ಬಳ್ಳಾರಿ : ಬಳ್ಳಾರಿಯಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದ್ದು, ನಾಲ್ಕು ತಲೆ ಬುರುಡೆ ಹಾಗೂ ಎಲುಬು ಇಟ್ಟು ವಾಮಾಚಾರ ನಡೆಸಿರುವ ಘಟನೆ ನಡೆದಿದ್ದು, ನಗರದ ಜನರು ಬೆಚ್ಚಿ ಬಿದ್ದಿದ್ದಾರೆ.
ಹೌದು, ಬಳ್ಳಾರಿಯ ಮಾರ್ಕಂಡೇಯ ಕಾಲೋನಿಯಲ್ಲಿ ನಾಲ್ಕು ತಲೆಬುರುಡೆ, ಹತ್ತಾರು ಎಲುಬುಗಳನ್ನು ಮುಂದಿಟ್ಟು, ಕೂದಲು ಸುಟ್ಟು, ದೀಪ ಹಚ್ಚಿಟ್ಟು ವಾಮಾಚಾರ ಮಾಡಲಾಗಿದ್ದು, ಏರಿಯಾ ಜನರು ಬೆಚ್ಚಿಬಿದ್ದಿದ್ದಾರೆ. ಎಳ್ಳಮವಾಸ್ಯೆ ದಿನದಂದು ವಾಮಾಚಾರ ಮಾಡಿದ್ದು ಇಡೀ ನಗರದ ಜನರು ಭಯ ಬಿದ್ದಿದ್ದಾರೆ..
ಇನ್ನೂ ವಾಮಾಚಾರ ಮಾಡಿದ ಸ್ಥಳದಲ್ಲಿ ವಾಟರ್ ಟ್ಯಾಂಕ್ ನಿಂದ ಯಾರೂ ನೀರು ತೆಗೆದುಕೊಂಡು ಹೋಗುತ್ತಿಲ್ಲ. ಪಕ್ಕದಲ್ಲಿಯೇ ಅಂಗನವಾಡಿ ಶಾಲೆಗೂ ಮಕ್ಕಳನ್ನು ಕೂಡ ಕಳುಹಿಸುತ್ತಿಲ್ಲ. ಈ ಏರಿಯಾದಲ್ಲಿ ಪದೇ ಪದೇ ಕೆಲವು ಕಿಡಿಗೇಡಿಗಳು ವಾಮಾಚಾರ ಮಾಡುತ್ತಿರುವ ಹಿನ್ನಲೆಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಇಲ್ಲಿನ ನಿವಾಸಿಗಳು ಭಯಭೀತರಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ವಾಮಾಚಾರದ ವಸ್ತುಗಳನ್ನು ತೆರವುಗೊಳಿಸಿದ್ದಾರೆ.