ಶಿವಮೊಗ್ಗ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಗರ ಯೋಜನಾ ಕಚೇರಿಯ ತುಮರಿ ವಲಯದ ಒಕ್ಕೂಟದ ಪದಾಧಿಕಾರಿಗಳ ಕಾರ್ಯಾಗಾರವು ಸಾಗರ ತಾಲ್ಲೂಕಿನ ಕುದುರೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಯಶಸ್ವಿಯಾಗಿ ಜರಗಿತು.
ಈ ಕಾರ್ಯಗಾರವನ್ನು ಕುದುರೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉಮಾ ನಾಗೇಂದ್ರ ಉದ್ಘಾಟಿಸಿ ಶುಭ ಹಾರೈಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಿರಸಿ ವಿಭಾಗದ ಜಿಲ್ಲಾ ನಿರ್ದೇಶಕರಾದ ದಿನೇಶ್ ಅವರು ಕಾರ್ಯಕರ್ತರಿಗಿಂತಲೂ ಮಿಗಿಲಾದ ಸೇವೆಯನ್ನು ಒಕ್ಕೂಟದ ಪದಾಧಿಕಾರಿಗಳು ಸೇವೆ ನೀಡುತ್ತಿದ್ದಾರೆ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ನಡೆಸಲು ಪದಾಧಿಕಾರಿಗಳು ತೊಡಗಿಕೊಳ್ಳಬೇಕು ಪೂಜ್ಯರ ಕನಸನ್ನು ಅನುಷ್ಟಾನ ಮಾಡುವಲ್ಲಿ ಪದಾಧಿಕಾರಿಗಳ ಸೇವೆ ಅನನ್ಯವಾಗಿದೆ ಎಂದರು.
ತಮ್ಮ ಬದಲಾವಣೆಗೆ ತಾವೇ ನಿರ್ಧಾರ ಕೈಗೊಂಡು ಸ್ವ ಸಹಾಯ ಗುಂಪುಗಳನ್ನು ಸದಸ್ಯರು ನಡೆಸುತ್ತಿದ್ದಾರೆ. ಗುಂಪುಗಳ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಬೇಕಾದರೆ ಗುಂಪಿನ ಪ್ರತಿನಿಧಿಗಳು ಜವಾಬ್ದಾರಿಯನ್ನೂ ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಸ್ವ ಸಹಾಯ ಗುಂಪುಗಳ ಅಕೌಂಟ್ ನ್ನೂ ರಾಷ್ಟ್ರೀಕೃತ ಬ್ಯಾಂಕುಗಳಲಿ ತೆರೆದು ಬ್ಯಾಂಕಿನ ಸೌಲಬ್ಯ ವನ್ನು ಒದಗಿಸಲಾಗುತ್ತಿದೆ. ಬ್ಯಾಂಕಿನ B C ಪ್ರತಿನಿಧಿಯಾಗಿ ಯೋಜನೆಯು ಕಾರ್ಯನಿರ್ವಹಿಸುತ್ತಿದೆ. ನಾಯಕರಾದವರು ಎಲ್ಲರ ಸಮಸ್ಯೆಗಳನ್ನು ಆಲಿಸಿ ಅವುಗಳಿಗೆ ಪರಿಹಾರ ಒದಗಿಸಬೇಕು. ಸೇವಾ ಮನೋಭಾವನೆಯಿಂದ ಸೇವೆ ನೀಡುವ ಮೂಲಕ ಗುಂಪುಗಳನ್ನು ಕಟ್ಟಿ ಬೆಳೆಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಸ್ವ ಉದ್ಯೋಗ ಚಟುವಟಿಕೆಗಳಿಗೆ ಪ್ರಗತಿ ನಿಧಿಯನ್ನ ಹೆಚ್ಚು ಬಳಸಿಕೊಳ್ಳುವ ಮೂಲಕ ಸ್ವಾವಲಂಬಿ ಬದುಕಿಗೆ ಯೋಜನೆ ಆದ್ಯತೆ ನೀಡುತ್ತಿದೆ ಎಂದರು.
ಈ ವೇಳೆ ಸಾಗರ ತಾಲೂಕು ಯೋಜನಾಧಿಕಾರಿ ದಯಾನಂದ ಪೂಜಾರಿ ಪಿ, ವಲಯ ಮೇಲ್ವಿಚಾರಕರಾದ ಲಕ್ಷ್ಮೀ, ಸೇವಾ ಪ್ರತಿನಿಧಿ ಗಳಾದ ನಾಗರಾಜ್, ಪುಷ್ಪದಂಥ, ಸತ್ಯನಾರಾಯಣ, ಗೋವಿಂದ, ಅಶೋಕ್ CSC ಸೇವಾದರದರ ರಾದ ಸುಶ್ಮಿತಾ, ಪೂರ್ಣಿಮಾ, ರೂಪಶ್ರೀ ಲೆಕ್ಕ ಪರಿಶೋಧಕರಾದ ಭಾಸ್ಕರ್ ಹಾಜರಿದ್ದರು.
‘BEd ವ್ಯಾಸಂಗ’ಕ್ಕೆ ಅರ್ಜಿ ಸಲ್ಲಿಸಿದ್ದವರಿಗೆ ಗುಡ್ ನ್ಯೂಸ್: ‘ದಾಖಲೆಗಳ ಪರಿಶೀಲನೆ’ಗೆ ಮತ್ತೊಂದು ಅವಕಾಶ








