ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕು ಮೊಗವೀರ ಸಂಘದಿಂದ ಕಷ್ಟದಲ್ಲಿದ್ದಂತ ಕೆಲ ಸಮುದಾಯದ ಜನರಿಗೆ ಆರ್ಥಿಕವಾಗಿ ನೆರವು ನೀಡಲಾಗಿದೆ. ಹೀಗೆ ಕಷ್ಟದಲ್ಲಿ ಸಹಾಯ ಮಾಡಿದಂತ ಸಂಘಕ್ಕೆ ಅಷ್ಟೇ ವಿನಮ್ರವಾಗಿ ಸಹಾಯ ಪಡೆದವರು ಧನ್ಯವಾದವನ್ನು ಅರ್ಪಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಮೊಗವೀರ ಸಮಾಜದ ಜನತೆ ಕಡಿಮೆ ಇದ್ದರು ಸಹ, ಸಾಗರ ತಾಲೂಕಿನಲ್ಲಿ ತನ್ನದೆ ಆದ ಚಾಪು ಮುಡಿಸಿದೆ. ಶಿಕ್ಷಣದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನ ಮಾಡುವುದು. ಪ್ರತಿವರ್ಷ ನೋಟ್ ಬುಕ್ ವಿತರಣೆ. ವಿದ್ಯಾರ್ಥಿ ವೇತನ. ಸಮಾಜದವರು ತೀರಿಕೊಂಡಾಗ ಶವ ಸಂಸ್ಕಾರಕ್ಕೆ ಧನ ಸಹಾಯ ಮಾಡುವುದು ಮೊಗವೀರ ಸಮಾಜದ ಗುರಿಯಾಗಿದೆ ಹಾಗೂ ಮಾಡುತ್ತಾ ಬರುತ್ತಿದೆ.
ಮತ್ತೆ ಮುಂದೆ ಒಂದು ಹೆಜ್ಜೆ ಇಟ್ಟ ಮೊಗವೀರ ಸಮಾಜ
ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಕೆಲವರು ಭೀಕರ ಕಾಯಿಲೆಯಿಂದ ಬಳಲುತ್ತಿರುವುದನ್ನು ಗಮನಿಸಿ, ಸಂಘದ ವತಿಯಿಂದ ಧನ ಸಹಾಯ ಮಾಡಲಾಗುತ್ತಿದೆ. ದೊಡ್ಡ ಪ್ರಮಾಣದ ಖಾಯಿಲೆ ಇದ್ದಾಗ ತುಂಬಾ ಹಣ ಖರ್ಚಾಗಿ, ಆಸ್ಪತ್ರೆ ಬಿಲ್ ನೋಡಿ ಅಲ್ಪ ಪ್ರಮಾಣದ ಸಹಾಯ ಧನ ನೀಡಲಾಗುತ್ತಿದೆ. ಕಡುಬಡತನದಲ್ಲಿ ಇದ್ದವರಿಗೆ ಮತ್ತು ಕೂಲಿ ನಾಲಿ ಮಾಡಿ ಬದುಕುವವರಿಗೆ ಇದರಿಂದ ಸಹಾಯವಾಗುತ್ತಿದೆ.
ನಿನ್ನೆ ದಿನ ಸಾಗರ ತಾಲೂಕಿನಲ್ಲಿ ಅತಿ ಹೆಚ್ಚು ಕಾಯಿಲೆಗಳಿಂದ ಬಳಲುತಿದ್ದವರಿಗೆ ಅದರಲ್ಲೂ ಕೂಲಿ ಮಾಡುವ ಕುಟುಂಬದವರಿಗೆ ಸಾಗರ ತಾಲೂಕು ಮೊಗವೀರ ಸಮಾಜದ ಅಧ್ಯಕ್ಷರಾದ ನಾಗರಾಜ್ ಬಿಲಗುಂಜಿ ಅವರು ಸರ್ವ ಸದಸ್ಯರ ಜೊತೆಗೆ ಸಮಾಲೋಚನೆ ಮಾಡಿ ಎಲ್ಲರ ಅಭಿಪ್ರಾಯ ಪಡೆದು ಅಲ್ಪ ಮಟ್ಟದ ಧನ ಸಹಾಯ ಮಾಡಿದ್ದಾರೆ.
ಈ ಕಾರ್ಯ ಮುಂದುವರೆಯಲಿ
ವೈಯಕ್ತಿಕವಾಗಿ ಸಂಘದ ಕೆಲವು ಪ್ರಮುಖರು ಧನ ಸಹಾಯ ಮಾಡಿದ್ದಾರೆ. ಇಂತಹ ಉತ್ತಮ ಕಾರ್ಯ ಮಾಡಿ, ನೋಂದವರಿಗೆ, ಆರ್ಥಿಕವಾಗಿ ಕಷ್ಟದಲ್ಲಿದ್ದವರಿಗೆ ನೆರವಾಗಿ, ಬೆನ್ನೆಲುಭಾಗಿ, ನಾವಿದ್ದೇವೆ ಎಂದ ಸಾಗರ ತಾಲ್ಲೂಕು ಮೊಗವೀರ ಸಂಘದ ಅಧ್ಯಕ್ಷರು ಮತ್ತು ಎಲ್ಲಾ ಪದಾಧಿಕಾರಿಗಳಿಗೆ ಜನರು ಧನ್ಯವಾದಗಳನ್ನು ತಿಳಿಸಿದ್ದಾರೆ. ಈ ಕಾರ್ಯ ಮುಂದೆ ಮುಂದುವರೆಯಲಿ ಎಂಬುದಾಗಿ ಆಶಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
‘ವಖ್ಫ್ ಬೋರ್ಡ್’ನಿಂದ 15 ಜಿಲ್ಲೆಗಳಲ್ಲಿ ಮಹಿಳಾ ಪದವಿ ಪೂರ್ವ ಕಾಲೇಜು ಸ್ಥಾಪನೆಗೆ ಸಂಪುಟ ಅಸ್ತು: ಸಚಿವ ಜಮೀರ್ ಅಹಮದ್
BREAKING : ದೇಶಾದ್ಯಂತ ‘ಬುಲ್ಡೋಜರ್ ಕಾರ್ಯಚರಣೆ’ಗೆ ‘ಸುಪ್ರೀಂಕೋರ್ಟ್’ ತಡೆ