ಶಿವಮೊಗ್ಗ: ಜನವರಿ.22, 2026ರಂದು ಸೊರಬ ತಾಲ್ಲೂಕಿನ ಉಳವಿ ವ್ಯಾಪ್ತಿಯಲ್ಲಿ ತುರ್ತು ವಿದ್ಯುತ್ ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ಕೆಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂಬುದಾಗಿ ಮೆಸ್ಕಾಂ ತಿಳಿಸಿದೆ.
ಈ ಕುರಿತಂತೆ ಸೊರಬ ಎಇಇ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ದಿನಾಂಕ 22-01-2026ರಂದು ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಉಳವಿ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವಂತ ಪ್ರದೇಶಗಳಲ್ಲಿ ಪವರ್ ಕಟ್ ಆಗಲಿದೆ ಎಂದಿದೆ.
ಜನವರಿ.22ರಂದು ಉಳವಿ ವ್ಯಾಪ್ತಿಯ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ಜನವರಿ.22ರಂದು ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ಬರಗಿ, ಕಾನಳ್ಳಿ, ಉಳವಿ, ಹೊಸಬಾಳೆ ಮತ್ತು ದೂಗೂರು ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಕರೆಂಟ್ ಇರೋದಿಲ್ಲ ಎಂಬುದಾಗಿ ಮೆಸ್ಕಾಂ ತಿಳಿಸಿದೆ. ವಿದ್ಯುತ್ ಗ್ರಾಹಕರು ಸಹಕರಿಸುವಂತೆ ಕೋರಿದೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು
BIG NEWS: GBA ಚುನಾವಣೆಗೆ ಮುಹೂರ್ತ ಫಿಕ್ಸ್: ಮೇ.25ರ ನಂತರ ಎಲೆಕ್ಷನ್ ಖಚಿತವೆಂದ ಚುನಾವಣಾ ಆಯೋಗ
BIG NEWS: GBA ಚುನಾವಣೆಗೆ ಮುಹೂರ್ತ ಫಿಕ್ಸ್: ಮೇ.25ರ ನಂತರ ಎಲೆಕ್ಷನ್ ಖಚಿತವೆಂದ ಚುನಾವಣಾ ಆಯೋಗ








