಾರಿ ಒಬ್ಬರು ಹೃದಯಾಘಾತದಿಂದ ಸಾವನಪ್ಪಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಮಾವಿನ ತೋಟದಲ್ಲಿ ಕಟಾವು ಮಾಡುವ ವೇಳೆ ವ್ಯಾಪಾರಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಕೋಲಾರ ತಾಲೂಕಿನ ತೊಟ್ಲಿ ಗ್ರಾಮದ ಮಾವಿನ ತೋಟದಲ್ಲಿ ಈ ಒಂದು ಘಟನೆ ನಡೆದಿದ್ದು, ಹೃದಯಘಾತದಿಂದ ಮೊಹಮ್ಮದ್ ಶಫಿವುಲ್ಲಾ ಅಲಿಯಾಸ್ ಅನ್ವರ್ (55) ಸಾವನ್ನಪ್ಪಿದ್ದಾರೆ. ಮೃತ ಅನ್ವರ್ ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ನಿವಾಸಿ ಎನ್ನಲಾಗಿದ್ದು, ಸುಮಾರು 30 ಲಕ್ಷ ರೂಪಾಯಿ ಮಾವಿನ ವಹಿವಾಟು ಮಾಡಿದ್ದರು. ಇಂದು ಮಾವಿನ ಬೆಳೆ ಮತ್ತಷ್ಟು ಕುಸಿತ ಸುದ್ದಿ ತಿಳಿದು ತೀವ್ರ ಹೃದಯಘಾತವಾಗಿದೆ.
ಬೆಲೆ ಕುಸಿತದಿಂದ ಬೆಳೆಗೆ ಔಷಧಿ ಸಿಂಪಡಿಸಿದ್ದರು. ಅದರ ದುಡ್ಡು ಸಹ ಬಾರದೇ ಸಂಕಷ್ಟ ಅನುಭವಿಸಿದ್ದರು. ಸಹ ದುಡ್ಡು ಬಾರದೇ ಸಂಕಷ್ಟ ಅನುಭವಿಸಿದ್ದರು. ಹಾಗಾಗಿ ಮಾವಿನ ತೋಟದಲ್ಲಿ ಅವರಿಗೆ ಹೃದಯಾಘಾತವಾಗಿದೆ. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗಲೇ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. ಮಾವಿನ ಬೆಳೆಗೆ ಬೆಂಬಲ ಬೆಲೆ 18 ದಿನಗಳಿಂದ ಹೋರಾಟ ನಡೆಸಲಾಗುತ್ತಿದೆ. ಸರ್ಕಾರದ ಹೋರಾಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಕುಟುಂಬಸ್ಥರು ಆಕ್ರೋಶ ಹೊರಹಕಿದ್ದಾರೆ.