Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಪೋಷಕರೇ ಗಮನಿಸಿ : ನಿಮ್ಮ ಮಕ್ಕಳಿಗೆ ತಪ್ಪದೇ ಹೇಳಿಕೊಡಲೇಬೇಕು ಈ ವಿಷಯಗಳು.!

03/04/2026 8:06 AM

ಇಂದು ‘ಗುಡ್ ಫ್ರೈಡೇ’; ಯೇಸು ಕ್ರಿಸ್ತನ ಬಲಿದಾನದ ದಿನವನ್ನು ‘ಗುಡ್’ ಎಂದು ಕರೆಯುವುದು ಏಕೆ? ಇಲ್ಲಿದೆ ಈ ಪವಿತ್ರ ದಿನದ ಆಳವಾದ ಅರ್ಥ ಮತ್ತು ರಹಸ್ಯ!

03/04/2026 8:01 AM

Weather Update : ರಾಜ್ಯದಲ್ಲಿ ಇಂದು ಗುಡುಗು ಸಹಿತ ಭಾರೀ ಮಳೆ ಮುನ್ಸೂಚನೆ :15 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಣೆ!

03/04/2026 7:48 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : `ಸೀನು’ ಬಂದಾಗ ಮೂಗು ಗಟ್ಟಿಯಾಗಿ ಹಿಡಿದ ವ್ಯಕ್ತಿಯ ಶ್ವಾಸಕೋಶದಲ್ಲಿ ಬಿತ್ತು ರಂಧ್ರ !
INDIA

SHOCKING : `ಸೀನು’ ಬಂದಾಗ ಮೂಗು ಗಟ್ಟಿಯಾಗಿ ಹಿಡಿದ ವ್ಯಕ್ತಿಯ ಶ್ವಾಸಕೋಶದಲ್ಲಿ ಬಿತ್ತು ರಂಧ್ರ !

By kannadanewsnow5726/02/2026 6:44 AM

ದೈನಂದಿನ ಜೀವನದಲ್ಲಿ ನಾವು ಸಣ್ಣಪುಟ್ಟ ವಿಷಯಗಳನ್ನು ನಿರ್ಲಕ್ಷಿಸುತ್ತೇವೆ. ನಾಲ್ಕು ಜನರ ಮಧ್ಯೆ ಇದ್ದಾಗ ಸೀನು ಬಂದರೆ ಮುಜುಗರ ಎಂದು ಮೂಗು ಅಥವಾ ಬಾಯಿ ಮುಚ್ಚಿ ಅದನ್ನು ತಡೆಯಲು ಪ್ರಯತ್ನಿಸುತ್ತೇವೆ. “ಒಂದು ಸೀನು ತಡೆದರೆ ಏನಾಗುತ್ತೆ?” ಎಂದು ನಾವು ಅಂದುಕೊಳ್ಳಬಹುದು, ಆದರೆ ಬ್ರಿಟಿಷ್ ವ್ಯಕ್ತಿಯೊಬ್ಬನಿಗೆ ಎದುರಾದ ಈ ಅನುಭವ ಕೇಳಿದರೆ ನೀವು ಬೆಚ್ಚಿಬೀಳುತ್ತೀರಿ.

ಚಾಲನೆ ಮಾಡುವಾಗ ಸೀನನ್ನು ತಡೆದಿದ್ದರಿಂದ ಆ ವ್ಯಕ್ತಿಯ ಗಂಟಲಿನಲ್ಲಿ ರಂಧ್ರ ಉಂಟಾಗಿ, ಗಾಳಿಯು ಶ್ವಾಸಕೋಶದೊಳಗೆ ನುಗ್ಗಿದೆ. ಇದು ವೈದ್ಯಕೀಯ ಲೋಕದಲ್ಲೇ ಅತ್ಯಂತ ಅಪರೂಪದ ಪ್ರಕರಣವಾಗಿದ್ದು, BMJ Case Reports ಜರ್ನಲ್‌ನಲ್ಲಿ ಪ್ರಕಟವಾಗಿದೆ.

