ಶಿವಮೊಗ್ಗ: ತುರ್ತು ವಿದ್ಯುತ್ ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ಮೇ.3ರ ನಾಳೆ ಶಿವಮೊಗ್ಗ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಈ ಬಗ್ಗೆ ಮೆಸ್ಕಾಂ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮೇ 03 ರಂದು ಬೆಳಗ್ಗೆ 09-00 ರಿಂದ ಸಂಜೆ 05.00ರ ವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ಕರೆಂಟ್ ಇರೋದಿಲ್ಲ ಅಂತ ತಿಳಿಸಿದೆ.
ನಾಳೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ಕಾಶಿಪುರ, ಲಕ್ಕಪ್ಪ ಲೇಔಟ್, ಸಿದ್ದರಾಮ ಬಡಾವಣೆ, ರೇಣುಕಾಂಬ ಬಡಾವಣೆ, ಹನುಮಂತಪ್ಪ ಲೇಔಟ್, ತಮಿಳ್ ಕ್ಯಾಂಪ್, ಸಹ್ಯಾದ್ರಿನಗರ, ಸೋಮಿನಕೊಪ್ಪ, ಮಧ್ವನಗರ, ವಿಜಯಲಕ್ಷ್ಮೀ ಲೇಔಟ್, ಪುಷ್ಪಗಿರಿ ಲೇಔಟ್, ಎಂ.ಎಂ.ಎಸ್.ಲೇಔಟ್, ಭೋವಿ ಕಾಲೋನಿ, ಆದರ್ಶನಗರ, ಸಹಕಾರಿನಗರ, ಹೊಂಗಿರಣ ಬಡಾವಣೆ, ರವಿಶಂಕರ್ ಗುರುಜಿ ಶಾಳೆಯ ಸುತ್ತಮುತ್ತ, ಆಟೋ ಕಾಲೋನಿ, ಕಾಶಿಪುರ ರೈಲ್ವೆ ಟ್ರ್ಯಾಕ್, ದೇವಕಾತಿಕೊಪ್ಪ, ಪಶುವೈದ್ಯಕೀಯ ಕಾಲೇಜು, ಗೆಜ್ಜೇನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಪಾಕಿಸ್ತಾನ್ ಜಿಂದಾಬಾದ್ ಎಂದವರ ವಿರುದ್ಧ ಕ್ರಮ ಕೈಗೊಂಡಿದ್ದರೇ ಸುಹಾಸ್ ಶೆಟ್ಟಿ ಹತ್ಯೆ ಆಗುತ್ತಿರಲಿಲ್ಲ: ಆರ್.ಅಶೋಕ್
ರಾಜ್ಯದಲ್ಲಿಯೇ ಪ್ರಪಥಮ ಬಾರಿಗೆ ಪವರ್ ಮ್ಯಾನ್ ಗಳಿಗೆ ಮಂಡ್ಯದಲ್ಲಿ ಸುರಕ್ಷಿತ ಸಾಮಗ್ರಿ ವಿತರಣೆ