ಶಿವಮೊಗ್ಗ: ಗ್ರಾಮ ಸುಧಾರಣಾ ಸಮಿತಿ ಮತ್ತು ಕಾನು ರಕ್ಷಣಾ ಹೋರಾಟ ಸಮಿತಿಯಿಂದ ಬರದವಳ್ಳಿ ಗ್ರಾಮದಲ್ಲಿನ ಕಾನು ಉಳಿಸುವಂತೆ, ಕಂದಾಯ ಇಲಾಖೆಯಿಂದ ನ್ಯಾಯಾಲಯಕ್ಕೆ ಸೂಕ್ತ ದಾಖಲೆ ಒದಗಿಸುವಂತೆ ಆಗ್ರಹಿಸಿ ಅಕ್ಟೋಬರ್.9ರಂದು ಬೃಹತ್ ಪಾದಯಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಸುಧಾರಣಾ ಸಮಿತಿ ಹಾಗೂ ಕಾನು ರಕ್ಷಣಾ ಹೋರಾಟ ಸಮಿತಿಯ ಮುಖಂಡರು, ದಿನಾಂಕ : 09-10-2024ನೇ ಬುಧವಾರ ಬೆಳಿಗ್ಗೆ 9-00 ಗಂಟೆಗೆ ಸರಿಯಾಗಿ ಬರದವಳ್ಳಿ ರಾಮೇಶ್ವರ ದೇವಸ್ಥಾನದಿಂದ ಸಿರಿವಂತೆ ಗ್ರಾಮದ ಎನ್.ಹೆಚ್. 206 ಮಾರ್ಗವಾಗಿ ಸಾಗರ ತಾಲ್ಲೂಕು ಕಛೇರಿ ವರೆಗೆ ಶಾಂತಿಯುತವಾಗಿ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಪಾದಯಾತ್ರೆಯ ಉದ್ದೇಶವು ಬರದವಳ್ಳಿ ಗ್ರಾಮದ ‘ಸರ್ವೆ ನಂ. 275 & 285 ಸರ್ಕಾರಿ ಕಾನು ಸರ್ಕಾರಿ ಕಾನಾಗಿಯೇ ಆರ್.ಟಿ.ಸಿ.(ಪಾಣಿ)ಯಲ್ಲಿ ಸರ್ಕಾರಿ ಕಾನಾಗಿಯೇ ಮುಂದುವರಿಸಬೇಕು ಎಂದು ಮತ್ತು ಬರದವಳ್ಳಿ ಗ್ರಾಮದ ಕಾನು ನೂರಾರು ವರ್ಷದ ಇತಿಹಾಸ ಹೊಂದಿದ್ದು ಈ ಕಾನಿಗೂ ಬರದವಳ್ಳಿ ಗ್ರಾಮಕ್ಕೂ ಅವಿನೋಭಾವ ಸಂಬಂಧ ಇರುತ್ತದೆ. ಈ ಕಾನೂನು ನಮ್ಮ ಪೂರ್ವಜರು ಉಳಿಸಿ ಬೆಳಸಿಕೊಂಡು ಬಂದಿರುತ್ತಾರೆ. ಅದೇ ಪ್ರಕಾರ ಅಂದಿನಿಂದ ಈ ವರೆಗೂ ನಮ್ಮ ಬರದವಳ್ಳಿ ಗ್ರಾಮಸ್ಥರು ನಮ್ಮ ಕಾನನ್ನು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಕಾಡನ್ನು ಯಾವುದೇ ಅಪಾಯ ಆಗದಂತೆ ಬಹಳ ಜವಾಬ್ದಾರಿಯಿಂದ ರಕ್ಷಣೆ ಮಾಡಿಕೊಂಡು ಬಂದಿರುತ್ತೇವೆ ಎಂದು ಹೇಳಿದರು.
