ಶಿವಮೊಗ್ಗ: ತ್ರೈಮಾಸಿಕ ವಿದ್ಯುತ್ ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನಲೆಯಲ್ಲಿ ಸೆಪ್ಟೆಂಬರ್.26, 2025ರ ನಾಳೆ ಸಾಗರ ತಾಲ್ಲೂಕಿನ ಈ ಕೆಳಕಂಡ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಸಾಗರ ಮೆಸ್ಕಾಂ ಇಲಾಖೆಯು ದಿನಾಂಕ: 26.09.2025 ರ ಶುಕ್ರವಾರದಂದು 110/33/11 ಕೆವಿ ಸಾಗರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ದಿನಾಂಕ 26.09.2025 ರಂದು ಸಾಗರ ಪಟ್ಟಣ ವ್ಯಾಪ್ತಿಯ ಎಫ್-1 ಸಾಗರ ಟೌನ್, ಎಫ್-7 ಮಂಗಳಬೀಸು ಇಂಡಸ್ಟ್ರಿಯಲ್ ಏರಿಯಾ, ಎಫ್-8 ಮಾರಿಕಾಂಬ, ಎಫ್-13 ರಾಮನಗರ ಇಂಡಸ್ಟ್ರಿಯಲ್ ಏರಿಯಾ, ಎಫ್-15 ಆರ್.ಎಂ.ಸಿ, ಎಫ್-17 ಎಸ್.ಎನ್.ನಗರ, ಮತ್ತು ಗ್ರಾಮೀಣ ವ್ಯಾಪ್ತಿಯ ಎಫ್-2 ಮಾಲ್ವೆ, ಎಫ್-3 ಹೆಗ್ಗೋಡು, ಎಫ್-4 ಆವಿನಹಳ್ಳಿ, ಎಫ್-5 ವರದಹಳ್ಳಿ, ಎಫ್-6 ಬೊಮ್ಮತ್ತಿ, ಎಫ್-9 ಮಾಸೂರು, ಎಫ್-14 ಹಿರೇನೆಲ್ಲೂರು ಹಾಗೂ ಎಫ್-16 ಲಿಂಗದಹಳ್ಳಿ ಮಾರ್ಗದದಿಂದ ವಿದ್ಯುತ್ ಸಂಪರ್ಕ ಪಡೆದಿರುವ ಸಾಗರ ಪಟ್ಟಣ, ಆವಿನಹಳ್ಳಿ, ಹೆಗ್ಗೋಡು, ಭೀಮನಕೋಣೆ, ಯಡಜಿಗಳಮನೆ, ಕಲ್ಮನೆ, ಮಾಲ್ವೆ, ಭೀಮನೇರಿ, ಕೆಳದಿ, ಮಾಸೂರು, ಹಿರೇನೆಲ್ಲೂರು, ಪಡವಗೋಡು, ನಾಡಕಲಸಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಎಲ್ಲಾ ಗ್ರಾಮಗಳಿಗೆ ಬೆಳಗ್ಗೆ: 10:00 ಘಂಟೆಯಿಂದ ಸಂಜೆ: 05:00 ಘಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಮತ್ತು ವಿದ್ಯುತ್ ಗ್ರಾಹಕರು ಸಹಕರಿಸುವಂತೆ ಕೋರಿದೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು