ಶಿವಮೊಗ್ಗ: ಜಿಲ್ಲೆಯಲ್ಲಿ ವಿದ್ಯುತ್ ನಿರ್ವಹಣಾ ಕಾಮಗಾರಿಯನ್ನು ಕೈಗೊಳ್ಳುತ್ತಿರುವುದರಿಂದ, ಆಗಸ್ಟ್.31ರಂದು ಕೆಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂಬುದಾಗಿ ಮೆಸ್ಕಾಂ ತಿಳಿಸಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಗುವ ಫೀಡರ್ ಎ.ಎಫ್-03 ರಲ್ಲಿ ಮೆಸ್ಕಾಂ ವತಿಯಿಂದ ತುರ್ತು ಕಾಮಗಾರಿ ಇರುವುದರಿಂದ ಆ.31 ರಂದು ಬೆಳಗ್ಗೆ 10.00 ರಿಂದ ಸಂಜೆ 5.00 ರವರೆಗೆ ಈ ವ್ಯಾಪ್ತಿಗೆ ಬರುವ ಎಸ್.ವಿ. ಬಡಾವಣೆ ಎ,ಬಿ.ಎಫ್ ಬ್ಲಾಕ್, ಗುಡ್‌ಲಕ್ ಸರ್ಕಲ್, ಅಮ್ಮ ನಿಲಯ, ಸ್ನೇಹ ಅಪಾರ್ಟ್ಮೆಂಟ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಇರೋದಿಲ್ಲ ಎಂದಿದೆ.
ಎಂ.ಎಂ.ಎಸ್. ಲೇಔಟ್, ಬೋವಿ ಕಾಲೋನಿ, ವಿಜಯಲಕ್ಷಿö್ಮ ಲೇಔಟ್, ಸೋಮನಾಥ್ ಲೇಔಟ್, ಪುಷ್ಪಗಿರಿ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮಸ್ಕಾಂ ಪ್ರಕಟಣೆ ತಿಳಿಸಿದೆ.
ಬೆಂಗಳೂರು ಜನತೆಗೆ ಗಮನಕ್ಕೆ: ಈ ಮಾರ್ಗದಲ್ಲಿ ಹೊಸದಾಗಿ ‘BMTC ಬಸ್’ ಸಂಚಾರ ಆರಂಭ | BMTC Bus