ಚಿಕ್ಕಮಗಳೂರು : ಸದ್ಯ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳದಿಂದ ಬೇಸತ್ತು ಎಷ್ಟೋ ಜನರು ತಮ್ಮ ಸ್ವಂತ ಮನೆ ಹಾಗೂ ಊರನ್ನು ಬಿಟ್ಟು ತೊರೆದಿದ್ದಾರೆ.ಇದೀಗ ಚಿಕ್ಕಮಗಳೂರು ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳಕ್ಕೆ ಸುಮಾರು 15 ಜನ ಮಹಿಳೆಯರು, ಮನೆಯನ್ನು ತೊರೆದಿರುವ ಘಟನೆ ವರದಿಯಾಗಿದೆ.
ಹೌದು ಚಿಕ್ಕಮಗಳೂರು ತಾಲೂಕಿನ ಹಾಂದಿ ಗ್ರಾಮದ ಭೀಮ ನಗರದಲ್ಲಿ ಈ ಒಂದು ಘಟನೆ ನಡೆದಿದೆ. ಹಾಂದಿ ಗ್ರಾಮದಿಂದ 15 ಕ್ಕೂ ಹೆಚ್ಚು ಸ್ತ್ರೀಯರು ಮನೆ ಬಿಟ್ಟು ಹೋಗಿದ್ದಾರೆ. ಕೂಲಿ ಕಾರ್ಮಿಕರು ಬಡ ಮಹಿಳೆಯರೇ ಮೈಕ್ರೋ ಫೈನಾನ್ಸ್ ಗಳಿಗೆ ಟಾರ್ಗೆಟ್ ಆಗಿದ್ದು, ಗ್ರಾಮದ ಮಹಿಳೆಯರನ್ನೇ ಒಗ್ಗೂಡಿಸಿ ಸಂಘ ಸ್ಥಾಪಿಸಿ ಸಾಲ ನೀಡುತ್ತಿದ್ದರು.
ಸಂಘದವರು ಸಾಲಕಟ್ಟದಿದ್ದರೆ ಜವಾಬ್ದಾರಿ ಹೊತ್ತಿದ್ದ ಮಹಿಳೆಯರಿಗೆ ಕಿರುಕುಳ ನೀಡಲು ಆರಂಭಿಸಿದ್ದಾರೆ. ಇದೀಗ ಮೈಕ್ರೋ ಫೈನಾನ್ಸ್ ಕಿರುಕುಳ ತಾಳಲಾರದೆ ಸುಮಾರು 15 ಜನರು ಮಹಿಳೆಯರು ಊರು ಬಿಟ್ಟಿದ್ದಾರೆ. ಮೈಕ್ರೋ ಫೈನಾನ್ಸ್ ಸಾಲ ಕೂಲಿ ಕಾರ್ಮಿಕರ ಬದುಕಿಗೆ ಕೊಳ್ಳಿ ಇಟ್ಟಿದೆ. ಆಲ್ದೂರು ಪೊಲೀಸ್ ಠಾಣೆಯಲ್ಲಿ ಈ ಒಂದು ಪ್ರಕರಣ ದಾಖಲಾಗಿದೆ.