ಮೈಸೂರು : ರೈಲು ಚಲಿಸುತ್ತಿರುವಾಗಲೇ ಪ್ರಯಾಣಿಕರಿಗೆ ಚಾಕು ತೋರಿಸಿ ಐವರು ದರೋಡೆಕೋರರು ದರೋಡೆ ಮಾಡಿರುವ ಘಟನೆ ಮೈಸೂರು ಬೆಂಗಳೂರು ರೈಲಿನಲ್ಲಿ ನಿನ್ನೆ ರಾತ್ರಿ ಈ ಒಂದು ಘಟನೆ ನಡೆದಿದೆ.
ಮೈಸೂರಿನಲ್ಲಿ ರೈಲು ಹತ್ತಿದ ಐವರು ದರೋಡೆಕೋರರಿಂದ ಈ ಒಂದು ಕೃತ್ಯ ನಡೆದಿದ್ದು, ಪ್ರಯಾಣಿಕರಿಗೆ ಚಾಕು ತೋರಿಸಿ ಹಣ ಮೊಬೈಲ್ ಗಳನ್ನು ದರೋಡೆ ಮಾಡಿದ್ದಾರೆ. ಈ ವಿಚಾರ ಗೊತ್ತಾಗಿ ಕೂಡಲೇ ಪೊಲೀಸರು ಚನ್ನಪಟ್ಟಣ ಬಳಿ ರೈಲು ಹತ್ತಿದ್ದಾರೆ.
ಪೊಲೀಸರು ಬಂದ ಮಾಹಿತಿ ತಿಳಿದು ಪೊಲೀಸರ ಮೇಲೆ ಆರೋಪಿಗಳು ಹಲ್ಲೆ ಮಾಡಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಕೂಡಲೇ ಚಲಿಸುತ್ತಿದ್ದ ರೈಲಿನಿಂದಲೇ ದರೋಡೆಕೋರರು ಜಿಗಿದು ಪರಾರಿಯಾಗಿದ್ದಾರೆ. ಘಟನೆ ಕುರಿತಂತೆ ಮೈಸೂರಿನ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.