ಸಾವಿನ ಹತ್ತಿರ ಹೋಗಿ ಬಂದ ವ್ಯಕ್ತಿ

2023ರಲ್ಲಿ ಬ್ರಿಟನ್‌ನ 30 ವರ್ಷದ ಆರೋಗ್ಯವಂತ ವ್ಯಕ್ತಿಯೊಬ್ಬ ಕಾರು ಚಲಾಯಿಸುತ್ತಿದ್ದಾಗ, ಅಲರ್ಜಿಯಿಂದಾಗಿ ಸೀನು ಬಂದಿದೆ. ಸೀನನ್ನು ತಡೆಯಲು ಆತ ತನ್ನ ಮೂಗನ್ನು ಗಟ್ಟಿಯಾಗಿ ಹಿಡಿದು ಬಾಯಿಯನ್ನು ಮುಚ್ಚಿಕೊಂಡಿದ್ದಾನೆ. ಸೀನು ಏನೋ ನಿಂತಿತು, ಆದರೆ ತಕ್ಷಣವೇ ಆತನ ಗಂಟಲಿನಲ್ಲಿ ಅಸಹನೀಯ ನೋವು ಕಾಣಿಸಿಕೊಂಡಿದೆ. ಗಂಟಲಿನ ಒಳಗೆ ಏನೋ ಒಡೆದಂತ ಅನುಭವವಾಗಿ, ಕುತ್ತಿಗೆ ಊದಿಕೊಳ್ಳಲಾರಂಭಿಸಿತು ಮತ್ತು ಉಸಿರಾಟ ಕಷ್ಟವಾಯಿತು.

ಆಸ್ಪತ್ರೆಗೆ ದಾಖಲಾದಾಗ ನಡೆಸಿದ ಸಿಟಿ (CT) ಸ್ಕ್ಯಾನ್‌ನಲ್ಲಿ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಆತನ ಟ್ರಾಕಿಯಾ (Trachea – ಉಸಿರಾಟದ ನಳಿಕೆ) ದಲ್ಲಿ 2×2 ಮಿಲಿಮೀಟರ್ ಗಾತ್ರದ ರಂಧ್ರವಾಗಿತ್ತು. ಇದರಿಂದಾಗಿ ಗಾಳಿಯು ಎದೆ ಮತ್ತು ಶ್ವಾಸಕೋಶದ ಮಧ್ಯದ ಭಾಗಕ್ಕೆ (Pneumomediastinum) ನುಗ್ಗಿತ್ತು. ಇದು ಪ್ರಾಣಕ್ಕೆ ಕುತ್ತು ತರುವಂತಹ ಸ್ಥಿತಿಯಾಗಿತ್ತು.

ವಿಜ್ಞಾನ ಏನು ಹೇಳುತ್ತದೆ?

ಈ ವರದಿಯ ಪ್ರಮುಖ ಲೇಖಕರಾದ ಡಾ. ರಾಸಾದ್ಸ್ ಮಿಸಿರೊವ್ಸ್ ಅವರ ಪ್ರಕಾರ, “ಇದು ನಮಗೆ ಆಶ್ಚರ್ಯ ತಂದ ಪ್ರಕರಣ. ಇಂತಹ ಕೇಸ್ ನಾವು ಹಿಂದೆಂದೂ ನೋಡಿರಲಿಲ್ಲ.” ಸೀನನ್ನು ಬಲವಂತವಾಗಿ ತಡೆದಾಗ ಉಸಿರಾಟದ ನಾಳದ ಮೇಲಿನ ಒತ್ತಡವು ಸಾಮಾನ್ಯಕ್ಕಿಂತ 5 ರಿಂದ 24 ಪಟ್ಟು ಹೆಚ್ಚಾಗುತ್ತದೆ ಎಂದು ವೈದ್ಯರು ವಿವರಿಸಿದ್ದಾರೆ.

ಈ ವ್ಯಕ್ತಿಯ ವಿಷಯದಲ್ಲಿ ಒತ್ತಡವು 20 ಪಟ್ಟು ಹೆಚ್ಚಾಗಿದ್ದರಿಂದ ಶ್ವಾಸನಾಳದಲ್ಲಿ ರಂಧ್ರ ಉಂಟಾಗಿತ್ತು. ಅದೃಷ್ಟವಶಾತ್, 48 ಗಂಟೆಗಳ ಕಾಲ ವೈದ್ಯರ ನಿಗಾದಲ್ಲಿದ್ದ ವ್ಯಕ್ತಿ, ಯಾವುದೇ ಶಸ್ತ್ರಚಿಕಿತ್ಸೆಯಿಲ್ಲದೆ 5 ವಾರಗಳ ನಂತರ ಗುಣಮುಖನಾದನು.

SHOCKING: A man who held his nose tightly while sneezing suffered a hole in his lung!.!
Share. Facebook Twitter LinkedIn WhatsApp Email

Related Posts

ಇಂದು ‘ಗುಡ್ ಫ್ರೈಡೇ’; ಯೇಸು ಕ್ರಿಸ್ತನ ಬಲಿದಾನದ ದಿನವನ್ನು ‘ಗುಡ್’ ಎಂದು ಕರೆಯುವುದು ಏಕೆ? ಇಲ್ಲಿದೆ ಈ ಪವಿತ್ರ ದಿನದ ಆಳವಾದ ಅರ್ಥ ಮತ್ತು ರಹಸ್ಯ!

