ಶಿವಮೊಗ್ಗ: ಜಿಲ್ಲೆಯ ಸಾಗರದ ಪ್ರಸಿದ್ಧ ಅಂಗಡಿ ಮಾಲೀಕರಿಗೆ ಬ್ಲಾಕ್ ಮೇಲ್ ಮಾಡಿ ಬರೋಬ್ಬರಿ 36 ಲಕ್ಷ ಪೀಕಿರುವಂತ ಘಟನೆ ಸಾಗರ ಪಟ್ಟಣದಲ್ಲಿ ನಡೆದಿದೆ. ಈ ಸಂಬಂಧ ಇಬ್ಬರ ವಿರುದ್ಧ FIR ದಾಖಲಾಗಿದ್ದು, ಆರೋಪಿಗಳಾದಂತ ಓರ್ವ ಯುವತಿ, ಆಕೆಯ ಬಾಯ್ ಫ್ರೆಂಡ್ ಅನ್ನು ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದಲ್ಲಿ ರಾಜಶ್ರೀ ಎಲೆಕ್ಟ್ರಾನಿಕ್ಸ್ ಅಂದ್ರೆ ತುಂಬಾನೇ ಪ್ರಸಿದ್ಧಿ. ಇಂತಹ ಅಂಗಡಿ ಮಾಲೀಕರಿಗೆ ಬ್ಲಾಕ್ ಮೇಲ್ ಮಾಡಿ ಅಂಗಡಿಯಲ್ಲೇ ಕೆಲಸ ಮಾಡುತ್ತಿದ್ದಂತ ಯುವತಿ ಹಾಗೂ ಬಾಯ್ ಫ್ರೆಂಡ್ ಹಂತ ಹಂತವಾಗಿ 36 ಲಕ್ಷ ಹಣ ಪಡೆದಿದ್ದಾರೆ. ಈ ಸಂಬಂಧ ಅಂಗಡಿ ಮಾಲೀಕರು ನೀಡಿದಂತ ದೂರಿನ ಅನ್ವಯ ಸಾಗರ ಪೇಟೆ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ 2023ರ ಕಲಂ 329(4), 308(2), 351(2) ಹಾಗೂ 3(5) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
‘FIR’ನಲ್ಲಿ ಏನಿದೆ.?
ದಿನಾಂಕ:-01/10/2025 ರಂದು 9-30.ಎ.ಎಂ ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿದಾರರು ಈಗೆ 50 ವರ್ಷಗಳಿಂದ ಸಾಗರ ಟೌನ್ ತಿಲಕ್ ರಸ್ತೆಯಲ್ಲಿ, ರಾಜಶ್ರೀ ಎಲೆಕ್ಟ್ರಾನಿಕ್ಸ್ ಎಂಬ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿದ್ದು ಇತ್ತೀಚೆಗೆ 15 ವರ್ಷಗಳಿಂದ ವರದಾ ರಸ್ತೆಯಲ್ಲಿ ರಾಜಶ್ರೀ ಫರ್ನಿಚರ್ ಅಂಗಡಿ ಮಾಡಿಕೊಂಡು ವ್ಯಾಪಾರ ಮಾಡಿಕೊಂಡಿದ್ದು ಪಿರ್ಯಾದಿದಾರರಿಗೆ ವಯಸ್ಸಾಗಿದ್ದರಿಂದ ಎರಡೂ ಅಂಗಡಿಗಳ ವಹಿವಾಟನ್ನು ಮಗ ಮತ್ತು ಸೊಸೆಗೆ ವಹಿಸಿಕೊಟ್ಟು ಬೆಳಿಗ್ಗೆ ಸ್ವಲ್ಪ ಸಮಯ ಅಂಗಡಿಯಲ್ಲಿ ಇರುತ್ತಿದ್ದು ತಿಲಕ್ ರಸ್ತೆಯಲ್ಲಿರುವ ರಾಜಶ್ರೀ ಎಂಟರ್ ಪ್ರೈಸೆಸ್ ನಲ್ಲಿ 05 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಕು.ಅಶಿನಿ ಎಂಬ ಹುಡುಗಿ ಸಹ ಇದು ಅಂಗಡಿಯಲ್ಲಿ ರಿಜಿಸ್ಟರ್ ಕೆಲಸ ಹಾಗೂ ಇತರೆ ಕೆಲಸ ಮಾಡಿಕೊಂಡು ನಂಬಿಕಸ್ಥಳಾಗಿದ್ದು, ಅವಳಿಗೆ ಅಕ್ಷಯ ಎಂಬ ಹುಡುಗನೊಂದಿಗೆ ಮದುವೆ ಫಿಕ್ಸ್ ಆಗಿದ್ದು ಹುಡುಗನನ್ನು ಅಂಗಡಿಗೆ ಕರೆದುಕೊಂಡು ಬಂದು ಪರಿಚಯ ಮಾಡಿಸಿದ್ದರು.
