ಚಿಕ್ಕಮಗಳೂರು : ಕೋಮುಗಲಭೆ ಸೃಷ್ಟಿಸಲು ಪುನೀತ್ ಕೆರೆಹಳ್ಳಿ ಎಂಬ ಮತಾಂಧನಿಗೆ ಬಿಜೆಪಿಯಿಂದ ತತ್ವ ಬಂದಿದೆ ಎಂಬ ಕಾಂಗ್ರೆಸ್ ಎಂಎಲ್ಸಿ ಬಿಕೆ ಹರಿಪ್ರಸಾದ್ ಅವರ ಆರೋಪಕ್ಕೆ ಶೋಭಾ ಕರಂದ್ಲಾಜೆ ಕಿಡಿ ಕಾರಿದ್ದು, ರಾಮದೇವರ ಉದ್ಘಾಟನೆ ವೇಳೆ ಕೋಮು ಗಲಭೆಗೆ ‘ಕೈ’ ಪ್ಲಾನ್ ಮಾಡಿಕೊಂಡಿದೆ ಎಂದು ಆರೋಪಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶ ಶಾಂತವಾಗಿದೆ ಮೋದಿ ಆಡಳಿತದಲ್ಲಿ ಕೋಮುದಳ್ಳುರಿ ನಡೆದಿಲ್ಲ. ಕಾಂಗ್ರೆಸ್ ಆಡಳಿತದಲ್ಲಿ ದೇಶದ ಮೇಲೆ ಭಯೋತ್ಪಾದಕ ದಾಳಿ ನಡೆದಿದೆ.ದಾಳಿ ಆದಾಗ ಕಾಂಗ್ರೆಸ್ ನವರಿಗೆ ಇದು ನಮ್ಮ ಸರ್ಕಾರ ಅನಿಸುತ್ತಿತ್ತು ಎಂದು ವಾಗ್ದಾಳಿ ನಡೆಸಿದರು.
ಮೋದಿ ಬಂದ ಮೇಲೆ ಭಯೋತ್ಪಾದಕ ಮಾನಸಿಕ ಜನರಿಗೆ ಭಯ ಉಂಟಾಗಿದೆ. ರಾಮದೇವರ ಉದ್ಘಾಟನೆ ವೇಳೆ ಮತ್ತೆ ಕೋಮು ಗಲಭೆಗೆ ಕೈ ಪ್ಲಾನ್ ಮಾಡಿಕೊಂಡಿದೆ. ಅದರ ಚಿಕ್ಕ ಝಲಕ್ ಅನ್ನು ಎಂ ಎಲ್ ಸಿ ಹರಿಪ್ರಸಾದ್ ಹೇಳಿರಬಹುದು ಎಂದು ಅವರು ಆರೋಪಿಸಿದರು.
ದೇಶದ ಜನರಿಗೆ ಹಿಂಸೆ ಬೇಡ ಜನ ಶಾಂತಿ ವಹಿಸುತ್ತಿದ್ದಾರೆ ಮಂದಿರ ನಿರ್ಮಾಣದ ಬಳಿಕ ರಾಮನಿಗೊಂದು ಅಸ್ಮಿತೆ ಬಂದಿದೆ ನಮ್ಮ ದೇಶದಲ್ಲಿ ರಾಮನಿಗೆ ಮಂದಿರ ಆಗಿದೆ ಅನ್ನಿಸಿದೆ ಈ ಮಾತಿಗೆ ಯಾರೂ ಕಿವಿಗೊಡಬೇಡಿ ಎಲ್ಲರೂ ಶಾಂತಿ ಕಾಪಾಡಿ ಎಂದು ಚಿಕ್ಕಮಗಳೂರಿನಲ್ಲಿ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದರು.