ಧಾರವಾಡ : ಧಾರವಾಡದಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು, ಥಿನ್ನರ್ ಬಾಟಲಿಯಿಂದ ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಈ ಒಂದು ಘಟನೆಯಲ್ಲಿ ನಾಲ್ಕು ವರ್ಷದ ಬಾಲಕ ಸಾವನಪ್ಪಿದ್ದಾನೆ. ಮಗನನ್ನು ರಕ್ಷಿಸಲು ಬಂದ ತಂದೆಗೆ ಗಂಭೀರವಾದ ಗಾಯಗಳಾಗಿವೆ. ಧಾರವಾಡದ ಸಂತೋಷ್ ನಗರದಲ್ಲಿ ನಿನ್ನೆ ಈ ಒಂದು ಘಟನೆ ಸಂಭವಿಸಿದೆ.
ನಾಲ್ಕು ವರ್ಷದ ಬಾಲಕ ಅಗಸ್ತ್ಯ ಸಾವನಪ್ಪಿದ್ದು ಆತನ ತಂದೆ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಾಲಕನ ಅಜ್ಜಿ ಒಲೆ ಹೊತ್ತಿಸಲು ಥಿನ್ನರ್ ಬಳಸಿದ್ದಾರೆ. ಈ ವೇಳೆ ದಡೀರನೆ ಬೆಂಕಿ ಹೊತ್ತಿಕೊಂಡು ಬೆಂಕಿ ಇಡೀ ಮನೆ ಆವರಿಸಿದೆ ಬೆಂಕಿಯಲ್ಲಿ ಸಿಲುಕಿ ಬಾಲಕ ಅಗಸ್ತ್ಯ ಪರದಾಡುತ್ತಿದ್ದ ರಕ್ಷಣೆಗೆ ಬಂದ ತಂದೆ ಚಂದ್ರಕಾಂತಗು ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಇಬ್ಬರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಬಾಲಕ ಸಾವನಪ್ಪಿದ್ದಾನೆ. ಸದ್ಯದ ತಂದೆ ಚಂದ್ರಕಾಂತ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.