ಶಿವಮೊಗ್ಗ : ಕ್ಷಕಿರಣ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನದ ಅಳವಡಿಕೆಯೊಂದಿಗೆ ಹೊಸಹೊಸ ಆವಿಷ್ಕಾರಗಳು ಮೊದಲ್ಗೊಳ್ಳುತ್ತಿದ್ದು, ಹೊಸದಾಗಿ ಈ ಕ್ಷೇತ್ರಕ್ಕೆ ಬರುವವರು ಇದರ ಅರಿವು ಹೊಂದಿರಬೇಕು ಎಂದು ಹೊನ್ನಾವರ ರಾಂಜ್ಟನ್ ಪ್ಯಾರಾ ಮೆಡಿಕಲ್ ಸೈನ್ಸ್ ಸಂಸ್ಥೆಯ ಮುಖ್ಯಸ್ಥ ಸುರೇಶ್ ಟಿ. ಹೇಳಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಶೃಂಗೇರಿ ಶಂಕರಮಠದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ರೇಡಿಯಾಲಜಿ ಇಮೆಜಿಂಗ್ ಅಸೋಶಿಯೇಷನ್, ರಾಂಟ್ಜನ್ ಇನ್ಸಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಸೈನ್ಸ್ ಮತ್ತು ಶಿವಮೊಗ್ಗ ಜಿಲ್ಲಾ ರೆಡಿಯಾಲಜಿ ಅಸೋಶಿಯೇಷನ್ ವತಿಯಿಂದ ಏರ್ಪಡಿಸಿದ್ದ ರೇಡಿಯೇಷನ್ ಪ್ರೊಟೆಕ್ಷನ್ ಇನ್ ಡೈಯಾಗ್ನಸ್ಟಿಕ್ ರೇಡಿಯಾಲಜಿ ಕುರಿತ ವೈಜ್ಞಾನಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದ ಅವರು, ರೇಡಿಯಾಲಜಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ವೈಜ್ಞಾನಿಕ ತರಬೇತಿ ಅತ್ಯಾಗತ್ಯ. ತಂತ್ರಜ್ಞಾನ ವಿಜ್ಞಾನ ಕ್ಷೇತ್ರದ ಬೆಳವಣಿಗೆ ಅತಿವೇಗವಾಗಿ ಆಗುತ್ತಿದೆ. ಆದರೂ ಗುಣಮಟ್ಟದ ಸುಧಾರಣೆಗೆ ಇನ್ನೂ ಒತ್ತು ನೀಡಬೇಕು. ಬಿಎಸ್ಸಿ., ಎಂಎಸ್ಸಿ. ಪದವಿ ಪಡೆದವರಿಗೆ ಈ ಕ್ಷೇತ್ರದಲ್ಲಿ ಕೆಲಸ ಮಾಡಲು ಅವಕಾಶ ಇರುತ್ತದೆ. ಉದ್ಯೋಗ ಸಿಗುತ್ತದೆ ಎಂದು ಓದುವ ಜೊತೆಗೆ ಹೆಚ್ಚೆಚ್ಚು ತಿಳಿದುಕೊಳ್ಳಲು ರೇಡಿಯಾಲಜಿ ಅಭ್ಯಾಸ ಮಾಡಿ ಎಂದು ಸಲಹೆ ನೀಡಿದರು.
ಅಭಿನಂದಿತರನ್ನು ಕುರಿತು ಮಾತನಾಡಿದ ಆರೋಗ್ಯ ಇಲಾಖೆ ನೌಕರರ ಒಕ್ಕೂಟದ ಹಿರಿಯ ಸಲಹೆಗಾರ ಮಾ.ಸ.ನಂಜುಂಡಸ್ವಾಮಿ, ನಾವು ಕೆಲಸ ಮಾಡುವ ಕ್ಷೇತ್ರದ ಬಗ್ಗೆ ನಮಗೆ ಆಸಕ್ತಿ ಇರಬೇಕು. ರೇಡಿಯಾಲಜಿ ಕ್ಷೇತ್ರಕ್ಕೆ ವೈದ್ಯರ ಕೊಡುಗೆ ಅಪಾರವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಕೀಲುಮೂಳೆ ತಜ್ಞ ಡಾ. ಕಿಶನ್ ಭಾಗವತ್ ಮತ್ತು ಡಾ. ನವೀನ್‌ರಾಜ್ ಹೆಚ್ಚಿನ ಸಹಕಾರ ನೀಡುತ್ತಿದ್ದಾರೆ. ಸಾಗರದಲ್ಲಿಯೆ ಎಂಆರ್ ಸ್ಕ್ಯಾನಿಂಗ್, ರೇಡಿಯಾಲಜಿ ಘಟಕ ತೆರೆದು ಜನರಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹವರನ್ನು ಅಭಿನಂದಿಸುವ ಮೂಲಕ ಅವರ ಸೇವೆಯನ್ನು ಗುರುತಿಸಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಸಾಗರದ ಭಾಗವತ್ ಆಸ್ಪತ್ರೆಯ ಕೀಲು ಮತ್ತು ಮೂಳೆ ಸರ್ಜನ್ ಡಾ. ಕಿಶನ್ ಆರ್. ಭಾಗವತ್ ಮತ್ತು ಡಾ. ನವೀನ್ ರಾಜ್ ಅವರನ್ನು ಅಭಿನಂದಿಸಲಾಯಿತು.
ಈ ವೇಳೆ ಶಿವಮೊಗ್ಗ ಜಿಲ್ಲಾ ಸಂಘದ ಶಂಕರಯ್ಯ ಸಿ. ಗುರುವಿನ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಅಶ್ವಿನಿಕುಮಾರ್, ಶಿವಮೊಗ್ಗ DHO ಡಾ. ನಟರಾಜ್ ಕೆ.ಎಸ್., ಸಿದ್ದಾಚಾರಿ ಸಿ., ಸತೀಶ್ ಕುಮಾರ್, ಸಚಿನ್ ಎ.ಎಂ., ಆರ್.ಎಸ್.ಪಾಟೀಲ್, ರಾಜಶೇಖರ್ ಎಚ್. ಇಳಿಗೇರ್, ಅನ್ನಪೂರ್ಣ ಸಿದ್ದೇಶ್, ರವಿ ಆರ್.ಎನ್, ಅಶೋಕ್. ಎಸ್, ಪ್ರಸಾದ್ ಸಂಗೊಳ್ಳಿ, ಅನಿಲ್ ವೆಲೇರಿಯನ್ ಡಿಸೋಜ ಸೇರಿದಂತೆ ಇನ್ನಿತರರು ಹಾಜರಿದ್ದರು.