ಪ್ರತಿ ದಿನ 2 ಜನರಂತೆ ಕಾಡನ್ನು ಬೆಳಿಗ್ಗೆ 8-00 ಗಂಟೆಯಿಂದ ಸಂಜೆ 6-00 ಗಂಟೆಯ ವರೆಗೆ ಕಾಯುತ್ತಿದ್ದು ಯಾರೂ ಒಂದು ಗಿಡ ಮರವನ್ನು ಕಡಿಯದಂತೆ ರಕ್ಷಣೆ ಮಾಡಿಕೊಂಡು ಬಂದಿರುತ್ತೇವೆ. ಆದರೇ ಅದೇ ಗ್ರಾಮದ ಒಂದು ಕುಟುಂಬ ಕಾಡನ್ನು ನಾಶ ಮಾಡಿ ಒತ್ತುವರಿ ಮಾಡಿ ಅಕ್ರಮ ಮಾಡಲು ಪ್ರಯತ್ನಿಸುತ್ತಿದ್ದು, ಸರ್ಕಾರಿ ಕಾನನ್ನು ಸ್ವಂತ ಖಾಸಗಿ ಖಾತೆ ಮಾಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಬಹಳ ವರ್ಷದಿಂದ ಉಳಿಸಿ ಬೆಳೆಸಿಕೊಂಡು ಬಂದಿರುವ ಗ್ರಾಮಸ್ಥರು ಇದರ ವಿರುದ್ಧ ತಕರಾರು ಇರುತ್ತದೆ ಎಂದು ಹೇಳಿದರು.
ಬರದವಳ್ಳಿ ಗ್ರಾಮದಲ್ಲಿ ಸುಮಾರು 350 ಕುಟುಂಬಗಳಿದ್ದು 3000 ಜನಸಂಖ್ಯೆ ಹೊಂದಿರುತ್ತಾರೆ ಹಾಗೂ ಸುಮಾರು 2500 ಸಾವಿರ ಜಾನುವಾರುಗಳಿದ್ದು ಎಲ್ಲರೂ ಕೃಷಿ ಕಾರ್ಮಿಕರಾಗಿರುತ್ತಾರೆ. ಈ ಪ್ರಕರಣವೂ ಮಾನ್ಯ ಸಿವಿಲ್ ನ್ಯಾಯಾಲಯದಲ್ಲಿ ಒ.ಎಸ್. 9 / 2023ರಲ್ಲಿ ಪ್ರಕರಣ ದಾಖಲಾಗಿರುತ್ತದೆ. ನ್ಯಾಯಾಲಯಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸರಿಯಾಗಿ ಸ್ಪಂದಿಸಿ ಸರಿಯಾದ ದಾಖಲಾತಿಗಳನ್ನು ಒದಗಿಸಿ ನ್ಯಾಯಾಲಯಕ್ಕೆ ಇದು ಸರ್ಕಾರಿ ಕಾನು ಎಂದು ಮನವರಿಕೆ ಮಾಡಿಕೊಡಬೇಕಾಗಿ ಅಧಿಕಾರಿಗಳನ್ನು ಒತ್ತಾಯಿಸಲು ಈ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಪಾದಯಾತ್ರೆಗೆ ರೈತರು, ಕಾಲೇಜು ವಿದ್ಯಾರ್ಥಿಗಳು, ಎಲ್ಲಾ ರೀತಿಯ ಸಂಘ-ಸಂಸ್ಥೆಗಳು ಎಲ್ಲಾ ಘಟಕದ ಜನಪ್ರತಿನಿಧಿಗಳು ಭಾಗವಹಿಸಿ ಈ ಪಾದಯಾತ್ರೆಯನ್ನು ಯಶಸ್ವಿಗೊಳಿಸಿಕೊಡಬೇಕಾಗಿ ವಿನಂತಿಸಿದ್ದಾರೆ.
ಇವು ಗ್ಯಾಸ್ ಮತ್ತು ಹೊಟ್ಟೆ ಉಬ್ಬರಕ್ಕೆ ಕಾರಣವಾಗುವ 8 ಪಾನೀಯಗಳು, ತಪ್ಪಿಸಿದ್ರೇ ‘ಗ್ಯಾಸ್ಟ್ರಿಕ್’ ಕ್ಲಿಯರ್
‘ಹಾರ್ಡ್ ಡ್ರಿಂಕ್ಸ್’ ಕುಡಿಯೋದಕ್ಕಿಂತ ‘ಬಿಯರ್’ ಕುಡಿಯುವುದು ಆರೋಗ್ಯಕರವೇ? ಇಲ್ಲಿದೆ ಮಾಹಿತಿ