ಬದೌನ್ : ನಾಯಿ ಕಡಿತದಿಂದ ರೇಬೀಸ್’ಗೆ ತುತ್ತಾಗಿ ಸಾವನ್ನಪ್ಪಿರುವ ಸುದ್ದಿಯನ್ನ ನೀವು ಕೇಳಿರಬೇಕು. ಆದ್ರೆ, ಉತ್ತರ ಪ್ರದೇಶದ ಬದೌನ್’ನಲ್ಲಿ ಆಘಾತಕಾರಿ ಮತ್ತು ಹೃದಯವಿದ್ರಾವಕ ಪ್ರಕರಣವೊಂದು ಬೆಳಕಿಗೆ ಬಂದಿದೆ. ನಾಯಿಯೊಂದು 2 ವರ್ಷದ ಮಗುವನ್ನ ನೆಕ್ಕಿದ್ದು, ನಂತ್ರ ನಾಯಿಯ ಲಾಲಾರಸದಿಂದ ಉಂಟಾಗುವ ಸೋಂಕಿನಿಂದ ಮಗು ಸಾವನ್ನಪ್ಪಿದೆ.
ಒಂದು ತಪ್ಪು, ಪುಟ್ಟ ಜೀವ ಬಲಿಯಾಯಿತು!
ಬದೌನ್’ನ ಸಹಸ್ವಾನ್ ಪ್ರದೇಶದ ನಿವಾಸಿ ಮೊಹಮ್ಮದ್ ಅದ್ನಾನ್ ಎಂಬ 2 ವರ್ಷದ ಮಗುವಿನ ಕಾಲಿನಲ್ಲಿ ಗಾಯವಾಗಿತ್ತು. ಸುಮಾರು ಒಂದು ತಿಂಗಳ ಹಿಂದೆ, ನಾಯಿಯೊಂದು ಆ ಗಾಯವನ್ನ ನೆಕ್ಕಿತು. ಇದರ ನಂತರ, ಮಗುವಿಗೆ ಹೈಡ್ರೋಫೋಬಿಯಾ (ನೀರಿನ ಭಯ) ಮತ್ತು ನೀರು ಕುಡಿಯಲು ನಿರಾಕರಿಸುವಂತಹ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದವು. ಬಳಿಕ ಮಗುವಿನ ಸ್ಥಿತಿ ಹದಗೆಟ್ಟಾಗ, ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದ್ರೆ, ಅಲ್ಲಿ ಮಗು ಮರುದಿನ ಸಾವನ್ನಪ್ಪಿದೆ. ಇನ್ನು ಸಾವಿಗೆ ಕಾರಣ ರೇಬೀಸ್ ಎಂದು ವೈದ್ಯರು ಹೇಳಿದ್ದಾರೆ.
ಈ ಘಟನೆಯ ನಂತರ, ಇಡೀ ಗ್ರಾಮದಲ್ಲಿ ಭೀತಿ ಹರಡಿದೆ. ಮುನ್ನೆಚ್ಚರಿಕೆಯಾಗಿ, ಹಳ್ಳಿಯ ಹಲವು ಜನರು ಆಸ್ಪತ್ರೆಗೆ ಓಡಿದ್ದು, ಎಲ್ಲರಿಗೂ ರೇಬೀಸ್ ಇಂಜೆಕ್ಷನ್ ನೀಡಲಾಯಿತು.
ನಾಯಿ ಲಾಲಾರಸ ಏಕೆ ತುಂಬಾ ಅಪಾಯಕಾರಿ.?
