ಬಾಗಲಕೋಟೆ : ಬಾಗಲಕೋಟೆಯಲ್ಲಿ ಸಾವಿನಲ್ಲು ದಂಪತಿಗಳು ಒಂದಾಗಿರುವ ಘಟನೆ ವರದಿಯಾಗಿದೆ. ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ಶಶಿಧರ್ ಪತ್ತಾರ್ (40) ಸಾವನ್ನಪ್ಪಿದ್ದಾರೆ.
ಪತಿಯ ಸಾವಿನ ಸುದ್ದಿ ತಿಳಿದು ಶಶಿಧರ್ ಅವರ ಪತ್ನಿ ಸರೋಜಾ ಅವರು ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬಿಳಗಿಯ ನಿವಾಸಿ ಆಗಿರುವ ಇವರು ಸಾವಿನಲ್ಲೂ ಕೂಡ ಒಂದಾಗಿದ್ದಾರೆ. ಕಳೆದ 15 ವರ್ಷಗಳ ಹಿಂದೆ ಇಬ್ಬರ ಮದುವೆ ಆಗಿತ್ತು.
		







