ಶಿವಮೊಗ್ಗ : ಜಿಲ್ಲೆಯ ಸಾಗರದ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಸಾಗರ ಜಿಲ್ಲೆ ಮಾಡುವಂತೆ ಒತ್ತಾಯಿಸಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿಗೆ ಶುಕ್ರವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ನೈತಿಕ ಬೆಂಬಲ ವ್ಯಕ್ತಪಡಿಸಲಾಯಿತು.
ಈ ವೇಳ ಮಾತನಾಡಿದಂತ ಕೆಯುಡಬ್ಲ್ಯೂಜೆ ಸಂಘದ ಪರವಾಗಿ ಉಪಾಧ್ಯಕ್ಷ ಲೋಕೇಶ್ ಕುಮಾರ್ ಗುಡಿಗಾರ ಮಾತನಾಡಿ, ಸಾಗರ ಜಿಲ್ಲೆಯಾಗಲು ಸಮರ್ಥವಾಗಿದೆ. ರಾಜ್ಯ ಸರ್ಕಾರ ಡಿ.31ರೊಳಗೆ ಕೇಂದ್ರಕ್ಕೆ ಸಾಗರ ಜಿಲ್ಲೆಯಾಗುವ ಪ್ರಸ್ತಾವನೆ ಸಲ್ಲಿಸಬೇಕು. ಸಾಗರ ಉಪವಿಭಾಗೀಯ ಕೇಂದ್ರವಾಗಿದ್ದು ಶಿವಮೊಗ್ಗ ನಂತರ ಅತಿದೊಡ್ಡ ವಿಸ್ತೀರ್ಣ ಹೊಂದಿದೆ ತಾಲ್ಲೂಕು ಆಗಿರುತ್ತದೆ. ಈ ಹಿನ್ನೆಲೆಯಲ್ಲಿ ಸಾಗರ, ಹೊಸನಗರ, ಸೊರಬ, ತೀರ್ಥಹಳ್ಳಿ, ಶಿಕಾರಿಪುರ ಸೇರಿಸಿ ಸಾಗರ ಜಿಲ್ಲಾ ಕೇಂದ್ರವಾಗಿ ಘೋಷಣೆ ಮಾಡುವಂತೆ ಒತ್ತಾಯಿಸಿ, ಸಾಗರ ಜಿಲ್ಲೆ ಘೋಷಣೆಗೆ ಒತ್ತಾಯಿಸಿ ನಡೆಸುತ್ತಿರುವ ಹಕ್ಕೊತ್ತಾಯದ ಪ್ರತಿಭಟನೆಗೆ ಸಂಘದ ಸಂಪೂರ್ಣ ಬೆಂಬಲ ಇದೆ ಎಂದರು.
ಸಂಘದ ಅಧ್ಯಕ್ಷ ಜಿ.ನಾಗೇಶ್, ಪ್ರಧಾನ ಕಾರ್ಯದರ್ಶಿ ಮಹೇಶ್ ಹೆಗಡೆ, ಖಜಾಂಚಿ ಎಂ.ಜಿ.ರಾಘವನ್, ಪತ್ರಕರ್ತರಾದ ಗಿರೀಶ್ ರಾಯ್ಕರ್, ಸತ್ಯನಾರಾಯಣ, ಇಮ್ರಾನ್ ಸಾಗರ್, ಮಾ.ಸ.ನಂಜುಂಡಸ್ವಾಮಿ, ಶಿವಕುಮಾರ್ ಗೌಡ, ನಾಗರಾಜ್, ಜಮೀಲ್ ಸಾಗರ್, ರಫೀಕ್ ಕೊಪ್ಪ, ವಸಂತ ಬಿ ಈಶ್ವರಗೆರೆ, ಹೋರಾಟ ಸಮಿತಿಯ ಹಿತಕರ ಜೈನ್, ತೀ.ನ.ಶ್ರೀನಿವಾಸ್, ಮಂಜುನಾಥ್ ಆಚಾರ್, ಸುಂದರ ಸಿಂಗ್, ತಾರಾಮೂರ್ತಿ, ಪ್ರಮುಖರಾದ ಪ್ರಶಾಂತ್ ಕೆ.ಎಸ್., ಮಹ್ಮದ್ ಖಾಸಿಂ, ದೇವೇಂದ್ರಪ್ಪ ಯಲಕುಂದ್ಲಿ, ಮಹಾಬಲೇಶ್ವರ ಶೇಟ್ ಇನ್ನಿತರರು ಹಾಜರಿದ್ದರು.
ಶಿವಮೊಗ್ಗ: ಸಾಗರದಲ್ಲೂ ‘ಕಬ್ಬಿನ ದರ ನಿಗದಿ’ಗೆ ಒತ್ತಾಯಿಸಿ ‘ರೈತ ಸಂಘ’ದಿಂದ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ








