ಕೆಎನ್ಎನ್ಡಿಜಿಟಲ್ಡೆಸ್ಕ್: ಭಾರತದಲ್ಲಿ ಅಥವಾ ಬೇರೆಡೆ, ಜನರು ಆರೋಗ್ಯಕರ ಆಹಾರಕ್ಕಿಂತ ಜಂಕ್ ಫುಡ್ ಅನ್ನು ಇಷ್ಟಪಡುತ್ತಾರೆ. ಜಂಕ್ ಫುಡ್ ಗಳನ್ನು ತಿನ್ನುವುದರಿಂದ ನಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ ಅಂತ ಹಲವು ಮಂದಿಗೆ ತಿಳಿದಿದ್ದರು ಕೂಡ ಅದನ್ನು ತಿನ್ನುವುದನ್ನು ಬಿಡುವುದಿಲ್ಲ.
ಈ ನಡುವೆ ತೆಲಂಗಾಣದಲ್ಲಿ ಪಾನಿಪೂರಿಯಿಂದಾಗಿ ಸುಮಾರು 2,700 ಟೈಫಾಯಿಡ್ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ನಿರ್ದೇಶಕ ಶ್ರೀನಿವಾಸ್ ತಿಳಿಸಿದ್ದಾರೆ. ಟೈಫಾಯಿಡ್ ಗೆ ‘ಪಾನಿಪುರಿ ರೋಗ’ ಎಂದು ಹೆಸರಿಡಲಾಗಿದೆ. ಕಾಮಾಲೆ ಮತ್ತು ಕರುಳಿನಲ್ಲಿ ಉರಿಯೂತಕ್ಕೆ ಕಾರಣವಾಗುವ ಪಾನಿಪೂರಿಯನ್ನು ಹೆಚ್ಚು ಸೇವಿಸದಿರುವುದು ಉತ್ತಮ ಎಂದು ಆರೋಗ್ಯ ನಿರ್ದೇಶಕ ಶ್ರೀನಿವಾಸ್ ಸಲಹೆ ನೀಡಿದ್ದಾರೆ.
ಪಾನಿ ಪೂರಿಯನ್ನು ಅತಿಯಾಗಿ ತಿನ್ನುವುದು ಜೀರ್ಣಕ್ರಿಯೆಯಲ್ಲಿ ಅನೇಕ ಅಡೆತಡೆಗಳಿಗೆ ಕಾರಣವಾಗಬಹುದು. ಅವುಗಳನ್ನು ಅತಿಯಾಗಿ ತಿನ್ನುವುದರಿಂದ ಕರುಳಿನಲ್ಲಿ ಉರಿಯೂತವೂ ಉಂಟಾಗಬಹುದು. ಅದನ್ನು ತಿನ್ನುವುದರಿಂದ ಅಪಾಯವು ತುಂಬಾ ಹೆಚ್ಚಾಗಿರುತ್ತದೆ, ಆದ್ದರಿಂದಲೇ ಆರೋಗ್ಯ ತಜ್ಞರು ಚಳಿಗಾಲ ಮತ್ತು ಮಳೆಗಾಲದಲ್ಲಿ ಪಾನಿಪುರಿ ತಿನ್ನಬೇಡಿ ಎಂದು ಸಲಹೆ ನೀಡುತ್ತಾರೆ.
ಇವು ಟೈಫಾಯಿಡ್ ಮಾತ್ರವಲ್ಲದೆ, ದೇಹದಲ್ಲಿ ವಿವಿಧ ರೀತಿಯ ಸಮಸ್ಯೆಗಳನ್ನು ಉಂಟುಮಾಡಬಹುದು. . ಅತಿಯಾದ ಸೇವನೆಯಿಂದಾಗಿ ಅತಿಸಾರ ಉಂಟಾಗುವ ಅಪಾಯವು ತುಂಬಾ ಹೆಚ್ಚಾಗಿರುತ್ತದೆ. ಮಕ್ಕಳು ಹೆಚ್ಚು ತೆಗೆದುಕೊಂಡರೆ ಅದು ಖಂಡಿತವಾಗಿಯೂ ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ ಎನ್ನಲಾಗಿದೆ.