ಬೆಂಗಳೂರು : ಕನ್ನಡ ಚಿತ್ರರಂಗದ ಪ್ರಚಂಡ ಕುಳ್ಳ ಎಂದೆ ಖ್ಯಾತಿ ಪಡೆದಿದ್ದ ನಟ ದ್ವಾರಕೀಶ್ ಅವರು ನಿನ್ನೆ ಹೃದಯಘಾತದಿಂದ ಸಾವನಪ್ಪಿದ್ದಾರೆ. ಇಂದು ಬೆಳಿಗ್ಗೆ ನಟ ಶಿವರಾಜಕುಮಾರ್ ಅವರು ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಹುಸ್ಕೂರು ರಸ್ತೆಯಲ್ಲಿ ಇರುವ ದ್ವಾರಕೀಶ್ ನಿವಾಸದಲ್ಲಿ ಅವರ ಅಂತಿಮ ದರ್ಶನ ಪಡೆದರು.
ದ್ವಾರಕೀಶ್ ಅವರ ಅಂತಿಮ ದರ್ಶನ ಪಡೆದ ಶಿವರಾಜಕುಮಾರ್ ಹುಸ್ಕುರು ರಸ್ತೆಯಲ್ಲಿರುವ. ನಿವಾಸದಲ್ಲಿ ಅಂತಿಮ ದರ್ಶನ ಪಡೆದರು. ದ್ವಾರಕೀಶ್ ಅವರ ಪಾರ್ಥಿವ ಶರೀರಕ್ಕೆ ಶಿವಣ್ಣ ನಮಿಸಿದ್ದಾರೆ. ಈ ವೇಳೆ ಮಾತಾನಾಡಿದ ಅವರು, ದ್ವಾರಕೀಶ್ ಕುಟುಂಬಸ್ಥರಿಗೆ ನಾವು ಚಿಕ್ಕವರಿದ್ದಾಗಿನಿಂದ ಒಳ್ಳೆಯ ಬಾಂಧವ್ಯ ಇತ್ತು ಎಂದರು.
ದ್ವಾರಕೀಶ್ ನಮ್ಮ ಕುಟುಂಬದ ಸದಸ್ಯರು ಇದ್ದಂತೆ. ದ್ವಾರಕೀಶ್ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಚಿತ್ರರಂಗಕ್ಕೆ ನೀಡಿರುವ ಕೊಡುಗೆಯನ್ನ ಯಾರು ಮರೆಯುವುದಿಲ್ಲ. ದ್ವಾರಕೀಶ್ ಕುಟುಂಬದ ಜೊತೆಗೆ ನಾವೆಲ್ಲ ಇದ್ದೇವೆ.ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ಆ ದೇವರು ನೀಡಲಿ ದ್ವಾರಕೀಶ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ ಎಂದು ಶಿವರಾಜ್ ಕುಮಾರ್ ಸಂತಾಪ ಸೂಚಿಸಿದರು.
ಕೆಲವೇ ಹೊತ್ತಿನಲ್ಲಿ ದ್ವಾರಕೀಶ್ ಅವರ ಪಾರ್ಥಿವ ಶರೀರವನ್ನು ರವೀಂದ್ರ ಕಲಾಕ್ಷೇತ್ರಕ್ಕೆ ಮಾಡಲಾಗುತ್ತದೆ.ಈಗಾಗಲೇ ಅವರ ನಿವಾಸದಲ್ಲಿ ವಿಧಾನಗಳನ್ನು ಪೂರೈಸಿದ್ದು ಕುಟುಂಬಸ್ಥರ ಸಮುಖದಲ್ಲಿ ಸಕಲ ವಿಧಿ ವಿಧಾನಗಳನ್ನು ಪೂರೈಸಲಾಗಿದ್ದು ಕೆಲವೇ ಕ್ಷಣಗಳಲ್ಲಿ ರವೀಂದ್ರ ಕಾಲ ಕ್ಷೇತ್ರಕ್ಕೆ ಅವರ ಪಾರ್ಥಿವ ಶರೀರವನ್ನು ಶಿಫ್ಟ್ ಮಾಡಲಾಗುತ್ತದೆ.