ಬೆಂಗಳೂರು : ಶೋಭಾ ಕರಂದ್ಲಾಜೆ ಕೇಂದ್ರದಲ್ಲಿ ಸಚಿವರಾಗಿದ್ದಾರೆ ಆಯೋಗದ ಶಿಫಾರಸಿನಂತೆ ಹಣ ನೀಡಿ ಅಂತ ಬಾಯಿಬಿಟ್ಟಿದ್ದಾರಾ? ಆದ್ದರಿಂದ ಶೋಭಾ ಕರಂದ್ಲಾಜೆಗೆ ನೀವು ವೋಟ್ ಹಾಕ್ತಿರಾ? ಯಾವುದೇ ಕಾರಣಕ್ಕೂ ಹಾಕಬಾರದು ಇವರಿಂದಲೇ ರಾಜ್ಯಕ್ಕೆ ದೊಡ್ಡ ಅನ್ಯಾಯ ಎಂದು ಏಕವಚನದಲ್ಲಿ ಕಿಡಿ ಕಾರಿದರು.
ಇಂದು ಬೆಂಗಳೂರಿನ ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಪ್ರೊ. ರಾಜೀವ್ ಗೌಡ ಅವರ ಪರವಾಗಿ ಚುನಾವಣಾ ಪ್ರಚಾರ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಹಾಗೂ ಬಿಜೆಪಿಯ ವಿರುದ್ಧ ತೆರಿಗೆ ಹಂಚಿಕೆ ವಿಚಾರವಾಗಿ ವಾಗ್ದಾಳಿ ನಡೆಸಿದರು.
BREAKING: ಖ್ಯಾತ ಚಲನಚಿತ್ರ ನಿರ್ಮಾಪಕ ‘ಗಂಗು ರಾಮ್ಸೆ’ ಇನ್ನಿಲ್ಲ | Filmmaker Gangu Ramsay No More
ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಬಿಜೆಪಿ ನಾಯಕರು ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ನ್ಯಾಯ ದೊರೆತಿಲ್ಲ. ಕೇಂದ್ರ ಸಚಿವೆ ನಿರ್ಮಾಲಾಗೆ ಆಯೋಗ 2 ವರದಿ ಕೊಡುತ್ತಾರೆ. ರಾಜ್ಯಕ್ಕೆ 5,490 ಕೋಟಿ ರೂಪಾಯಿ ನೀಡುವಂತೆ ಶಿಫಾರಸು ಮಾಡಿತ್ತು.
ಎರಡನೇ ವರದಿಯಲ್ಲಿ ಈ ಬಗ್ಗೆ ಉಲ್ಲೇಖಿಸಿದಂತೆ ಹೇಳಿ ತಡೆ ಹಿಡಿಯುತ್ತಾರೆ. 15ನೇ ಹಣಕಾಸು ಆಯೋಗದ ಅಧ್ಯಕ್ಷರಿಗೆ ಹೇಳಿ ತಡೆ ಹಿಡಿಯುತ್ತಾರೆ.ಬೆಂಗಳೂರಿನ ಪೆರಿಫೆರಲ್ ರಿಂಗ್ ರಸ್ತೆಗೆ 3 ಸಾವಿರ ಕೋಟಿ ಅನುದಾನ 3ಸಾವಿರ ಕೋಟಿ ಅನುದಾನವನ್ನು ನೀಡದೆ ಅನ್ಯಾಯ ಮಾಡಿದ್ದಾರೆ. ಈ ಬಗ್ಗೆ ರಾಜ್ಯದ ಬಿಜೆಪಿಯ 25 ಸಂಸದರು ಒಂದು ದಿನವೂ ಕೇಳಿಲ್ಲ ಎಂದು ವಾಗ್ದಾಳಿ ನಡೆಸಿದರು.
BREAKING : ಶಾಸಕ ಯತ್ನಾಳ್ ಗೆ ಮತ್ತೊಂದು ಸಂಕಷ್ಟ : ಸಚಿವ ದಿನೇಶ್ ಗುಂಡೂರಾವ್ ಪತ್ನಿಯಿಂದ ದೂರು ದಾಖಲು