ಶಿವಮೊಗ್ಗ: ಜಿಲ್ಲೆಯ ಸಾಗರ ನಗರದಲ್ಲಿ ಸದಾನಂದ ಆಚಾರಿ ಎಂಬುವರ ಕೊಲೆಯಾಗಿತ್ತು. ಈ ಕೊಲೆ ಪ್ರಕರಣ ಖಂಡಿಸಿ ಹಾಗೂ ಸೂಕ್ತ ರೀತಿಯ ತನಿಖೆಗೆ ಆಗ್ರಹಿಸಿ ನಾಳೆ ಸಾಗರ ತಾಲ್ಲೂಕು ನಾಗರೀಕ ಹಿತರಕ್ಷಣ ಸಮಿತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಸಾಗರ ತಾಲ್ಲೂಕು ನಾಗರೀಕ ಹಿತರಕ್ಷಣ ಸಮಿತಿಯ ಸಂಚಾಲಕ ಹಿತಕರ್ ಜೈನ್ ಅವರು, ಸಾಗರದ ಶಿವಪ್ಪನಾಯಕ ನಗರದ ನಿವಾಸಿ ಸದಾನಂದ ಆಚಾರಿ ಕೊಲೆ ಪ್ರಕರಣ ಖಂಡಿಸಿ ನಾಳೆ ಬೆಳಗ್ಗೆ 11.30 ಗಂಟೆಗೆ ಸಾಗರ ಪಟ್ಟಣ ಪೊಲೀಸ್ ಠಾಣೆ ಎದುರು ಸಾಗರ ತಾಲ್ಲೂಕು ನಾಗರೀಕ ಹಿತರಕ್ಷಣ ಸಮಿತಿ ಆಶ್ರಯದಲ್ಲಿ ವಿವಿಧ ಸಂಘಟನೆಗಳ ಪ್ರಮುಖರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಸದಾನಂದ ಆಚಾರ್ ಅವರದ್ದು ಸಾಧಾರಣ ಕೊಲೆ ಎಂದು ಅನಿಸಿದರು, ಯುವ ಉದ್ಯಮಿಗಳ ವಿರುದ್ಧ ಎಫ್ಐಆರ್ ಆಗಿರುವುದು ಸೇರಿದಂತೆ ಸಾಗರ ವ್ಯಾಪ್ತಿಯಲ್ಲಿ ಪುಂಡಾಟಿಕೆ ಮೂಲಕ ಜನಸಾಮಾನ್ಯರುಗಳ ಹೆದರಿಸುವುದು ಕೊಲೆ ಬೆದರಿಕೆ ಹಾಕುವುದು ಮೊದಲಾದ ಅಪರಾಧ ಕೃತ್ಯಗಳಲ್ಲಿ ತೊಡಗಿಕೊಂಡಿರುವವರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮವಹಿಸಬೇಕು ಎಂದು ಒತ್ತಾಯಿಸಲಾಗುತ್ತದೆ ಎಂದಿದ್ದಾರೆ.
ಸದಾನಂದ ಕೊಲೆ ಆರೋಪಿಗಳನ್ನು ತಕ್ಷಣ ಜೈಲಿಗೆ ಹಾಕಬೇಕು. ಅಮಾಯಕ ಆಚಾರಿ ಸದಾನಂದನ ಸಾವಿಗೆ ನ್ಯಾಯ ಕಲ್ಪಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಜನಪರ ಹೋರಾಟಗಾರರು ಹಾಗೂ ವಿವಿಧ ರಾಜಕೀಯ ಪಕ್ಷಗಳ ಸದಸ್ಯರು, ಮುಖಂಡರುಗಳು ನಮ್ಮ ನ್ಯಾಯಯುತ ಹೋರಾಟದಲ್ಲಿ ಪಾಲ್ಗೊಂಡು ಬೆಂಬಲಿಸುವಂತೆ ಸಾಗರ ತಾಲ್ಲೂಕು ನಾಗರೀಕ ಹಿತರಕ್ಷಣ ಸಮಿತಿ ಸಂಚಾಲಕ ಹಿತಕರ್ ಜೈನ್ ಮನವಿ ಮಾಡಿದ್ದಾರೆ.
ಸಾಗರದಲ್ಲಿ ‘ಸದಾನಂದ ಮರ್ಡರ್’ ಕೇಸ್: ಪೊಲೀಸರು ‘ಕೊಲೆ ಆರೋಪಿ’ಗಳನ್ನು ಬಿಟ್ಟು ಕಳುಹಿಸಿದ್ದು ಯಾಕೆ.?
ಜುಲೈ.1ರಿಂದ ಮಂಗಳೂರು ಸೆಂಟ್ರಲ್-ವಿಜಯಪುರ ವಿಶೇಷ ಎಕ್ಸ್ಪ್ರೆಸ್ನ ವೇಳಾಪಟ್ಟಿ ಪರಿಷ್ಕರಣೆ