Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಉತ್ತರಕನ್ನಡ : ಆಸ್ತಿಗಾಗಿ ಹೆತ್ತ ಮಗನ ಬರ್ಬರ ಹತ್ಯೆ ಪ್ರಕರಣ : ತಂದೆ ಸೇರಿ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್

11/04/2026 10:57 AM

ದ್ವಿತೀಯ PUC ನಂತರದ `ಟಾಪ್-10 ಗೋಲ್ಡನ್ ಕೋರ್ಸ್‌’ ಗಳು : ಜಾಬ್ ಪಕ್ಕಾ , ಲಕ್ಷಾಂತರ ರೂ. ಸಂಬಳ.!

11/04/2026 10:56 AM

ALERT : ಬೆಂಗಳೂರಿನಲ್ಲಿ ‘ಹೀಟ್ ಸ್ಟ್ರೋಕ್’ ಭೀತಿ : ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ

11/04/2026 10:50 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶಿವಮೊಗ್ಗ: ನಮ್ಮ ಸರ್ಕಾರ ರೈತರ ಪರ ಒಲವು ಇರುವಂತದ್ದು- ಶಾಸಕ ಗೋಪಾಲಕೃಷ್ಣ ಬೇಳೂರು
KARNATAKA

ಶಿವಮೊಗ್ಗ: ನಮ್ಮ ಸರ್ಕಾರ ರೈತರ ಪರ ಒಲವು ಇರುವಂತದ್ದು- ಶಾಸಕ ಗೋಪಾಲಕೃಷ್ಣ ಬೇಳೂರು

By kannadanewsnow0918/09/2025 5:35 PM

ಶಿವಮೊಗ್ಗ: ನಮ್ಮ ಸರ್ಕಾರ ರೈತರ ಪರವಾಗಿದೆ. ರೈತರ ಪರ ಒಲವಿರುವಂತ ಸರ್ಕಾರ ನಮ್ಮದಾಗಿದೆ. ಈ ರೈತರಿಗೆ ಸಾಲ ಸೌಲಭ್ಯ ಒದಗಿಸಲು ನಬಾರ್ಡ್ ನಿಂದ ಹಣ ಬಿಡುಗಡೆ ಮಾಡಬೇಕು ಎಂಬುದಾಗಿ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಒತ್ತಾಯಿಸಿದರು.

ಇಂದು ತಾಳಗುಪ್ಪದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸರ್ವಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿದಂತ ಅವರು, ಡಿಸಿಸಿ ಬ್ಯಾಂಕ್ ಗಳಲ್ಲಿ ರಾಜಕೀಯ ಹಸ್ತಕ್ಷೇಪವಿರಬಾರದು. ಅವುಗಳು ರಾಜಕೀಯ ಹೊರತಾಗಿ ಇರಬೇಕು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಗಳು ರೈತರ ಏಳಿಗೆಗಾಗಿ ಕಟ್ಟಿರೋವಂತದ್ದು ಎಂಬುದಾಗಿ ಅಭಿಪ್ರಾಯ ಪಟ್ಟರು.

ರೈತರ ಮೇಲೆ ನಂಬಿಕೆಯಿಂದ ಡಿಸಿಸಿ ಬ್ಯಾಂಕ್ ನಿಂದ ಸಾಲಸೌಲಭ್ಯ ನೀಡಲಾಗುತ್ತಿದೆ. ಅಷ್ಟೇ ರೈತರು ನಂಬಿಕೆಯನ್ನು ಉಳಿಸಿಕೊಂಡು ಮರುಪಾವತಿ ಕೂಡ ಮಾಡುತ್ತಿದ್ದಾರೆ. ರೈತರು ಕಟ್ಟುವಂತ ಮರುಪಾವತಿ ಸಾಲಗಳಿಂದಲೇ ಡಿಸಿಸಿ ಬ್ಯಾಂಕ್ ಗಳು ಇಷ್ಟು ದೊಡ್ಡ ಮಟ್ಟಕ್ಕೆ ರಾಜ್ಯದಲ್ಲಿ ಬೆಳೆಯಲು ಸಾಧ್ಯವಾಗಿದೆ. ರೈತರು ಸಾಲ ಮರುಪಾವತಿಸಿ ಎಂದರು.

ಕೇಂದ್ರ ಸರ್ಕಾರದಿಂದ 200 ಕೋಟಿ ನಬಾರ್ಡ್ ಹಣ ಬಿಡುಗಡೆ ಆಗಬೇಕಿತ್ತು. ಆದರೇ ಅದು ಆಗದೇ ರೈತರಿಗೆ ಸಾಲಸೌಲಭ್ಯ ದೊರೆಯದೇ ಕಷ್ಟವಾಗಿದೆ ಎಂಬುದಾಗಿ ಹೇಳಿದರು.

ಸಂಘದಿಂದ ಕಟ್ಟಡ ನಿರ್ಮಾಣಕ್ಕೆ ಅನುದಾನ ಕೋರಿದರ ಬಗ್ಗೆ ಪ್ರಸ್ತಾಪಿ ಮಾತನಾಡಿದಂತ ಶಾಸಕ ಗೋಪಾಲಕೃಷ್ಣ ಬೇಳೂರು ಅವರು, ಜಿಲ್ಲಾ ಉಸ್ತುವಾರಿ ಸಚಿವ, ಈ ಕ್ಷೇತ್ರದ ಶಾಸಕರಾಗಿರುವಂತ ಮಧು ಬಂಗಾರಪ್ಪ ಜೊತೆಗೆ ಚರ್ಚಿಸುತ್ತೇನೆ. ಅವರಿಂದ ತಾಳಗುಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡಕ್ಕೆ ಬೇಕಿರುವಂತ ಅನುದಾನ ಕೊಡಿಸೋದಕ್ಕೆ ಪ್ರಯತ್ನಿಸುತ್ತೇನೆ. ನಾನು ಕೂಡ ಡಿಸಿಸಿ ಬ್ಯಾಂಕ್ ನಿಂದ ಎಷ್ಟು ನೆರವು ಸಿಗಲಿದೆಯೋ ಅದನ್ನು ದೊರಕಿಸಿಕೊಡುವಂತ ಕೆಲಸ ಮಾಡಲಿದ್ದೇನೆ ಎಂದರು.

ಈ ಕ್ಷೇತ್ರದ ಜನರನ್ನು ನಾನೆಂದು ಮರೆಯುವುದಿಲ್ಲ. 2004ರಲ್ಲಿ ನನಗೆ ಶಾಸಕನಾಗುವಂತ ಅವಕಾಶ ಮಾಡಿಕೊಟ್ಟಿದ್ದು ಈ ಜನರು. ತಾಳಗುಪ್ಪ ವ್ಯಾಪ್ತಿಯ ಜನರ ಸೇವೆಗೆ ನಾನು ಸದಾಸಿದ್ಧ ಎಂದು ಹೇಳಿದರು.

ತಾಳಗುಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಂಜುನಾಥ್ ಕಗ್ಗೆ ಮರತ್ತೂರು ಮಾತನಾಡಿ, ನಮ್ಮ ಸಂಘವು ಈ ವರ್ಷ 7,27,381 ಲಾಭಾಂಶವನ್ನು ಪಡೆದಿರುತ್ತದೆ. ಇದಕ್ಕೆಲ್ಲ ಸಂಘದ ಸದಸ್ಯರು ಸಾಲವನ್ನು ಸಕಾಲಕ್ಕೆ ಮರುಪಾವತಿಸಿದ್ದೇ ಕಾರಣವಾಗಿದೆ ಎಂದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಒಟ್ಟು 1 ಕೋಟಿ 9 ಲಕ್ಷದ 47,600 ಷೇರು ಹಣ ಬಂದಿದೆ. 5 ಕೋಟಿ 9 ಲಕ್ಷ ಠೇವಣಿಯನ್ನು ಇಡಲಾಗಿದೆ. 9 ಕೋಟಿ 50 ಲಕ್ಷವನ್ನು ಈ ವರ್ಷ ಸಾಲವಾಗಿ ರೈತರಿಗೆ ನೀಡಲಾಗಿದೆ. ನಮ್ಮಲ್ಲಿ ಒಟ್ಟು 1,639 ಷೇರುದಾರರು ಇದ್ದಾರೆ ಎಂಬುದಾಗಿ ತಿಳಿಸಿದರು.

