ಶಿವಮೊಗ್ಗ : ಗ್ರಾಹಕರ ಸೇವೆಗೆ ಗಣಪತಿ ಬ್ಯಾಂಕ್ ಕಟಿಬದ್ದವಾಗಿದ್ದು, ಗ್ರಾಹಕಸ್ನೇಹಿ ಅನೇಕ ಯೋಜನೆ ಜಾರಿಗೆ ತಂದಿದ್ದೇವೆ ಎಂದು ಗಣಪತಿ ಬ್ಯಾಂಕ್ ಅಧ್ಯಕ್ಷ ಆರ್.ಶ್ರೀನಿವಾಸ್ ತಿಳಿಸಿದರು.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಭದ್ರಕಾಳಿ ಸಭಾಭವನದಲ್ಲಿ ಭಾನುವರ ಶ್ರೀ ಗಣಪತಿ ಅರ್ಬನ್ ಕೋ. ಆಪರೇಟಿವ್ ಬ್ಯಾಂಕ್ ವತಿಯಿಂದ ಏರ್ಪಡಿಸಿದ್ದ 110ನೇ ವರ್ಷ ಸರ್ವಸದಸ್ಯರ ಸಭೆಯನ್ನು ಉದ್ಘಾಟಿಸಿ, ಪ್ರತಿಭಾ ಪುರಸ್ಕಾರ ನೆರವೇರಿಸಿ ಮಾತನಾಡಿದಂತ ಅವರು, ಸಹಕಾರಿ ಸಂಸ್ಥೆಗಳು ಸದೃಢವಾಗಿ ನಡೆಯುವುದು ಕಷ್ಟಸಾಧ್ಯ. ಅನೇಕ ಸವಾಲುಗಳ ನಡುವೆಯೂ ಸಂಸ್ಥೆ 110 ವರ್ಷಗಳನ್ನು ಪೂರೈಸಿದೆ. ಜೊತೆಗೆ ರಾಜ್ಯದಲ್ಲಿಯೆ ಅತ್ಯಂತ ಮಾದರಿ ಸಹಕಾರಿ ಎನ್ನುವ ಹೆಗ್ಗಳಿಕೆ ನಮ್ಮ ಸಂಸ್ಥೆ ಹೊಂದಿದೆ ಎಂದರು.
ಸಿಬಿಎಸ್ ತಂತ್ರಾಂಶ ಹೊಂದಿದ್ದು, ಯುಪಿಐ ಸೌಲಭ್ಯ, ನೆಫ್ಟ್, ಆರ್.ಟಿ.ಜಿ.ಎಸ್., ಪಿಓಎಸ್, ಮೊಬೈಲ್ ಬ್ಯಾಂಕಿಂಗ್, ಪಿಎಂಎಸ್‌ಬಿವೈ ಯೋಜನೆಯನ್ನು ಸಹ ಬ್ಯಾಂಕ್ ಹೊಂದಿದ್ದು, ರಾಜ್ಯದಲ್ಲಿಯೆ ಸಹಕಾರಿಯೊಂದು ಹಲವು ಸೇವೆಯನ್ನು ಹೊಂದಿದ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
ಬ್ಯಾಂಕ್ ವರ್ಷದಿಂದ ವರ್ಷಕ್ಕೆ ಆರ್ಥಿಕ ವಹಿವಾಟುವಿನಲ್ಲಿ ಉನ್ನತ ಮಟ್ಟ ತಲುಪುತ್ತಿದ್ದು ಸಾಲವಸೂಲಾತಿ ಸಹ ಯಶಸ್ವಿಯಾಗಿ ನಡೆಯುತ್ತಿದೆ. ಬ್ಯಾಂಕ್‌ಗೆ ಬರುವ ಹಿರಿಯರಿಗೆ ಅನುಕೂಲವಾಗಲಿ ಎಂದು ಲಿಫ್ಟ್ ಸೌಲಭ್ಯವನ್ನು ಕಲ್ಪಿಸಲಾಗಿದೆ. ಷೇರುದಾರರು ಸಂಸ್ಥೆಯ ಜೊತೆ ನಿರಂತರ ವಹಿವಾಟು ನಡೆಸುವ ಮೂಲಕ ಸಂಸ್ಥೆಯ ಅಭಿವೃದ್ದಿಗೆ ಸಹಕಾರ ನೀಡಬೇಕು ಎಂದರು.
ಈ ವೇಳೆ ಗಣಪತಿ ಬ್ಯಾಂಕ್ ಉಪಾಧ್ಯಕ್ಷ ವಿ.ಶಂಕರ್, ಆಡಳಿತ ಮಂಡಳಿಯ ದೇವೇಂದ್ರಪ್ಪ, ವಿನಾಯಕ ರಂಗಧೋಳ್, ಮಧುಮಾಲತಿ, ಸರಸ್ವತಿ ನಾಗರಾಜ್, ಡಿಶ್ ಗುರು, ಗಜಾನನ ಜೋಯ್ಸ್, ರಮೇಶ್, ನಾರಾಯಣ, ಬಸಲಿಂಗಪ್ಪ, ವೈ.ಮೋಹನ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಲಲಿತಾಂಬಿಕಾ, ಸುಧಾ ಕೆ.ವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸಾಲ ವಸೂಲಾತಿ ಹೆಸರಲ್ಲಿ ರೈತರಿಗೆ ನೀಡುತ್ತಿರುವ ಕಿರುಕುಳ ತಕ್ಷಣ ನಿಲ್ಲಿಸಬೇಕು: ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯ
ಮನುಷ್ಯ ತನ್ನ ದುರಾಸೆಯಿಂದ ಬದುಕಿನ ಮೌಲ್ಯವನ್ನು ಕಳೆದುಕೊಳ್ಳುತ್ತಿದ್ದಾನೆ: ನಿವೃತ್ತ ನ್ಯಾ.ಸಂತೋಷ್ ಹೆಗಡೆ