03/04/2026 8:01 AM1 Min Read

​ಅಮೆರಿಕ ಅಟಾರ್ನಿ ಜನರಲ್ ಪಮ್ ಬೋಂಡಿಗೆ ಟ್ರಂಪ್ ಕೊಕ್! ತಮ್ಮ ವೈಯಕ್ತಿಕ ವಕೀಲನಿಗೇ ಪಟ್ಟ ಕಟ್ಟಿದ ಅಧ್ಯಕ್ಷ; ಶ್ವೇತಭವನದ ದಿಢೀರ್ ನಿರ್ಧಾರಕ್ಕೆ ಜಗತ್ತೇ ಬೆರಗು!

03/04/2026 7:47 AM1 Min Read

ಭಾರತಕ್ಕೆ ಇಂಧನ ಭದ್ರತೆಯ ಭರವಸೆ ನೀಡಿದ ರಷ್ಯಾ: ತೈಲ ಮತ್ತು ನೈಸರ್ಗಿಕ ಅನಿಲ ಪೂರೈಕೆ ಹೆಚ್ಚಿಸಲು ಸಮ್ಮತಿ !

03/04/2026 7:39 AM1 Min Read
Recent News

ALERT : ಪೋಷಕರೇ ಗಮನಿಸಿ : ನಿಮ್ಮ ಮಕ್ಕಳಿಗೆ ತಪ್ಪದೇ ಹೇಳಿಕೊಡಲೇಬೇಕು ಈ ವಿಷಯಗಳು.!

03/04/2026 8:06 AM

ಇಂದು ‘ಗುಡ್ ಫ್ರೈಡೇ’; ಯೇಸು ಕ್ರಿಸ್ತನ ಬಲಿದಾನದ ದಿನವನ್ನು ‘ಗುಡ್’ ಎಂದು ಕರೆಯುವುದು ಏಕೆ? ಇಲ್ಲಿದೆ ಈ ಪವಿತ್ರ ದಿನದ ಆಳವಾದ ಅರ್ಥ ಮತ್ತು ರಹಸ್ಯ!

03/04/2026 8:01 AM

Weather Update : ರಾಜ್ಯದಲ್ಲಿ ಇಂದು ಗುಡುಗು ಸಹಿತ ಭಾರೀ ಮಳೆ ಮುನ್ಸೂಚನೆ :15 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಣೆ!

03/04/2026 7:48 AM

​ಅಮೆರಿಕ ಅಟಾರ್ನಿ ಜನರಲ್ ಪಮ್ ಬೋಂಡಿಗೆ ಟ್ರಂಪ್ ಕೊಕ್! ತಮ್ಮ ವೈಯಕ್ತಿಕ ವಕೀಲನಿಗೇ ಪಟ್ಟ ಕಟ್ಟಿದ ಅಧ್ಯಕ್ಷ; ಶ್ವೇತಭವನದ ದಿಢೀರ್ ನಿರ್ಧಾರಕ್ಕೆ ಜಗತ್ತೇ ಬೆರಗು!

03/04/2026 7:47 AM
State News
KARNATAKA

ALERT : ಪೋಷಕರೇ ಗಮನಿಸಿ : ನಿಮ್ಮ ಮಕ್ಕಳಿಗೆ ತಪ್ಪದೇ ಹೇಳಿಕೊಡಲೇಬೇಕು ಈ ವಿಷಯಗಳು.!

By kannadanewsnow5703/04/2026 8:06 AM KARNATAKA 2 Mins Read

ಸಾಮಾನ್ಯವಾಗಿ ನಾವು ನಮ್ಮ ಮಕ್ಕಳಿಗೆ “ಅಪರಿಚಿತರ ಜೊತೆ ಮಾತನಾಡಬೇಡ”, “ಅಪರಿಚಿತರು ಏನಾದರೂ ಕೊಟ್ಟರೆ ತಿನ್ನಬೇಡ” ಎಂದು ಎಚ್ಚರಿಸುತ್ತೇವೆ. ಆದರೆ ಇತ್ತೀಚಿನ…

Weather Update : ರಾಜ್ಯದಲ್ಲಿ ಇಂದು ಗುಡುಗು ಸಹಿತ ಭಾರೀ ಮಳೆ ಮುನ್ಸೂಚನೆ :15 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಣೆ!

03/04/2026 7:48 AM

ಅಂಚೆ ಕಚೇರಿಯ ಈ ಯೋಜನೆಯಲ್ಲಿ ಹಣ ಹೂಡಿ ಮಾಡಿ : ಪ್ರತಿ ತಿಂಗಳು ಪಡೆಯಿರಿ ₹20,000 ವರೆಗೆ ಆದಾಯ!

03/04/2026 7:42 AM

GOOD NEWS : ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿದೆ ಈ 21 ಸೌಲಭ್ಯಗಳು.!

03/04/2026 7:29 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.