ದಿನಾಂಕ:-06/04/2025 ರಂದು ಭಾನುವಾರ ರಜೆ ಇದ್ದುದ್ದರಿಂದ ಪಿರ್ಯಾದಿ ಮಗ ಸೊಸೆ ಎಲ್ಲರೂ ಬೆಂಗಳೂರಿಗೆ ಹೋಗಿದ್ದು ಪಿರ್ಯಾದಿದಾರರು ಮನೆಯಲ್ಲಿಯೇ ಇದು ಮಧ್ಯಾಹ್ನ 12-00 ಗಂಟೆಗೆ ಅಶ್ವಿನಿ ಬಂದು ಬಾಗಿಲ ಬೆಲ್ ಹೊಡೆದಿದ್ದು ಪಿರ್ಯಾದಿ ಬಾಗಿಲು ತೆಗೆದಿದ್ದು, ಅಶ್ವಿನಿ ಮನೆಯ ಒಳಗೆ ಬಂದು ಪಿರ್ಯಾದಿ ಮೈಮೇಲಿನ ಬಟ್ಟೆಗಳನ್ನು ಬಿಚ್ಚಿದ್ದು ಪಿರ್ಯಾದಿಯು ಗಾಬರಿಯಾಗಿ ಏನಮ್ಮ ಮಾಡುತ್ತೀಯಾ ಎಂದು ಕೇಳಿದ್ದು ಅಷ್ಟರಲ್ಲಿ ಮನೆಯೊಳಗೆ ಅಕ್ಷಯ ಸಹ ಬಂದು ಕೈಯಲ್ಲಿದ್ದ ಮೊಬೈಲ್ ನಲ್ಲಿ ವೀಡಿಯೋ ಮಾಡುತ್ತಾ ಏನಿದು ನೀವು ಹೀಗೆ ಮಾಡುವುದು ಕೂಗಾಡಿ ಹೆದರಿಸಿ ಎಲ್ಲಾ ನನ್ನ ಮೊಬೈಲ್ ನಲ್ಲಿ ವೀಡಿಯೋದಲ್ಲಿದೆ ಎಂದು ವೀಡಿಯೋ ತೋರಿಸಿದ್ದು, ಅದರಲ್ಲಿ ಹುಡುಗಿ ಪಿರ್ಯಾದಿ ಬಟ್ಟೆ ಬಿಚ್ಚಿದ ವೀಡಿಯೋ ಇದ್ದು ಪಿರ್ಯಾದಿಯು ಗಾಬರಿಯಾಗಿದ್ದು, ಅಕ್ಷಯ ಹುಡುಗಿಗೆ ಹೊಡೆದಿದ್ದು ನಂತರ ವೀಡಿಯೋ ಇಟ್ಟುಕೊಂಡು ನಿಮ್ಮ ಅಂಗಡಿ ಮುಂದೆ ಬಂದು ಪ್ರತಿಭಟನೆ ಮಾಡಿ ಮಾನ ಮರ್ಯಾದೆ ಕಳೆಯುತ್ತೇನೆ ಎಲ್ಲಾ ಮೀಡಿಯಾದವರಿಗೂ ಕೊಡುತ್ತೇನೆ. ಯೂಟೂಬ್ ಗೆ ಅಪ್ ಲೋಡ್ ಮಾಡುತ್ತೇನೆ ಎಂದು ಹೆದರಿಸಿದ್ದರು.
