ಶಿವಮೊಗ್ಗ : ಶಿವಮೊಗ್ಗ ತಾಲ್ಲೂಕು, ಸಂತೇಕಡೂರು ಗ್ರಾಮದಲ್ಲಿ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮಧ್ಯಂತರ ಕಂಬಗಳನ್ನು ಅಳವಡಿಸುವ ಮತ್ತು ವಾಹಕ ಬದಲಾವಣೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಎಫ್-1 ಉಂಬ್ಳೇಬೈಲು, ಎಫ್-2 ಲಕ್ಕಿನಕೊಪ್ಪ, ಎಫ್-3 ಮತ್ತೂರು ಕುಡಿಯುವ ನೀರು, ಎಫ್-4 ಸಂತೇಕಡೂರು ಎಫ್-8 ಗಣಿದಾಳು ಮಾರ್ಗಗಳಿಂದ ವಿದ್ಯುತ್ ಸರಬರಾಜು ಪಡೆಯುವ ಕೆಳಕಂಡ ಗ್ರಾಮಗಳಲ್ಲಿ ಡಿ.14 ರಂದು ಬೆಳಗ್ಗೆ 10 ರಿಂದ ಸಂಜೆ 06 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಸಂತೇಕಡೂರು, ಶ್ರೀರಾಮನಗರ, ರಾಂಪುರ, ಕೊರಲಹಳ್ಳಿ, ಕಾಚೀನಕಟ್ಟೆ, ಜ್ಯೋತಿನಗರ, ದೊಡ್ಡಿಬೀಳು, ವಿನಾಯಕನಗರ, ಲಕ್ಕಿನಕೊಪ್ಪ, ತೋಟದಕೆರೆ, ಹುರಳಿಹಳ್ಳಿ, ಗಣಿದಾಳು, ಉಂಬ್ಳೇಬೈಲು, ಕಣಗಲಸರ, ಮರಾಠಿ ಕ್ಯಾಂಪ್, ಸಾಲಿಗೆರೆ, ಕೈತೊಟ್ಟಲು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಅದೇ ರೀತಿ ಹೊಳಲೂರು 66/11ಕೆವಿ ವಿದ್ಯುತ್ ವಿತರಣಾ ಕೇಂದ್ರದಿAದ ಸರಬರಾಜಾಗುವ ಮಾರ್ಗಗಳಲ್ಲಿ ಲಿಂಕ್ ಲೈನ್ ಮಾರ್ಗ ರಚಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಡಿ.14 ಮತ್ತು 15 ರಂದು* ಬೆಳಗ್ಗೆ 10.00 ರಿಂದ ಸಂಜೆ 6.00ರವರೆಗೆ ಹೊಳಲೂರು, ಹಾಡೋನಹಳ್ಳಿ, ಹಳೆ/ಹೊಸ ಮಡಿಕೆಚೀಲೂರು ಮತ್ತು ಬಿ.ಕೆ.ತಾವರೆ ಗ್ರಾಮಗಳ ವ್ಯಾಪ್ತಿಯಲ್ಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಇನ್ನೂ ದಿನಾಂಕ 16 ರಂದು ಎಂ.ಆರ್.ಎಸ್.220/11 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿರುವ 110/11ಕೆವಿ ಎಸ್.ಎಎಸ್-1 ಮಾರ್ಗಗಳಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಇರುವುದರಿಂದ ಈ ಮಾರ್ಗಗಳಿಂದ ವಿದ್ಯುತ್ ಸರಬರಾಜಾಗುವ ಗ್ರಾಮಗಳಾದ ಹೊಸಳ್ಳಿ, ರಾಮೇನಕೊಪ್ಪ, ಕಲ್ಲೂರು, ಆಗಸವಳ್ಳಿ, ಹೊಸೂರು, ಮತ್ತೂರು,ಲಕ್ಷ್ಮೀಪುರ, ಹೋನ್ನಾಪುರ, ಈಚಲವಾಡಿ, ಹಾಯ್ಹೊಳೆ, ಪುರದಾಳು, ಬೆಳ್ಳೂರು, ಬಸವಾಪುರ, ಭಾರತಿನಗರ, ಅನುಪಿನಕಟ್ಟೆ, ಗೋವಿಂದಾಪುರ, ಹನುಮಂತಾಪುರ, ಗಾಂಧಿನಗರ, ಖಾನೆಹಳ್ಳ, ಭೋವಿಕಾಲೋನಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಡಿ.16 ರಂದು ಬೆಳಗ್ಗೆ 9:30 ರಿಂದ ಮಾಧ್ಯಾಹ್ನ 3.00ರವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.