ಶಿವಮೊಗ್ಗ: ಜಿಲ್ಲೆಯಲ್ಲಿ ಕುಟುಂಬ ಸಮೇತ ಶರಾವತಿ ಹಿನ್ನೀರಿಗೆ ಔಟಿಂಗ್ ಹೋಗಿದ್ದ ವೇಳೆಯಲ್ಲಿ, ಈಜಲು ತೆರಳಿದ್ದಂತ ಪಶು ವೈದ್ಯಾಧಿಕಾರಿ ಡಾ.ಸುನೀಲ್ ನೀರಲ್ಲಿ ಮುಳುಗಿ ಸಾವನ್ನಪ್ಪಿರುವಂತ ಘಟನೆ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹಕ್ರೆಯ ಬಾಳೇಗೆರೆ ಗ್ರಾಮದ ಬಳಿಗೆ ಕುಟುಂಬ ಸಮೇತರಾಗಿ ಮಾಸೂರಿನಲ್ಲಿ ಹಿರಿಯ ಪಶು ವೈದ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಂತ ಡಾ.ಸುನೀಲ್(38) ಔಟಿಂಗ್ ಗೆ ತೆರಳಿದ್ದರು. ಈಜು ಬರುತ್ತಿದ್ದರಿಂದ ಶರಾವತಿ ಹಿನ್ನೀರಿನಲ್ಲಿ ಈಜಾಡೋದಕ್ಕೆ ಇಳಿದಿದ್ದರು. ಸುಮಾರು 20 ಮೀಟರ್ ದೂರ ಈಜಿ ಹೋಗಿದ್ದಂತ ಪಶು ವೈದ್ಯ ಡಾ.ಸುನೀಲ್, ಹಿಂದಿರುಗಿ ಬರೋದಕ್ಕೆ ಪ್ರಯತ್ನಿಸಿದಾಗ ಆಯಾಸದಿಂದ ಸಾಧ್ಯವಾಗಿಲ್ಲ ಎನ್ನಲಾಗಿದೆ.
ಡಾ.ಸುನೀಲ್ ನೀರಿನ ಮಧ್ಯದಲ್ಲೇ ನೀರಲ್ಲಿ ಮುಳುಗುತ್ತಿರೋದನ್ನು ಕಂಡಂತ ಕುಟುಂಬಸ್ಥರು ಕೂಡಲೇ ಅಗ್ನಿಶಾಮಕ ಸಿಬ್ಬಂದಿಗಳಿಗೆ ಕರೆ ಮಾಡಿ ಸಹಾಯಕ್ಕೆ ಕೋರಿದ್ದಾರೆ. ಆದರೇ ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಬರುವ ವೇಳೆಗೆ ಮುಳುಗಿ ಕುಟುಂಬಸ್ಥರ ಕಣ್ಣೆದುರಿಗೆ ಸಾವನ್ನಪ್ಪಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿಗಳು ಪಶು ವೈದ್ಯ ಡಾ.ಸುನೀಲ್ ಮೃತದೇಹವನ್ನು ಹೊರ ತೆಗೆದಿದ್ದಾರೆ. ಪಾರ್ಥೀವ ಶರೀರವನ್ನು ಸಾಗರ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ನಡೆಸಲಾಗಿದೆ.
ಅಂದಹಾಗೇ ಮೃತ ಡಾ.ಸುನೀಲ್ ಸೊರಬ ತಾಲ್ಲೂಕಿನ ಹೊರಬೈಲಿನವರು. ಮೃತರ ಪತ್ನಿ ಕೂಡ ವೈದ್ಯರಾಗಿದ್ದಾರೆ. ಇಬ್ಬರು ಪುತ್ರಿಯರಿದ್ದು, ಓರ್ವ ಪುತ್ರಿ ಒಂದೂವರೆ ವರ್ಷದ ಪಾಪು ಎನ್ನಲಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ವಸಂತ ಬಿ ಈಶ್ವರಗೆರೆ.., ಸಂಪಾದಕರು…
ಬೆಂಗಳೂರಲ್ಲಿ ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್: ಕಾಲೇಜು ಪ್ರಿನ್ಸಿಪಾಲ್ ಸೇರಿ ಐವರು ಲೆಕ್ಟರ್ ವಿರುದ್ಧ FIR
ರಾಜ್ಯದ `ಪಡಿತರ ಚೀಟಿದಾರರೇ’ ಗಮನಿಸಿ : ‘ರೇಷನ್ ಕಾರ್ಡ್’ನಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಮತ್ತೆ ಅವಕಾಶ.!
ಈಗ ಗ್ರಾಮ ಪಂಚಾಯ್ತಿಯಲ್ಲೇ ದೊರೆಯಲಿದೆ ’11ಇ ನಕ್ಷೆ’ ಸೇರಿದಂತೆ ಈ ಭೂ ದಾಖಲೆಗಳು: ಇಷ್ಟು ಶುಲ್ಕ ನಿಗದಿ








