ಬೆಂಗಳೂರು : ಅರಣ್ಯ ಇಲಾಖೆ ಸಭೆ ಹಿನ್ನೆಲೆ ಬೆಂಗಳೂರಿಗೆ ಪವನ್ ಕಲ್ಯಾಣ್ ಆಗಮಿಸಿದ್ದಾರೆ. ಸಭೆ ಆರಂಭಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕೆಲ ಸಮಯ ಮಾತುಕತೆ ನಡೆಸಿದ್ದಾರೆ. ಬಳಿಕ ಮಲ್ಲೇಶ್ವರಂನಲ್ಲಿರುವ ಅರಣ್ಯ ಭವನಕ್ಕೆ ತೆರಳಿದ್ದಾರೆ. ಈ ವೇಳೆ ಪವನ್ ಕಲ್ಯಾಣ್ ಜೊತೆಗೆ ಬಂದಿದ್ದ ಆಂಧ್ರ ಪ್ರದೇಶ ಸರ್ಕಾರಿ ಅಧಿಕಾರಿ ಕಾರಿನಲ್ಲಿ ಹೆಬ್ಬಾವಿನ ಮರಿ ಪ್ರತ್ಯಕ್ಷವಾಗಿದೆ.
ಹೌದು ಇಂದು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್ ಅವರು ಬೆಂಗಳೂರಿಗೆ ಆಗಮಿಸಿದ್ದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಉಭಯ ಕುಶಲೋಪರಿ ವಿಚಾರ ನಡೆಸಿದರು ಬಳಿಕ ಮಲ್ಲೇಶ್ವರಂ ನಲ್ಲಿರುವ ಅರಣ್ಯ ಭವನಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಜೊತೆಗೆ ಸಭೆಯಲ್ಲಿ ಭಾಗವಹಿಸಲು ತೆರಳಿದರು.
ಈ ವೇಳೆ ಸರ್ಕಾರಿ ಅಧಿಕಾರಿಯೊಬ್ಬರ ಕಾರಿನೊಳಗೆ ಹೆಬ್ಬಾವಿನ ಮರಿ ಪ್ರತ್ಯಕ್ಷವಾಗಿದೆ. ಹೌದು….ಪವನ್ ಕಲ್ಯಾಣ್ ಜೊತೆಗೆ ಆಗಮಿಸಿರುವ ಆಂಧ್ರ ಪ್ರದೇಶದ ಸರ್ಕಾರಿ ಅಧಿಕಾರಿ ಕಾರಿನೊಳಗೆ ಸುಮಾರು ಒಂದರಿಂದ ಒಂದೂವರೆ ಅಡಿ ಇರುವ ಹೆಬ್ಬಾವು ಕಾಣಿಸಿಕೊಂಡಿದೆ. ಹೆಬ್ಬಾವನ್ನು ಕಾಣುತ್ತಲೇ ಅರಣ್ಯಾಧಿಕಾರಿಗಳು ಸೆರೆ ಹಿಡಿದರು. ಬಳಿಕ ಹಾವನ್ನು ತೆಗೆದುಕೊಂಡು ಹೋಗಿ ಸಚಿವ ಈಶ್ವರ್ ಖಂಡ್ರೆ ಅವರಿಗೆ ತೋರಿಸಿದರು.