ಬೆಂಗಳೂರು : ಸಾಮಾನ್ಯವಾಗಿ ಹುಡುಗರು ಬರ್ತಡೇ, ಮದುವೆ ಇನ್ಯಾವುದೇ ಸಮಾರಂಭಕ್ಕೆ ತಮ್ಮ ಆತ್ಮೀಯ ಗೆಳೆಯರನ್ನು ಮುಂಚಿತವಾಗಿ ಕರಿಸುತ್ತಾರೆ. ಅದೇ ರೀತಿಯಾಗಿ ಬೆಂಗಳೂರಿನಲ್ಲಿ ಬರ್ತಡೆಗೆ ಎಂದು ಸ್ನೇಹಿತ ಒಬ್ಬ ತನ್ನ ಗೆಳೆಯನಿಗೆ ಆಹ್ವಾನ ನೀಡಿದ್ದಾನೆ. ಆದರೆ ಆತ ಬರ್ತಡೇಗೆ ಎಂದು ಬಂದು ಸ್ನೇಹಿತನ ಮದುವೆಗೆ ಎಂದು ತೆಗೆದಿಟ್ಟಿದ ಚಿನ್ನಾಭರಣವನ್ನೇ ಕದ್ದಿರುವ ಘಟನೆ ಬೆಂಗಳೂರಿನ ಸುಬ್ರಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹೌದು ಚಿನ್ನಾಭರಣ ಕದ್ದ ಆರೋಪಿಯನ್ನು ಭರತ್ ಎಂದು ಗುರುತಿಸಲಾಗಿದ್ದು, ಭರತ್ , ಸ್ನೇಹಿತ ಮಣಿ ಇಬ್ಬರು ಆತ್ಮೀಯ ಸ್ನೇಹಿತರು .ಏರೋನಾಟಿಕ್ಸ್ ಇಂಜಿನಿಯರ್ ವ್ಯಾಸಂಗ ಮಾಡಿದ್ದ ಭರತ್, ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡಿ ಕೈ ತುಂಬಾ ಸಂಬಳ ಪಡೆಯುತ್ತಿದ್ದ. ಉತ್ತರಹಳ್ಳಿಯ ಮೂಕಾಂಬಿಕ ನಗರದ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದ ಡಿಸೆಂಬರ್ 4 ರಂದು ಭರತ್ ಬರ್ತಡೇ ಇದ್ದು ಮಣಿ ಮನೆಯಲ್ಲಿ ಯೇ ಸೆಲೆಬ್ರೇಷನ್ ಮಾಡೋದಕ್ಕೆ ಪ್ಲಾನ್ ಮಾಡಿದ್ದಾರೆ.
ಭರತ್ ರಾತ್ರಿ ಮಣಿಯ ಮನೆಯಲ್ಲಿ ವಾಸ್ತವ್ಯ ಹೂಡಿದ್ದ. ಮಣಿಗೆ ಮದುವೆ ನಿಗದಿಯಾಗಿದ್ದು ಇದಕ್ಕಾಗಿ ಮನೆಯವರು 453 ಗ್ರಾಂ ಖರೀದಿಸಿ ಇಟ್ಟಿದ್ದರು. ಇದನ್ನ ಅರಿತ ಆರೋಪಿಯು ಮಧ್ಯರಾತ್ರಿ ಎಲ್ಲರೂ ಮಲಗಿರುವಾಗ ಬೀರುವಿನಲ್ಲಿದ್ದ ಚಿನ್ನ ಎಗರಿಸಿದ್ದಾನೆ. ಬಳಿಕ ಅವರೊಂದಿಗೆ ಥಿಯೇಟರ್ ಗೆ ತಳಿ ಪುಷ್ಪ 2 ಸಿನಿಮಾ ವೀಕ್ಷಿಸಿದ್ದಾನೆ. ಮರುದಿನ ಮನೆಯವರು ಚಿನ್ನಾಭರಣ ಕಳ್ಳತನವಾಗಿರುವುದು ಕುರಿತು ಪ್ರಸ್ತಾಪಿಸಿದ್ದಾರೆ.
ಸ್ವತಹ ಆರೋಪಿ ಬರತ್ತನೆ ಪೊಲೀಸ್ ಠಾಣೆಗೆ ಹೋಗಿ ಮಣಿಯಿಂದ ದೂರು ಕೊಡಿಸಿದ್ದಾನೆ.ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪಾರ್ಟಿ ಮಾಡಲು ಮನೆಗೆ ಮೂವರು ಸ್ನೇಹಿತರನ್ನ ತೀವ್ರ ವಿಚಾರಣೆಗೊಳಪಡಿಸಿದಾಗ ಭರತ್ ದುರಾಸೆಗೆ ಒಳಪಟ್ಟು ಕಳ್ಳತನ ಮಾಡಿರುವುದನ್ನ ಒಪ್ಪಿಕೊಂಡಿದ್ದಾನೆ.