Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಶಿವಮೊಗ್ಗ: ಹೊಸನಗರದ ಹಿರಿಯ ಪತ್ರಕರ್ತ ರವಿಬಿದನೂರಿಗೆ ಪ್ರತಿಷ್ಠಿತ ‘ಕರ್ಪೂರಿ ಠಾಕೂರ್ ಪ್ರಶಸ್ತಿ’

ಚಿತ್ರದುರ್ಗ ಜಿಲ್ಲಾ ಯಾದವ (ಗೊಲ್ಲ) ಸಂಘದ ಅಧ್ಯಕ್ಷರಾಗಿ ‘ಮೀಸೆ ಮಹಲಿಂಗಪ್ಪ’ ಪುನರಾಯ್ಕೆ

ಪುರುಷರ ಗಂಧ-ಸುಗಂಧಗಳ ಬಗ್ಗೆ ಮಹಿಳೆಯರ ಅಸಲಿ ಭಾವನೆ ಏನು? ಇಲ್ಲಿದೆ ರೋಚಕ ಮಾಹಿತಿ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ಹಾಸನದಲ್ಲಿ ಘೋರ ದುರಂತ : ಇಂದು ಒಂದೇ ಇಬ್ಬರು ‘ಹೃದಯಾಘಾತಕ್ಕೆ’ ಬಲಿ
KARNATAKA

SHOCKING : ಹಾಸನದಲ್ಲಿ ಘೋರ ದುರಂತ : ಇಂದು ಒಂದೇ ಇಬ್ಬರು ‘ಹೃದಯಾಘಾತಕ್ಕೆ’ ಬಲಿ

By ಸುರೇಶ್‌

ಹಾಸನ : ಇತ್ತೀಚಿಗೆ ಯುವಜನತೆಯಲ್ಲಿ ಹೃದಯಾಘಾತ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇದೀಗ ಇಂದು ಒಂದೇ ದಿನದಲ್ಲಿ ಹಾಸನದಲ್ಲಿ ಹೃದಯಾಘಾತಕ್ಕೆ ಇಬ್ಬರು ಬಲಿಯಾಗಿದ್ದಾರೆ. ನಗರದ ಸತ್ಯಮಂಗಲ ಬಡಾವಣೆಯಲ್ಲಿ ಹೃದಯಾಘಾತದಿಂದ 35 ವರ್ಷದ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ.

ಮೃತರನ್ನು ಚೇತನ್ (35) ಎಂದು ಗುರುತಿಸಲಾಗಿದೆ. ಮೂಲತಃ ಮಂಡ್ಯದ ಕಿಕ್ಕೇರಿ ಮೂಲದ ಚೇತನ್, ಹಾಸನ ನಗರದ ಹಳೇ ಬಸ್ ನಿಲ್ದಾಣದ ಬಳಿ ಮೊಬೈಲ್ ಅಂಗಡಿ ನಡೆಸುತ್ತಿದ್ದರು. ಸತ್ಯಮಂಗಲ ಬಡಾವಣೆಯಲ್ಲಿ ಪತ್ನಿ ಮತ್ತು ಮಗುವಿನೊಂದಿಗೆ ವಾಸವಿದ್ದರು.

ಶನಿವಾರ ಮಧ್ಯಾಹ್ನದ ವೇಳೆಗೆ ಚೇತನ್ ಊಟಕ್ಕೆ ಕುಳಿತುಕೊಳ್ಳುವಾಗ ದಿಢೀರ್ ಎದೆನೋವು ಕಾಣಿಸಿಕೊಂಡಿದೆ ಎನ್ನಲಾಗಿದೆ. “ಎದೆ ನೋಯುತ್ತಿದೆ” ಎಂದು ಪತ್ನಿಗೆ ತಿಳಿಸಿ ತಕ್ಷಣವೇ ಎದ್ದು ನಿಂತು ಕುಸಿದು ಬಿದ್ದಾರೆ. ಪತ್ನಿ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ, ಅಷ್ಟರಲ್ಲಾಗಲೇ ಚೇತನ್ ಮೃತಪಟ್ಟಿದ್ದರು.

