ಶಿವಮೊಗ್ಗ : ಜಿಲ್ಲೆಯ ಕೇಂದ್ರ ಕಾರಾಗೃಹದಲ್ಲಿರುವ ಕೈದಿಯ ಹೊಟ್ಟೆಯೊಳಗೆ ಮೊಬೈಲ್ ಪತ್ತೆಯಾಗಿದೆ. ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ಈ ಒಂದು ಘಟನೆ ನಡೆದಿದ್ದು, ಕೈದಿ ದೌಲತ್ ಅಲಿಯಾಸ್ ಗುಂಡನ ಹೊಟ್ಟೆಯಲ್ಲಿ ಮೊಬೈಲ್ ಪತ್ತೆಯಾಗಿದೆ.
ಹೊಟ್ಟೆ ನೋವು ಎಂದಾಗ ಕೈದಿಯನ್ನು ಮೆಗನ್ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದೋಯ್ಯಲಾಯಿತು. ಈ ವೇಳೆ ಒಂದು ಇಂಚು ಅಗಲದ 3 ಇಂಚು ಉದ್ದದ ಮೊಬೈಲ್ ಹೊಟ್ಟೆಯಲ್ಲಿ ಪತ್ತೆಯಾಗಿದೆ. ಶಸ್ತ್ರ ಚಿಕಿತ್ಸೆಗು ಮುನ್ನ ಕೈದಿಯನ್ನು ಕೇಳಿದಾಗ ಕಲ್ಲು ನುಂಗಿದ್ದೇನೆ ಎಂದು ಹೇಳಿದ್ದಾನೆ. ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದಾಗ ಮೊಬೈಲ್ ಪತ್ತೆ ಆಗಿರುವುದು ಬೆಳಕಿಗೆ ಬಂದಿದೆ. ಬಳಿಕ ಆಸ್ಪತ್ರೆ ವೈದ್ಯರು ಸರ್ಜರಿ ಮೂಲಕ ಮೊಬೈಲ್ ಅನ್ನು ಹೊರಗಡೆ ತೆಗೆದಿದ್ದಾರೆ.