ಇದೆಲ್ಲ ಹೊರಗಡೆ ಬರಬಾರದು ಎಂದರೆ ನಾವು ಕೇಳಿದಷ್ಟು ಹಣ ಕೊಟ್ಟರೆ ಮಾತ್ರ ಸುಮ್ಮನಿರುತ್ತೇವೆ ಎಂದು ಅವರಿಬ್ಬರೂ ಮಾತನಾಡಿಕೊಂಡು 50 ಲಕ್ಷ ಹಣ ಕೊಟ್ಟರೆ ವೀಡಿಯೋ ಪ್ರಚಾರ ಮಾಡುವುದಿಲ್ಲ ಎಂದು ಹೇಳಿದು, ಪಿರ್ಯಾದಿ ಅಷ್ಟೆಲಾ ಆಗುವುದಿಲ್ಲ ಎಂದು ಹೇಳಿದಾಗ 40 ಲಕ್ಷ ಕೊಡಿ ಎಂದು ಹೇಳಿದ್ದು, ಪಿರ್ಯಾದಿಯು ಅಲ್ಯಾ ಹಣ ಏಕೆ ಕೊಡಬೇಕು ಬ್ಲ್ಯಾಕ್ ಮೇಲ್ ಮಾಡುತ್ತೀರಾ ಎಂದು ಹೇಳಿದಾಗ ಅವರು ವೀಡಿಯೋ ವೈರಲ್ ಮಾಡುವುದಾಗಿ ಹೇಳಿದ್ದರಿಂದ ಪಿರ್ಯಾದಿಯು ಮರ್ಯಾದೆಗೆ ಅಂಜಿ ಹಣ ಕೊಡುವುದಾಗಿ ಒಪ್ಪಿದು, ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ವಿಡಿಯೋ ವೈರಲ್ ಮಾಡುವುದಾಗಿ ಮತ್ತು ಅಂಗಡಿ ಮುಂದೆ ಪ್ರತಿಭಟನೆ ಮಾಡುವುದಾಗಿ ಹೆದರಿಸಿ ಹೋಗಿದ್ದು, ಪ್ರತಿ ದಿನ ಅವರು ಆರೋಪಿತರಿಗೆ ಪೋನ್ ಮಾಡಿ ಹಣ ಕೊಡಿ ಎಂದು ಹೆದರಿಸುತ್ತಿದ್ದು ಪಿರ್ಯಾದಿ ಮಾನ ಮರ್ಯಾದೆಗೆ ಅಂಜಿ ತಮ್ಮ ಪರಿಚಯದವರಾಗ ಪುರುಷೋತ್ತಮ ಹಾಗೂ ಹೆಚ್.ಪಿ ಗ್ರಾಸ್ ಮಂಜು ಅವರಿಂದ ಹಂತ ಹಂತವಾಗಿ 14.90 ಲಕ್ಷ ಹಣ ಪಡೆದು ಅಶ್ವಿನಿ ಮತ್ತು ಅಕ್ಷಯ ಅವರಿಗೆ ಪೋನ್ ಮಾಡಿದಾಗ ಗಮಗಶ್ರೀ ಹೋಟೇಲ್ ಹತ್ತಿರ ಹಣ ಕೊಡುವಂತೆ ತಿಳಿಸಿದ್ದರಿಂದ ಪಿರ್ಯಾದಿಯು ಅಲ್ಲಿಗೆ ಹೋಗಿ 14.90 ಲಕ್ಷ ಹಣವನ್ನು ಕೊಟ್ಟಿದ್ದರು.
ಒಂದು ವಾರದ ನಂತರ ಉಳಿದ ಹಣವನ್ನು ಕೊಡಬೇಕು ಎಂದು ಹೆದರಿಸಿದ್ದರಿಂದ ಪುರುಷೋತ್ತಮ ಅವರಿಂದ 20.00 ಲಕ್ಷ ಹಣವನ್ನು ಪಡೆದು ಗಮಗ ಹೋಟೇಲ್ ಹತ್ತಿರ ಹೋಗಿ ಅಶ್ವಿನಿ ಮತ್ತು ಅಕ್ಷಯ ಅವರಿಗೆ ಕೊಟ್ಟಿದ್ದು, ಸ್ವಲ್ಪ ದಿನಗಳ ನಂತರ ಮತ್ತೆ ಪೋನ್ ಮಾಡಿ ಹೆದರಿಸಿದರಿಂದ ಪಿರ್ಯಾದಿದಾರರು 1.60 ಲಕ್ಷ ಕೊಟ್ಟಿದು, ಒಟ್ಟು 36.50 ಲಕ್ಷ ಹಣ ಕೊಟ್ಟಿದು ಹಣ ಕೊಟ್ಟ ವಿಚಾರವನ್ನು ಯಾರಿಗಾದರೂ ಹೇಳಿದರೆ ಜೀವ ಸಹಿತ ಬಿಡುವುದಿಲ್ಲ ಹಾಗೆ ವೀಡಿಯೋ ವೈರಲ್ ಮಾಡಿ ಮರ್ಯಾದೆ ತೆಗೆಯುತ್ತೇವೆ ಎಂದು ಹೆದರಿಸಿದ್ದರು.
