ಶಿವಮೊಗ್ಗ : ಶಿವಮೊಗ್ಗ ನಗರ ಉಪವಿಭಾಗ-2ರ ಘಟಕ-6ರ ವ್ಯಾಪ್ತಿಯ ಎನ್.ಟಿ.ರಸ್ತೆಯಲ್ಲಿ ನ್ಯಾಷನಲ್ ಹೈವೇ ಕಾಮಗಾರಿ ಇರುವುದರಿಂದ ಈ ಮಾರ್ಗಗಳಿಂದ ವಿದ್ಯುತ್ ಸರಬರಾಜಾಗುವ ಪ್ರದೇಶಗಳಾದ ಹರಕೆರೆ, ಬೆನಕೇಶ್ವರ ರೈಸ್‌ಮಿಲ್, ಶಂಕರ ಕಣ್ಣಿನ ಆಸ್ಪತ್ರೆ, ಎನ್.ಹೆಚ್.ಆಸ್ಪತ್ರೆ, ಅನ್ನಪೂರ್ಣೇಶ್ವರಿ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಡಿ.23 ರಂದು ಬೆಳಗ್ಗೆ 10.00 ರಿಂದ ಸಂಜೆ 6.00ರವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಗಣಿತ ದಿನಾಚರಣೆ
ಶ್ರೀನಿವಾಸ ರಾಮಾನುಜನ್, ಗಣಿತ ಶಾಸ್ತ್ರಜ್ಞರು ಇವರ ಹುಟ್ಟುಹಬ್ಬದ ಸವಿನೆನಪಿಗಾಗಿ ಡಿಸೆಂಬರ್ 22 ರಂದು ದೇಶಾದ್ಯಂತ ರಾಷ್ಟ್ರೀಯ ಗಣಿತ ದಿನಾಚರಣೆಯಾಗಿ ಆಚರಣೆ ಮಾಡಲಾಗುತ್ತಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಬೆಂಗಳೂರು ಇವರ ಸಹಯೋಗದೊಂದಿಗೆ ಡಿ.23 ರಂದು ಬೆಳಗ್ಗೆ 10.30 ಯಿಂದ ಮದ್ಯಾಹ್ನ 1.00ಗಂಟೆಯವರೆಗೆ ನಗರದ ದುರ್ಗಿಗುಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಅಂದು ಕೇಶವ ಪ್ರಸಾದ್ ಎಸ್. ಸಹ ಶಿಕ್ಷಕರು (ಗಣಿತ), ಡಿವಿಎಸ್ ಸಂಯುಕ್ತ ಪದವಿಪೂರ್ವ ಕಾಲೇಜು (ಪ್ರೌಡಶಾಲಾ ವಿಭಾಗ), ಶಿವಮೊಗ್ಗ ಶ್ರೀಮತಿ ಪೂರ್ಣಿಮಾ, ಸಹ ಶಿಕ್ಷಕರು (ಗಣಿತ), ಸಿಲ್ವರ್ ಜ್ಯೂಬಲಿ ಸರ್ಕಾರಿ ಸರ್ಕಾರಿ ಪ್ರೌಡಶಾಲೆ, ಭದ್ರಾವತಿ ಗಣಿತದ ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಉತ್ತಮ ಕೌಶಲ್ಯ. ಹೊಸ ಕಲಿಕಾ ಅಭ್ಯಾಸ ಮತ್ತು ಗಣಿತದಬಗ್ಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಮಾರ್ಗದರ್ಶನ ನೀಡಲಿದ್ದಾರೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
BREAKING : ಕಲಬುರ್ಗಿಯ ‘ಹೈಟೆಕ್ ಜಯದೇವ ಹೃದ್ರೋಗ’ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಿದ CM ಸಿದ್ದರಾಮಯ್ಯ
‘ಒಂದು ರಾಷ್ಟ್ರ ಒಂದು ಚುನಾವಣೆ’ ಮಸೂದೆಗಳು ಸಂಸತ್ತಿನಲ್ಲಿ ಅಂಗೀಕಾರಗೊಳ್ಳುವ ಸಾಧ್ಯತೆಯಿಲ್ಲ: ದಿಗ್ವಿಜಯ್ ಸಿಂಗ್