ಬದೌನ್ ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಪ್ರಶಾಂತ್ ತ್ಯಾಗಿ ನಾಯಿ ಕಚ್ಚುವಿಕೆ ಅಥವಾ ನೆಕ್ಕುವಿಕೆಯನ್ನ ಎಂದಿಗೂ ಲಘುವಾಗಿ ಪರಿಗಣಿಸಬಾರದು ಎಂದು ಎಚ್ಚರಿಸಿದ್ದಾರೆ. ನಾಯಿ, ಬೆಕ್ಕು ಅಥವಾ ಮಂಗದಂತಹ ಪ್ರಾಣಿಗಳ ಲಾಲಾರಸದಲ್ಲಿ ರೇಬೀಸ್ ವೈರಸ್ ಇರಬಹುದು, ಅದು ಯಾವುದೇ ಗಾಯ ಅಥವಾ ಲೋಳೆಯ ಪೊರೆಯೊಂದಿಗೆ (ಕಣ್ಣು, ಬಾಯಿ, ಮೂಗು) ಸಂಪರ್ಕಕ್ಕೆ ಬಂದರೆ ಮನುಷ್ಯರಿಗೆ ಸೋಂಕನ್ನ ಹರಡಬಹುದು ಎಂದು ಅವರು ಹೇಳಿದರು.
ರೇಬೀಸ್ ಜೊತೆಗೆ, ನಾಯಿ ಲಾಲಾರಸವು ಅನೇಕ ರೀತಿಯ ಅಪಾಯಕಾರಿ ಬ್ಯಾಕ್ಟೀರಿಯಾಗಳನ್ನ ಸಹ ಹೊಂದಿರುತ್ತದೆ, ಇದು ಸಣ್ಣ ಗಾಯವನ್ನ ಸಹ ಗಂಭೀರಗೊಳಿಸುತ್ತದೆ.
ಪಾಶ್ಚುರೆಲ್ಲಾ ಮಲ್ಟೋಸಿಡಾ : ಇದು ಗಾಯವನ್ನು ಗಂಭೀರಗೊಳಿಸುವ ಸಾಮಾನ್ಯ ಬ್ಯಾಕ್ಟೀರಿಯಾವಾಗಿದೆ.
ಕ್ಯಾಪ್ನೋಸೈಟೋಫಗಾ ಕ್ಯಾನಿಮೋರ್ಸಸ್ : ಇದು ದುರ್ಬಲಗೊಂಡ ರೋಗನಿರೋಧಕ ಶಕ್ತಿ ಹೊಂದಿರುವ ಜನರಲ್ಲಿ ರಕ್ತದ ಸೋಂಕನ್ನು (ಸೆಪ್ಸಿಸ್) ಉಂಟುಮಾಡಬಹುದು.
ಸ್ಟ್ಯಾಫಿಲೋಕೊಕಸ್ ಔರಿಯಸ್ : ಇದು ಚರ್ಮದ ಸೋಂಕುಗಳಿಗೆ ಕಾರಣವಾಗುತ್ತದೆ ಮತ್ತು ಕೆಲವೊಮ್ಮೆ ಪ್ರತಿಜೀವಕ-ನಿರೋಧಕವಾಗಿರಬಹುದು.
BREAKING: ಎಡಗೈಗೆ 6%, ಬಲ ಸಮುದಾಯಕ್ಕೆ 6%, ಸ್ಪೃಶ್ಯ ಸಮುದಾಯಕ್ಕೆ 5% ಮೀಸಲಾತಿ: ಸಿಎಂ ಸಿದ್ಧರಾಮಯ್ಯ ಘೋಷಣೆ
BREAKING : ಅಮಿತ್ ಶಾ ಮಂಡಿಸಿದ 3 ಮಸೂದೆಗಳು ‘ಜಂಟಿ ಸಮಿತಿ’ಗೆ ಉಲ್ಲೇಖಿಸುವ ನಿರ್ಣಯಕ್ಕೆ ಲೋಕಸಭೆ ಅಂಗೀಕಾರ
‘ಧರ್ಮಸ್ಥಳ’ದ ಬಗ್ಗೆ ಅಪಪ್ರಚಾರ ಆರೋಪ: ಯೂಟ್ಯೂಬರ್ ವಿರುದ್ಧ ‘ED’ಗೆ ದೂರು