ರಾಜಸ್ತಾನ್ : ರಾಜ್ಯದಲ್ಲಿ ಹೃದಯಾಘಾರದಿಂದ ಸರಣಿ ಸಾವು ಪ್ರಕರಣ ಮುಂದುವರಿದಿದ್ದು ಇಂದು ಬೆಳಿಗ್ಗೆ ತಾನೇ ಹಾವೇರಿಯಲ್ಲಿ 25 ವರ್ಷದ ಶಾಲಾ ಬಸ್ ಚಾಲಕೀರಪ್ಪ ಹೃದಯಘಾತದಿಂದ ಸಾವನ್ನಪ್ಪಿದ್ದ ಘಟನೆ ನಡೆದಿತ್ತು. ಇದೀಗ ಶಾಲೆಯಲ್ಲಿ ನಾಲ್ಕನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಊಟ ಮಾಡೋಕೆ ಬಾಕ್ಸ್ ಓಪನ್ ಮಾಡುತ್ತಿರುವಾಗಲೇ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಸಿಕಾರ್ ಪಟ್ಟಣದಲ್ಲಿ ನಡೆದಿದೆ.
ಹೌದು ರಾಜಸ್ಥಾನದಲ್ಲಿ ಹೃದಯಾಘಾತದಿಂದ 9 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಸಿಕಾರ್ ಪಟ್ಟಣದ ಆದರ್ಶ ವಿದ್ಯಾಮಂದಿರ ಶಾಲೆಯಲ್ಲಿ ಈ ಒಂದು ಘಟನೆ ನಡೆದಿದ್ದು, 4ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವನಪ್ಪಿದ್ದಾಳೆ. ಶಾಲೆಯಲ್ಲಿ ಊಟ ಮಾಡಲೆಂದು ಬಾಕ್ಸ್ ಓಪನ್ ಮಾಡುತ್ತಿದ್ದ ವೇಳೆ ಪ್ರಗತಿ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಕೂಡಲೇ ಬಾಲಕಿಯನ್ನು ಶಿಕ್ಷಕರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ಆದರೆ ಅಸ್ಟೊತ್ತಿಗಾಗಲೇ ವೈದ್ಯರು ಬಾಲಕಿ ಹೃದಯಾಘಾತದಿಂದ ಸಾವನ್ನಪ್ಪಿರುವುದು ದೃಢಪಡಿಸಿದ್ದಾರೆ.