ಬೆಂಗಳೂರು : ರಾಜ್ಯದಲ್ಲಿ ಹೃದಯಾಘಾತದಿಂದ ಸರಣಿ ಸಾವುಗಳು ಸಂಭಾವಿಸುತ್ತಿddu ಇದೀಗ ಇಂದು ಬೆಳಿಗ್ಗೆ ಮೈಸೂರು, ದಾವಣಗೆರೆಯಲ್ಲಿ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದು, ಇದೀಗ ಬೆಂಗಳೂರಿನಲ್ಲಿ ಡ್ಯಾನ್ಸ್ ಮಾಡುತ್ತಿರುವಾಗಲೇ ಹೃದಯಾಘಾತ ದಿಂದ ವೇದಿಕೆ ಮೇಲೆ ಕುಸಿದು ಬಿದ್ದು ವ್ಯಕ್ತಿ ಸಾವನಪ್ಪಿದ್ದಾನೆ.
ಮೃತ ವ್ಯಕ್ತಿಯನ್ನು ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಸರ್ಜಾಪುರದ ಬಸವರಾಜ್ ಎಂದು ತಿಳಿದುಬಂದಿದೆ. ಬಸವರಾಜ್ ಖಾಸಗಿ ಕಂಪನಿಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದ. ಸ್ನೇಹಿತರ ಜೊತೆಗೆ ರೆಸಾರ್ಟ್ ಗೆ ತೆರಳಿದ್ದಾಗಲೇ ಈ ಒಂದು ಘಟನೆ ಸಂಭವಿಸಿದೆ. ಇಂದು ಬೆಂಗಳೂರಿನಿಂದ ಸರ್ಜಾಪುರ ಗ್ರಾಮಕ್ಕೆ ಬಸವರಾಜ್ ಶವವನ್ನು ಇದೀಗ ಶಿಫ್ಟ್ ಮಾಡಲಾಗಿದೆ.