ಕೊಪ್ಪಳ : ಕೊಪ್ಪಳದಲ್ಲಿ ಶಾಕಿಂಗ್ ಘಟನೆ ನಡೆದಿದ್ದು, ಅಂಗನವಾಡಿಯಲ್ಲಿ ಆಟ ಆಡುತ್ತಿದ್ದಾಗ ಕುಸಿದು ಬಿದ್ದು 5 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ತಾಲೂಕಿನ ತಾಲೂಕಿನ ಬಳೂಟಗಿಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಆಟವಾಡುತ್ತಿದ್ದಾಗ ಕುಸಿದು ಬುದ್ದು ಅಲಿಯಾ (5) ಎನ್ನುವ ಬಾಲಕಿ ಸಾವನ್ನಪ್ಪಿದ್ದಾಳೆ.
ಕೂಡಲೇ ಬಾಲಕಿಯನ್ನು ದೊಟಿಹಾಳ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.ಆಸ್ಪತ್ರೆಗೆ ಸಾಗಿಸುವ ವೇಳೆಯೇ ಅಲಿಯ ಮೊಹಮ್ಮದ್ ರಿಯಾಜ್ ಸಾವನಪ್ಪಿದ್ದಾಳೆ. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಬಾಲಕಿ ಸಾವನಪ್ಪಿದ್ದಾಳೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.