ಶಿವಮೊಗ್ಗ: ರಸ್ತೆ ಅಗಲೀಕರಣ ಕಾಮಗಾರಿಯ ಹಿನ್ನಲೆಯಲ್ಲಿ ಸಾಗರ ನಗರದಲ್ಲಿ ದಿನಾಂಕ 19-04-2025ರ ನಾಳೆ ಕೆಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಈ ಕುರಿತಂತೆ ಮೆಸ್ಕಾಂನಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ದಿನಾಂಕ 19-04-2025ರ ಶನಿವಾರದ ನಾಳೆ, ಸಾಗರದ ಕೆಳದಿ ರಸ್ತೆ ಅಗಲೀಕರಣ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ನಾಳೆ ಸಾಗರ ನಗರದ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದಿದೆ.
ನಾಳೆ ಸಾಗರ ನಗರದ ಈ ಪ್ರದೇಶಗಳಲ್ಲಿ ಪವರ್ ಕಟ್
ದಿನಾಂಕ 19-04-2025ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಸಾಗರ ನಗರದ ಅಣಲೆಕೊಪ್ಪ, ಟೀಚರ್ಸ್ ಲೇಔಟ್, ಶ್ರೀಧರ ನಗರ, ಜೆಪಿ ನಗರ, ಸುಭಾಷ ನಗರ, ಅರಮನೆ ಕೇರಿ, ಸೊರಬ ರಸ್ತೆ, ಗಡದಯ್ಯ ಲೇಔಟ್, ಈಳಿ ರಸ್ತೆ, ಕೆಳದಿ ರಸ್ತೆ ಮತ್ತು ಬಸವೇಶ್ವರ ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪವರ್ ಕಟ್ ಆಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಮನವಿ ಮಾಡಿದೆ.
ವರದಿ: ವಸಂತ ಬಿ ಈಶ್ವರಗೆರೆ
ಸಿದ್ದರಾಮಯ್ಯನವರ ಗ್ಯಾಂಗ್ ಎಲ್ಲೋ ಕುಳಿತು ರೂಪಿಸಿದೇ ಜಾತಿಗಣತಿ ವರದಿ: ಆರ್.ಅಶೋಕ್