ಈ ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಪ್ರಹ್ಲಾದ್ ಪ್ರಾರ್ಥಿಸಿದರೇ, ಶ್ರೀಕಾಂತ್ ಗುಡ್ಡೇಮನೆ ಸ್ವಾಗತಿಸಿದರು, ಮಾಜಿ ಉಪಾಧ್ಯಕ್ಷ ಸುರೇಶ್.ಕೆ.ಹೆಚ್ ವಂದಿಸಿದರು. ಪ್ರಹ್ಲಾದ್ ಪ್ರಾರ್ಥಿಸಿದರು. ಈ ಸಭೆಯಲ್ಲಿ ಉಪಾಧ್ಯಕ್ಷ ಅಣ್ಣಪ್ಪ.ಸಿ, ನಿರ್ದೇಶಕರಾದಂತ ಸುರೇಶ್ ಕೆ ಹೆಚ್, ಕೆ ಆರ್ ಮುರಳೀಧರ, ರಾಮಪ್ಪ ಬಿ.ಸಿ, ಅಶೋಕ್.ಆರ್, ಜಗದೀಶ್ ಸುಬ್ರಾಯ ನಾಯ್ಕ್, ಬಿ.ಲಕ್ಷ್ಮಣ್, ಸ್ವಪ್ನ.ಎಸ್, ಶಶಿಕಲಾ, ಕ್ಷೇತ್ರಾಧಿಕಾರಿ ಸಂತೋಷ್ ಕುಮಾರ್,  ಸೇರಿದಂತೆ ಇತರರು ಹಾಜರಿದ್ದರು.

ತಾಳಗುಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹೇಂದ್ರ.ಹೆಚ್.ಆರ್, ಸಿಬ್ಬಂದಿಗಳಾದಂತ ಮಾರಾಟ ಗುಮಾಸ್ತ ತಿರುಪತಿ ಡಿ.ಜಿ, ಅಟೆಂಡರ್ ಗಣಪತಿ ಎಂ.ಡಿ, ಸಹಾಯಕರಾದ ಮಂಜಪ್ಪ, ಸವಿತಾ, ಮೇಘರಾಜ, ಜ್ಯೋತಿ, ಪಿಗ್ಮಿ ಸಂಗ್ರಹಕಾರ ಸುರೇಶ್.ಹೆಚ್, ಸಿದ್ದಲಿಂಗೇಶ್.ಎಸ್, ಆರ್ ಡಿ ಸಂಗ್ರಹಕಾರರಾದ ಯಶೋಧಾ.ವಿ, ನರಸಿಂಹಮೂರ್ತಿ, ಶೋಭಾ, ನವೀನ್ ಉಪಸ್ಥಿತರಿದ್ದರು.

ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು

ಚುನಾವಣಾ ಅಕ್ರಮದ ಬಗ್ಗೆ ಕಾಂಗ್ರೆಸ್‌ ನಾಯಕರು ಮಾತಾಡುತ್ತಾರೆಯೇ ಹೊರತು ದಾಖಲೆ ನೀಡ್ತಿಲ್ಲ: ಆರ್‌.ಅಶೋಕ್

ಕರ್ನಾಟಕಕ್ಕೆ ಯೂರಿಯಾ ತ್ವರಿತವಾಗಿ ಪೂರೈಸಿ: ಕೇಂದ್ರ ಸಚಿವ ಶಿವರಾಜ್ ಸಿಂಗ್ ಗೆ ರಣದೀಪ್ ಸುರ್ಜೇವಾಲ ಪತ್ರ

Share. Facebook Twitter LinkedIn WhatsApp Email

Related Posts

ಉತ್ತರಕನ್ನಡ : ಆಸ್ತಿಗಾಗಿ ಹೆತ್ತ ಮಗನ ಬರ್ಬರ ಹತ್ಯೆ ಪ್ರಕರಣ : ತಂದೆ ಸೇರಿ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್

11/04/2026 10:57 AM1 Min Read

ದ್ವಿತೀಯ PUC ನಂತರದ `ಟಾಪ್-10 ಗೋಲ್ಡನ್ ಕೋರ್ಸ್‌’ ಗಳು : ಜಾಬ್ ಪಕ್ಕಾ , ಲಕ್ಷಾಂತರ ರೂ. ಸಂಬಳ.!

