ಸೊರಬ: ಶ್ರೀ ರೇಣುಕಾಂಬಾದೇವಿ ದಸರಾ ಉತ್ಸವ ಆಚರಣಾ ಸಮಿತಿ ವತಿಯಿಂದ ತಾಲ್ಲೂಕಿನ ಚಂದ್ರಗುತ್ತಿ ಗ್ರಾಮದಲ್ಲಿ ನಡೆಯುವ ದಸರಾ ದಶಮಾನೋತ್ಸವ ಆಚರಣೆ ವರ್ಷದ ಪ್ರಯುಕ್ತ ಜಂಬೂ ಸವಾರಿ ಹಾಗೂ ಜಂಗಿ ಕುಸ್ತಿಯನ್ನು ಆಯೋಜಿಸಲಾಗಿದೆ. ಸೆಪ್ಟೆಂಬರ್.28ರಂದು ಜಂಗಿ ಕುಸ್ತಿ, ಅಕ್ಟೋಬರ್.2ರಂದು ಜಂಬೂ ಸವಾರಿ ಮೆರವಣಿಗೆ ನಡೆಯಲಿದೆ ಎಂದು ರೇಣುಕಾಂಬಾ ದಸರಾ ಉತ್ಸವ ಸಮಿತಿ ಅಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ ತಿಳಿಸಿದ್ದಾರೆ.
ಇಂದು ಚಂದ್ರಗುತ್ತಿ ದಸರಾ ಮಹೋತ್ಸವದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದಂತ ಅವರು, ಸೆಪ್ಟೆಂಬರ್ 22ರಂದು ಸೋಮವಾರ ಸಂಜೆ 7-30 ಗಂಟೆಗೆ ಚಂದ್ರಗುತ್ತಿ ಶ್ರೀ ರೇಣುಕಾಂಬಾ ಕಲ್ಯಾಣ ಮಂಟಪ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಾಗರ ಉಪ ವಿಭಾಗಾಧಿಕಾರಿ ವೀರೇಶ್, ಚಂದ್ರಗುತ್ತಿ ಗ್ರಾಮ ಸರಿತಾ ಅಧ್ಯಕ್ಷೆ ಕೃಷ್ಣಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್. ಗಣಪತಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರೇಣುಕಾಪ್ರಸಾದ್ ಎಂ.ಬಿ., ಸದಸ್ಯ ರತ್ನಾಕರ ಎಂ.ಪಿ.,ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಎನ್.ಜಿ. ನಾಗರಾಜ, ಶ್ರೀ ರೇಣುಕಾಂಬಾ ದೇವಿ ದಸರಾ ಉತ್ಸವ ಆಚರಣಾ ಸಮಿತಿ ಉಪಾಧ್ಯಕ್ಷ ರಘು ಸ್ವಾದಿ ಭಾಗವಹಿಸಲಿದ್ದಾರೆ ಎಂದರು.
