ಬೆಂಗಳೂರು : ರಾಜ್ಯದಲ್ಲಿ ಘೋರ ಕೃತ್ಯ ಒಂದು ನಡೆದಿದ್ದು ಒಂದು ದಿನದ ನವಜಾತ ಶಿಶುವನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಶೇಷಾದ್ರಿಪುರಂ ರೈಲ್ವೆ ಪಾರ್ಲರ್ ರಸ್ತೆಯಲ್ಲಿ ನಡೆದಿದೆ.
ಶೇಷಾದ್ರಿಪುರಂ ರೈಲ್ವೆ ಪಾರ್ಲರ್ ರಸ್ತೆಯ ಬದಿಯಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿದ್ದು, ಕಸದ ತೊಟ್ಟಿಯಲ್ಲಿ ಒಂದು ದಿನದ ಗಂಡು ಮಗುವಿನ ಶವ ಪತ್ತೆಯಾಗಿದೆ. ಮಗುವಿನ ಮೃತದೇಹವನ್ನು ಸದ್ಯ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ ಸ್ಥಳಕ್ಕೆ ಶೇಷಾದ್ರಿಪುರಂ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.








