ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದ ಹಾಸ್ಟೆಲ್ ನಲ್ಲಿದ್ದ ಐವರು ಬಾಲಕಿಯರು ನಾಪತ್ತೆಯಾಗಿದ್ದಾರೆ. ಮಕ್ಕಳ ಆಸರೆ ಬಾಲ ಮಂದಿರದಿಂದ ಬಾಲಕಿಯರು ಇದೀಗ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಹಾಸ್ಟೆಲ್ ನವರು ಚಿಕ್ಕಬಳ್ಳಾಪುರ ಗ್ರಾಮ ತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ತಿಪ್ಪೇನಹಳ್ಳಿ ಬಳಿಯಿರುವ ಹಾಸ್ಟೆಲ್ನಿಂದ ಐವರು ಬಾಲಕಿಯರು ನಾಪತ್ತೆಯಾಗಿದ್ದಾರೆ. ಮದರ್ ತೆರೇಸಾ ಟ್ರಸ್ಟ್ ಅನ್ನು ಈ ಹಾಸ್ಟೆಲ್ ನಡೆಸುತ್ತಿದೆ. ಅನಾಥ ಹೆಣ್ಣುಮಕ್ಕಳು, ಸಿಂಗಲ್ ಪೇರೆಂಟ್ ಮಕ್ಕಳಿಗೆ ಈ ಒಂದು ಹಾಸ್ಟೆಲ್ ನಲ್ಲಿ ಆಶ್ರಯ ನೀಡಲಾಗುತ್ತದೆ. ಐವರು ಬಾಲಕಿಯರು ನಾಪತ್ತೆಯಾದ ಹಿನ್ನೆಲೆಯಲ್ಲಿ ಇದೀಗ ಟ್ರಸ್ಟ್ ನಿಂದ ಚಿಕ್ಕಬಳ್ಳಾಪುರ ಗ್ರಾಮಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ.