ಚಾಮರಾಜನಗರ : ಸಾಮಾನ್ಯವಾಗಿ ಮನೆಯಲ್ಲಿ ಕರೆಂಟ್ ಹೋದ ಸಂದರ್ಭದಲ್ಲಿ ಮೇಣದಬತ್ತಿ ಹಚ್ಚುವುದು ಹಿಂದಿನಿಂದಲೂ ಬಂದಂತಹ ಒಂದು ವಾಡಿಕೆ. ಆದರೆ ಚಾಮರಾಜನಗರದಲ್ಲಿ ಈ ಒಂದು ಮೇಣದಬತ್ತಿಯಿಂದ ಘೋರವಾದ ದುರಂತ ಒಂದು ಸಂಭವಿಸಿದ್ದು ವ್ಯಕ್ತಿಯೊಬ್ಬರು ಬೆಂಕಿಯಲ್ಲಿ ಸಜೀವವಾಗಿ ದಹನಗೊಂಡಿದ್ದಾರೆ.
ಈ ಒಂದು ಘಟನೆ ಚಾಮರಾಜನಗರದ ಮೂಡಗೂರಿನಲ್ಲಿ ಈ ಒಂದು ಘಟನೆ ನಡೆದಿದ್ದು ಸಿದ್ದೇಶ್ (41) ಎಂಬ ವ್ಯಕ್ತಿ ಸಾವನ್ನಪ್ಪಿದ್ದಾರೆ. ಸಿದ್ದೇಶ್ ವಿದ್ಯುತ್ ಇಲ್ಲದೆ ಮನೆಯಲ್ಲಿ ಮೇಣದ ಬತ್ತಿಯನ್ನು ಹಚ್ಚಿಟ್ಟಿದ್ದ. ರಾತ್ರಿ ಮಲಗಿದ್ದಾಗ ಮೇಣದಬತ್ತಿ ಹಾಸಿಗೆ ಮೇಲೆ ಬಿದ್ದಿತ್ತು. ಈ ವೇಳೆ ಹಾಸಿಗೆ ಸಮೇತ ಬೆಂಕಿಯಲ್ಲಿ ಬಿದ್ದು ಸಿದ್ದೇಶ್ ನರಳಾಡಿ ಪ್ರಾಣ ಬಿಟ್ಟಿದ್ದಾರೆ.