ಅದೇ ರೀತಿಯಾಗಿ ಬೇಲೂರು ಪಟ್ಟಣದ ಸಮಾಜ ಸೇವಕ ನಿಶಾದ್ ಅಹಮ್ಮದ್ (35) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇವರು ಜೀವನ ನಿರ್ವಹಣೆಗಾಗಿ ಪಟ್ಟಣದಲ್ಲಿ ಟೀ ಕ್ಯಾಂಟೀನ್ ಒಂದನ್ನು ನಡೆಸುತ್ತಿದ್ದರು. ಜೊತೆಗೆ​ ಸಮಾಜ ಸೇವಕ ಎಂದು ಗುರುತಿಸಿಕೊಂಡಿದ್ದರು. ಕರೊನಾ ಸಮಯದಲ್ಲಿ 80ಕ್ಕೂ ಹೆಚ್ಚು ಶವಸಂಸ್ಕಾರ ಮಾಡಿದ್ದರು. ಹಲವಾರು ಅನಾಥ ಶವಗಳಿಗೆ ನಿಶಾದ್ ಅಹಮ್ಮದ್ ಮುಕ್ತಿ ನೀಡಿದ್ದರು.

ಹಾಸನದಲ್ಲಿ ಇದುವರೆಗೂ ಹೃದಯಾಘಾತಕ್ಕೆ 7 ಬಲಿ!

ಜಿಲ್ಲೆಯಲ್ಲಿ ಒಟ್ಟು 6 ಜನರು ಹೃದಯಾಘಾತದಿಂದಲೇ ಜೀವ ಕಳೆದುಕೊಂಡಿದ್ದಾರೆ. ಆತಂಕಕಾರಿ ಸಂಗತಿ ಎಂದರೆ ಎಲ್ಲರೂ ಯುವಕರೇ ಆಗಿದ್ದಾರೆ. ಇತ್ತೀಚೆಗೆ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ ಕೆಲವತ್ತಿ ಗ್ರಾಮದ ಕವನ ಕೆ.ವಿ ಹಾರ್ಟ್​ ಅಟ್ಯಾಕ್​ನಿಂದ ಸಾವನ್ನಪ್ಪಿದ್ದರು. ಇದಾದ ಮೇಲೆ ಕೆಲವೇ ದಿನಗಳಲ್ಲಿ ಜಿಲ್ಲೆಯ 2 ಪ್ರತ್ಯೇಕ ಘಟನೆಗಳಲ್ಲಿ ಹೊಳೆನರಸೀಪುರ ಪಟ್ಟಣದ ಮಡಿವಾಳ ಬಡಾವಣೆಯ ಯುವತಿ ಸಂಧ್ಯಾ ಹಾಗೂ ಅರಕಲಗೂಡು ತಾಲೂಕಿನ ಕಾಡನೂರು ಗ್ರಾಮದ ಯುವಕ ಅಭಿಷೇಕ್ ಕೊನೆಯುಸಿರೆಳೆದಿದ್ದರು.

ಇವರ ಬೆನ್ನಲ್ಲೇ ಹಾಸನ ತಾಲೂಕಿನ ಅಗಲಹಳ್ಳಿ ಕೊಪ್ಪಲು ಗ್ರಾಮದ ನವೀನ್ ಕುಮಾ‌ರ್ (21) ಹೃದಯಾಘಾತದಿಂದ ನಿಧನರಾಗಿದ್ದರು. ಹೊಳೆನರಸೀಪುರ ಪಟ್ಟಣದ ನಿವಾಸಿ ಚನ್ನಕೇಶವ ಹಾಗೂ ಜ್ಯೋತಿ ದಂಪತಿಯ ಪುತ್ರ ನಿಶಾಂತ್ (19) ಬೆಂಗಳೂರಿನ ಜೆಪಿ ನಗರದಲ್ಲಿ ಸಾವನ್ನಪ್ಪಿದ್ದರು. ಈಗ ಇವರ ಬೆನ್ನಲ್ಲೇ ಇಂದು ಚೇತನ್ (35) ಹಾಗು ನಿಶಾದ್ ಅಹಮ್ಮದ್ (35) ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

Share. Facebook Twitter LinkedIn WhatsApp Email

Related Posts

ಶಿವಮೊಗ್ಗ: ಹೊಸನಗರದ ಹಿರಿಯ ಪತ್ರಕರ್ತ ರವಿಬಿದನೂರಿಗೆ ಪ್ರತಿಷ್ಠಿತ ‘ಕರ್ಪೂರಿ ಠಾಕೂರ್ ಪ್ರಶಸ್ತಿ’

2 Mins Read

ಚಿತ್ರದುರ್ಗ ಜಿಲ್ಲಾ ಯಾದವ (ಗೊಲ್ಲ) ಸಂಘದ ಅಧ್ಯಕ್ಷರಾಗಿ ‘ಮೀಸೆ ಮಹಲಿಂಗಪ್ಪ’ ಪುನರಾಯ್ಕೆ

2 Mins Read

BREAKING: ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್: ಅಕ್ರಮ ಅದಿರು ಸಾಗಣೆ ಪ್ರಕರಣ ಖುಲಾಸೆಗೊಳಿಸಿದ ಕೋರ್ಟ್!

1 Min Read
Recent News

ಶಿವಮೊಗ್ಗ: ಹೊಸನಗರದ ಹಿರಿಯ ಪತ್ರಕರ್ತ ರವಿಬಿದನೂರಿಗೆ ಪ್ರತಿಷ್ಠಿತ ‘ಕರ್ಪೂರಿ ಠಾಕೂರ್ ಪ್ರಶಸ್ತಿ’

ಚಿತ್ರದುರ್ಗ ಜಿಲ್ಲಾ ಯಾದವ (ಗೊಲ್ಲ) ಸಂಘದ ಅಧ್ಯಕ್ಷರಾಗಿ ‘ಮೀಸೆ ಮಹಲಿಂಗಪ್ಪ’ ಪುನರಾಯ್ಕೆ

ಪುರುಷರ ಗಂಧ-ಸುಗಂಧಗಳ ಬಗ್ಗೆ ಮಹಿಳೆಯರ ಅಸಲಿ ಭಾವನೆ ಏನು? ಇಲ್ಲಿದೆ ರೋಚಕ ಮಾಹಿತಿ!

Handshake: ನಿಮ್ಮ ಹಸ್ತಲಾಘವದ ಶಕ್ತಿಗೂ, ನಿಮ್ಮ ಪ್ರೇಮ ಜೀವನಕ್ಕೂ ಇದೆ ನಿಕಟ ಸಂಬಂಧ: ಅಧ್ಯಯನ

State News
KARNATAKA

ಶಿವಮೊಗ್ಗ: ಹೊಸನಗರದ ಹಿರಿಯ ಪತ್ರಕರ್ತ ರವಿಬಿದನೂರಿಗೆ ಪ್ರತಿಷ್ಠಿತ ‘ಕರ್ಪೂರಿ ಠಾಕೂರ್ ಪ್ರಶಸ್ತಿ’

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಶಿವಮೊಗ್ಗ: ರಾಜ್ಯದ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ಮತ್ತು ವರದಿಗಾರರ ಸಂಘವು ನೀಡುವ 2026ನೇ ಸಾಲಿನ ಪ್ರತಿಷ್ಠಿತ ‘ಕರ್ಪೂರಿ ಠಾಕೂರ್…

ಚಿತ್ರದುರ್ಗ ಜಿಲ್ಲಾ ಯಾದವ (ಗೊಲ್ಲ) ಸಂಘದ ಅಧ್ಯಕ್ಷರಾಗಿ ‘ಮೀಸೆ ಮಹಲಿಂಗಪ್ಪ’ ಪುನರಾಯ್ಕೆ

BREAKING: ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್: ಅಕ್ರಮ ಅದಿರು ಸಾಗಣೆ ಪ್ರಕರಣ ಖುಲಾಸೆಗೊಳಿಸಿದ ಕೋರ್ಟ್!

ಬೆಳಗಾವಿಯಲ್ಲಿ ಎಸ್‌ಡಿಆರ್‌ಎಫ್ ಸಿಪಿಐ ನೇಣಿಗೆ ಶರಣು!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.