ಬೆಂಗಳೂರು: ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದಂತ ನಟ ಕಮಲ್ ಹಾಸನ್ ಹೇಳಿಕೆ ಖಂಡಿಸಿ ನಗರದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಹೀಗೆ ಪ್ರತಿಭಟಿಸಿದ್ದವರು ಪ್ರತಿಭಟನೆ ಅನುಮತಿ ಪಡೆದಿದ್ದ ಕಾರಣ, ಅಂತವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಬೆಂಗಳೂರಿನ ಬಸವೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಟ ಕಮಲ್ ಹಾಸನ್ ಹೇಳಿಕೆ ಖಂಡಿಸಿ ನಮ್ಮ ಕರುನಾಡ ಯುವ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದರು. ಆದರೇ ಪ್ರತಿಭಟನೆ ನಡೆಸೋದಕ್ಕೆ ಪೊಲೀಸರಿಂದ ಅನುಮತಿ ಪಡೆಯಬೇಕಿದ್ದಂತ ಪ್ರತಿಭಟನಾಕಾರರು ಆ ಕೆಲಸವನ್ನೇ ಮಾಡಿರಲಿಲ್ಲ.
ಈ ಹಿನ್ನಲೆಯಲ್ಲಿ ನಟ ಕಮಲ್ ಹಾಸನ್ ಕನ್ನಡದ ಬಗ್ಗೆ ವಿವಾದಾತ್ಮಕವಾಗಿ ನೀಡಿದಂತ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಿದಂತ ನಮ್ಮ ಕರುನಾಡು ಯುವ ಸೇನೆಯ ಕಾರ್ಯಕರ್ತರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.
BREAKING : ಪೊಲೀಸರಿಂದ ಅಕ್ರಮವಾಗಿ ‘IPL’ ಟಿಕೆಟ್ ಮಾರಾಟ ದಂಧೆ ಪ್ರಕರಣ : ಇಬ್ಬರು ಕಾನ್ಸ್ಟೇಬಲ್ ಸಸ್ಪೆಂಡ್
BREAKING : ಮಂಗಳೂರಿನಲ್ಲಿ ಮಳೆಗೆ ಮತ್ತೊಂದು ದುರಂತ : ಸಮುದ್ರದಲ್ಲಿ ನಾಡ ದೋಣಿ ಮುಗುಚಿ ಇಬ್ಬರು ನೀರುಪಾಲು!