11/04/2026 10:56 AM2 Mins Read

ALERT : ಬೆಂಗಳೂರಿನಲ್ಲಿ ‘ಹೀಟ್ ಸ್ಟ್ರೋಕ್’ ಭೀತಿ : ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ

11/04/2026 10:50 AM2 Mins Read
Recent News

ಉತ್ತರಕನ್ನಡ : ಆಸ್ತಿಗಾಗಿ ಹೆತ್ತ ಮಗನ ಬರ್ಬರ ಹತ್ಯೆ ಪ್ರಕರಣ : ತಂದೆ ಸೇರಿ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್

11/04/2026 10:57 AM

ದ್ವಿತೀಯ PUC ನಂತರದ `ಟಾಪ್-10 ಗೋಲ್ಡನ್ ಕೋರ್ಸ್‌’ ಗಳು : ಜಾಬ್ ಪಕ್ಕಾ , ಲಕ್ಷಾಂತರ ರೂ. ಸಂಬಳ.!

11/04/2026 10:56 AM

ALERT : ಬೆಂಗಳೂರಿನಲ್ಲಿ ‘ಹೀಟ್ ಸ್ಟ್ರೋಕ್’ ಭೀತಿ : ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ

11/04/2026 10:50 AM

ದ್ವಿತೀಯ ಪಿಯುಸಿ ಪಾಸಾದವರಿಗೆ ಸಿಗುವ `ಸರ್ಕಾರಿ ಉದ್ಯೊಗ’ಗಳು ಯಾವುವು? ಇಲ್ಲಿದೆ ಸಂಪೂರ್ಣ ಮಾಹಿತಿ

11/04/2026 10:39 AM
State News
KARNATAKA

ಉತ್ತರಕನ್ನಡ : ಆಸ್ತಿಗಾಗಿ ಹೆತ್ತ ಮಗನ ಬರ್ಬರ ಹತ್ಯೆ ಪ್ರಕರಣ : ತಂದೆ ಸೇರಿ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್

By kannadanewsnow0511/04/2026 10:57 AM KARNATAKA 1 Min Read

ಉತ್ತರಕನ್ನಡ : ಆಸ್ತಿ ವಿಚಾರಕ್ಕೆ ಮಗನನ್ನೇ ಕೊಲೆ ಮಾಡಿದ ತಂದೆ ಹಾಗೂ ಇಬ್ಬರು ಸಂಬಂಧಿಕರು ಸೇರಿದಂತೆ ಮೂವರು ಅಪರಾಧಿಗಳಿಗೆ ಜೀವಾವಧಿ…

ದ್ವಿತೀಯ PUC ನಂತರದ `ಟಾಪ್-10 ಗೋಲ್ಡನ್ ಕೋರ್ಸ್‌’ ಗಳು : ಜಾಬ್ ಪಕ್ಕಾ , ಲಕ್ಷಾಂತರ ರೂ. ಸಂಬಳ.!

11/04/2026 10:56 AM

ALERT : ಬೆಂಗಳೂರಿನಲ್ಲಿ ‘ಹೀಟ್ ಸ್ಟ್ರೋಕ್’ ಭೀತಿ : ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ

11/04/2026 10:50 AM

ದ್ವಿತೀಯ ಪಿಯುಸಿ ಪಾಸಾದವರಿಗೆ ಸಿಗುವ `ಸರ್ಕಾರಿ ಉದ್ಯೊಗ’ಗಳು ಯಾವುವು? ಇಲ್ಲಿದೆ ಸಂಪೂರ್ಣ ಮಾಹಿತಿ

11/04/2026 10:39 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.