ಬಳ್ಳಾರಿ : ಬಳ್ಳಾರಿ ಜಿಲ್ಲೆಗೆ ಭಯಾನಕ ಮುಸುಕುಧಾರಿ ಗ್ಯಾಂಗ್ ವೊಂದು ಎಂಟ್ರಿ ಕೊಟ್ಟಿದ್ದು, ಸಿನಿಮೀಯ ರೀತಿಯಲ್ಲಿ ಐವರು ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಬಳ್ಳಾರಿಯಲ್ಲಿ ಐವರು ಕಳ್ಳರ ಗ್ಯಾಂಗ್ ವೊಂದು ಮುಸುಕು ಹಾಕಿಕೊಂಡು ಕಳ್ಳತನ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬಳ್ಳಾರಿ ನಗರದಲ್ಲಿ ಕೈಯಲ್ಲಿ ಮಾರಕಾಸ್ತ್ರಿ ಹಿಡಿದು, ಮುಸುಕುಧಾರಿಯಾಗಿ ರಾತ್ರಿ 11 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಈ ಕಳ್ಳರ ಗ್ಯಾಂಗ್ ಓಡಾಡುತ್ತಿದೆ. ದಿವಾಕರ್ ಬಾಬು ಲೇಔಟ್ ನ ಮನೆಯಲ್ಲಿ 12 ತೊಲ ಚಿನ್ನ ಕಳ್ಳತನ, ಅದೇ ದಿನ ಸುಷ್ಮಾ ಬಡಾವಣೆಯಲ್ಲೂ ಲಕ್ಷಾಂತರ ರೂ. ಕಳ್ಳತನ ಮಾಡಿ ಗ್ಯಾಂಗ್ ಪರಾರಿಯಾಗಿದೆ. ಹೊರ ರಾಜ್ಯದ ಖದೀಮರ ಗ್ಯಾಂಗ್ ಎಂದು ಶಂಕಿಸಲಾಗಿದೆ.