ಶಿವಮೊಗ್ಗ : ಚಾಲಕನ ನಿಯಂತ್ರಣ ತಪ್ಪಿದ ಕೆಎಸ್ಆರ್ಟಿಸಿ ಬಸ್ ಒಂದು ಡಿವೈಡರ್ ಏರಿದ ಘಟನೆ ಇಂದು ಶಿವಮೊಗ್ಗ ಜಿಲ್ಲೆಯ ಹೊಳೆ ಬಸ್ ನಿಲ್ದಾಣ ಬಳಿ ನಡೆದಿದೆ.ಅಪಘಾತದಿಂದ ಬಸ್ಸಿನ ಮುಖ್ಯದ್ವಾರ ಜಾಮ್ ಆಗಿದ್ದರಿಂದ ತುರ್ತು ಬಾಗಿಲು ಮೂಲಕ ಪ್ರಯಾಣಿಕರನ್ನು ಇಳಿಸಲಾಯಿತು. ಘಟನೆಯಿಂದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಭದ್ರಾವತಿಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ ಮೇಲೆ ಏರಿದೆ. ಈ ವೇಳೆ ಬಸ್ಸಿನ ಮೇನ್ ಡೋರ್ ಜಾಮ್ ಆಗಿತ್ತು. ಹಾಗಾಗೆ ಬಾಗಿಲು ತೆಗೆಯಲು ಪ್ರಯಾಣಿಕರು ಪರದಾಡಿದ್ದಾರೆ.
ಬಳಿಕ ತಕ್ಷಣ ಬಸ್ಸಿನ ತುರ್ತು ನಿರ್ಗಮನದ ಕಿಟಕಿಯಿಂದ ಪ್ರಯಾಣಿಕರು ಇಳಿದಿದ್ದಾರೆ. ಘಟನೆಯಲ್ಲಿ ಬಸ್ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತದಿಂದ ಬಸ್ಸಿನ ಮುಂಭಾಗ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ದೊಡ್ಡ ಅನಾಹುತ ತಪ್ಪಿದೆ.