ಪಿರ್ಯಾದಿದಾರರು ತಮ್ಮ ಮಗ ಬದರಿ ನಾರಾಯಣನಿಗೆ ನೆಡೆದ ವಿಚಾರವನ್ನು ಆಗಸ್ಟ್ 02 ರಂದು ಹೇಳಿದ್ದು ಪಿರ್ಯಾದಿ ಮಗ ಪೋಲೀಸರಿಗೆ ಯಾಕೆ ದೂರು ನೀಡಲಿಲ್ಲ ಎಂದು ಹೇಳಿದಾಗ ಇಳಿ ವಯಸ್ಸಿನಲ್ಲಿ ಮರ್ಯಾದೆಗೆ ಕಳೆದುಕೊಂಡಂತಾಗುತ್ತದೆ ಎಂದು ಹೇಳಿದ್ದು, ಪದೇ ಪದೇ ಪೋನ್ ಮಾಡಿ ಬ್ಲ್ಯಾಕ್ ಮೇಲೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟರೆ ಏನು ಮಾಡುತ್ತೀಯಾ ನಾವು ಪೊಲೀಸ್ ಠಾಣೆಗೆ ದೂರು ಕೊಡೋಣ ಎಂದು ಹೇಳಿದ್ದರಿಂದ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಮೇಲ್ಕಂಡ ಆರೋಪಿಗಳ ಮೇಲೆ ಕಾನೂನು ಕ್ರಮ ಜರುಗಿಸಿ ತಮ್ಮ 36.50 ಲಕ್ಷ ಹಣ ವಾಪಾಸ್ ಕೊಡಿ ಎಂಬುದಾಗಿ ದೂರು ನೀಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಇದಕ್ಕೂ ಮೊದಲು ವೈರಲ್ ಆಗಿತ್ತು ಸುದ್ದಿ
ಈ ಪ್ರಕರಣದ ಅಡಿಯಲ್ಲಿ ದೂರು ದಾಖಲಾಗಿ, ಎಫ್ ಐ ಆರ್ ದಾಖಲಾಗುವ ಮೊದಲೇ ಸುದ್ದಿ ಸಾಗರದಲ್ಲಿ ವೈರಲ್ ಆಗಿತ್ತು. ಸಾಗರದ ಪ್ರಸಿದ್ಧ ಅಂಗಡಿಯ ಮಾಲೀಕರೊಬ್ಬರಿಗೆ ಹನಿಟ್ರ್ಯಾಪ್ ಮಾಡಲಾಗಿದೆ. ಅವರಿಂದ ಬರೋಬ್ಬರಿ 40 ಲಕ್ಷ ಹಣವನ್ನು ವೀಡಿಯೋ ಇಟ್ಟುಕೊಂಡು ಬೆದರಿಸಿ ವಸೂಲಿ ಮಾಡಲಾಗಿದೆ ಎಂಬುದಾಗಿ ಸುದ್ದಿ ಹರಿದಾಡಿತ್ತು. ಆದರೇ ಈ ಸಂಬಂಧ ಅಧಿಕೃತವಾಗಿ ದೂರು ದಾಖಲಾಗಿರಲಿಲ್ಲ.
ಇದೀಗ ದಿನಾಂಕ 01-10-2025ರಂದು ಖುದ್ದು ಸಾಗರ ಪೇಟೆ ಪೊಲೀಸ್ ಠಾಣೆಗೆ ತೆರಳಿ ರಾಜಶ್ರೀ ಎಲೆಕ್ಟ್ರಾನಿಕ್ಸ್ ನ ಆರ್.ಜೆ ಶ್ರೀಧರ ಎಂಬುವರು ದೂರು ನೀಡಿದ್ದಾರೆ. ದೂರಿನಲ್ಲಿ ಬ್ಲಾಕ್ ಮೇಲ್ ಮಾಡಲಾಗಿದೆ. ನನ್ನಿಂದ ಹಂತ ಹಂತವಾಗಿ 36.50 ಲಕ್ಷವನ್ನು ವಸೂಲಿ ಮಾಡಿರುವುದಾಗಿ ಉಲ್ಲೇಖಿಸಿದ್ದಾರೆ. ಈ ದೂರು ಸಂಬಂಧ ಎ1 ಆರೋಪಿಯಾಗಿ ಅಶ್ವಿನಿ ಹಾಗೂ ಎ2 ಆರೋಪಿಯಾಗಿ ಅಕ್ಷಯ್ ಎಂಬುವರ ವಿರುದ್ಧ FIR ದಾಖಲಿಸಿಕೊಂಡ ಪೊಲೀಸರು, ಬಂಧಿಸಿ ಜೈಲಿಗಟ್ಟಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ…, ಸಂಪಾದಕರು
ಗಮನಿಸಿ : ನಿಮ್ಮ ಮನೆಯಲ್ಲಿ ಎಷ್ಟು ದಿನಗಳವರೆಗೆ `ನೀರು’ ಸಂಗ್ರಹಿಸಿಡಬಹುದು ಗೊತ್ತಾ?
BREAKING: ಬೆಂಗಳೂರಲ್ಲಿ ನಮ್ಮ ಮೆಟ್ರೋ ರೈಲು ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಪ್ರಯಾಣಿಕ | Namma Metro