ಶಿವಮೊಗ್ಗ: ಕಳೆದ ಎರಡು ದಿನಗಳಿಂದ ಶಿವಮೊಗ್ಗ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಇಂದು ಕೂಡ ಎಡಬಿಡದೆ ಮಳೆಯಾಗುತ್ತಿದೆ. ಈ ಕಾರಣದಿಂದ ನಾಳೆ ಸಾಗರ, ಹೊಸನಗರ ತಾಲ್ಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇತ್ತ ಸೊರಬ ತಾಲ್ಲೂಕಿನ ಶಾಲೆಗಳಿಗೆ ಮಳೆಯ ಕಾರಣ ರಜೆಯ ನಿರ್ಧಾರವನ್ನು ಆಯಾ ಶಾಲಾ-ಕಾಲೇಜು ಮುಖ್ಯಸ್ಥರಿಗೆ ನೀಡಿರುವುದಾಗಿ ತಹಶೀಲ್ದಾರ್ ಮಂಜುಳಾ ಹೆಗಡಾಳ್ ತಿಳಿಸಿದ್ದಾರೆ.
ಈ ಕುರಿತಂತೆ ಕನ್ನಡ ನ್ಯೂಸ್ ನೌ ಜೊತೆಗೆ ಮಾತನಾಡಿದಂತ ಅವರು, ಸೊರಬ ತಾಲ್ಲೂಕಿನ ಕೆಲ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದರೇ, ಮತ್ತೆ ಕೆಲವೆಡೆ ಕಡಿಮೆ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಸೊರಬ ತಾಲ್ಲೂಕಿನಾಧ್ಯಂತ ಶಾಲಾ-ಕಾಲೇಜುಗಳಿಗೆ ರಜೆಯ ನಿರ್ಧಾರವನ್ನು ಕೈಗೊಳ್ಳುತ್ತಿಲ್ಲ ಎಂಬುದಾಗಿ ತಿಳಿಸಿದರು.
ನಾಳೆ ಎಲ್ಲೆಲ್ಲಿ ಭಾರೀ ಮಳೆಯಾಗುತ್ತಿದೆಯೋ ಆ ಭಾಗದ ಶಾಲೆಯ ಮುಖ್ಯೋಪಾಧ್ಯಾಯರು, ಕಾಲೇಜು ಪ್ರಾಂಶುಪಾಲರು ರಜೆಯನ್ನು ನೀಡುವಂತ ತೀರ್ಮಾನ ಕೈಗೊಳ್ಳಲು ಸೂಚಿಸಲಾಗಿದೆ. ಅದರಂತೆ ವ್ಯಾಪಕವಾಗಿ ಮಳೆಯಾಗುತ್ತಿರುವಂತ ಸೊರಬ ತಾಲ್ಲೂಕಿನ ಶಾಲಾ-ಕಾಲೇಜು ವ್ಯಾಪ್ತಿಯಲ್ಲಿ ಆಯಾ ಶಾಲಾ-ಕಾಲೇಜುಗಳ ಮುಖ್ಯಸ್ಥರು ರಜೆಯ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ ಎಂಬುದಾಗಿ ಹೇಳಿದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
BREAKING: ಭಾರೀ ಮಳೆ ಹಿನ್ನಲೆ, ನಾಳೆ ಸಾಗರ ತಾಲ್ಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ ತಹಶೀಲ್ದಾರ್
ರಾಜ್ಯದ ಪಡಿತರ ಚೀಟಿದಾರರೇ ಗಮನಿಸಿ: ‘ತಪಶೀಲು ಯೋಜನೆ’ಯಡಿ ಸಿಗಲಿವೆ ಈ ಎಲ್ಲಾ ಸೌಲಭ್ಯಗಳು
ರಾಜ್ಯದ SC ಸಮುದಾಯದ ಯುವಕ-ಯುವತಿಯರಿಗೆ ಗುಡ್ ನ್ಯೂಸ್: 2 ಲಕ್ಷ ಸಹಾಯಧನಕ್ಕೆ ಅರ್ಜಿ ಆಹ್ವಾನ