ಅಂದು ಸಂಜೆ ತರಂಗ ಟ್ರಸ್ಟ್ (ರಿ.) ಸಾಗರ ಅವರಿಂದ ಭರತನಾಟ್ಯ ಮತ್ತು ರೂಪಕ, ನಾಟ್ಯ ಕಾರ್ಯಕ್ರಮ ನಡೆಯಲಿದೆ. ಸೆಪ್ಟೆಂಬರ್ 23ರಂದು ಮಂಗಳವಾರ ಸಂಜೆ 7-30 ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಸಿಗಂದೂರು ಕ್ಷೇತ್ರದ ಧರ್ಮದರ್ಶಿ ಡಾ.ರಾಮಪ್ಪ ಅವರು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಾಜಿ ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನ ಕುಮಾರ್, ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ. ಶೇಖರ್, ಪಿಎಸ್ಐ ನವೀನ್,ವಕೀಲ ವೈ.ಜಿ. ಪುಟ್ಟಸ್ವಾಮಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ನಾಗರಾಜ ಚಿಕ್ಕಸವಿ, ಬೆನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿಲ್ಪಾ ರವಿ, ಉಪಾಧ್ಯಕ್ಷ ಮಂಜು ಮಾವಿನಬಳ್ಳಿಕೊಪ್ಪ, ಸದಸ್ಯರಾದ ಲಕ್ಷ್ಮೀ ಚಂದ್ರಪ್ಪ, ಶಿಲ್ಪಾ ಗಿರಿಗೌಡರ್, ಪ್ರಕಾಶ್ ಮಿರ್ಜಿ, ರಾಜು ಗೌಡ ಹೊಸಬಾಳೆ, ಈರಪ್ಪ ಸಂಗೇರ್ ಭಾಗವಹಿಸಲಿದ್ದಾರೆ. ಅಂದು ಸಂಜೆ ಶ್ರೀ ಸಂಗಮೇಶ್ವರ ನಾಟ್ಯ ಸಂಘ, ಗುಳೇದಗುಡ್ಡ, ಬಾಗಲಕೋಟೆ ಜಿಲ್ಲೆ ಅವರಿಂದ “ಕುಂಟ ಕೋಣ ಮೂಕ ಜಾಣ” ಸಾಮಾಜಿಕ ನಾಟಕ ಪ್ರದರ್ಶನವಿದೆ ಎಂದು ತಿಳಿಸಿದ್ದಾರೆ.
ಸೆಪ್ಟೆಂಬರ್ 24ರಂದು ಬುಧವಾರ ಸಂಜೆ 7-30ಕ್ಕೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಶಿಮುಲ್ ನಿರ್ದೇಶಕ ದಯಾನಂದ ಗೌಡ ಉದ್ಘಾಟಿಸಲಿದ್ದು, ದಸರಾ ಉತ್ಸವ ಸಮಿತಿ ಅಧ್ಯಕ್ಷ ಡಾ. ಆರ್. ಶ್ರೀಧರ ಹುಲ್ತಿಕೊಪ್ಪ ಅವರು ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ತಹಶೀಲ್ದಾರ್ ಮಂಜುಳಾ ಬಿ. ಹೆಗಡಾಳ್, ಸಹಕಾರ ಸಂಘದ ಅಧ್ಯಕ್ಷ ಕೆ. ಮಂಜುನಾಥ ಶೆಣೈ, ಉದ್ಯಮಿ ಭೋಗೇಶ್ ಮಾವಲಿ ವೈದ್ಯ ಡಾ.ಹರ್ಷ, ಬಸವರಾಜ ಗೌಡ, ಸಹಕಾರ ಸಂಘದ ಮಾಜಿ ಅಧ್ಯಕ್ಷ ಶ್ರೀ ಗುತ್ಯಪ್ಪ ಎನ್., ನಾಗಪ್ಪ ಮಿರ್ಜಿ, ಮಾಜಿ ಉಪಾಧ್ಯಕ್ಷ, ಚಂದ್ರಗುತ್ತಿ, ಪರಸಪ್ಪ ಓಲೇಕಾರ್ ತುಳಸಮ್ಮ ಚಂದ್ರಪ್ಪ, ಸಲೀಂ, ಗಣೇಶ್ ಮರಡಿ ಭಾಗವಹಿಸಲಿದ್ದು, ರಾತ್ರಿ 9ಗಂಟೆಗೆ ಮಹಿಷ ಮರ್ದಿನಿ” ಯಕ್ಷ ರಾಘವ ಜನ್ಸಾಲೆ ಯಕ್ಷಗಾನ ಪ್ರದರ್ಶನವಿದೆ ಎಂದರು.
ಸೆಪ್ಟೆಂಬರ್ 25ರಂದು ಗುರುವಾರ ಸಂಜೆ 7-30 ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಮಾಜಿ ಸಂಸದ ಆಯನೂರು ಮಂಜುನಾಥ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಪಿ. ರುದ್ರಗೌಡ,ರಾಜ್ಯ ಭೋವಿ ನಿಗಮದ ಮಾಜಿ ರಾಜ್ಯಾಧ್ಯಕ್ಷ ರವಿಕುಮಾರ್, ಮಾರಪ್ಪ ಎಂ., ಉಮಾಪತಿ, ದರ್ಶನ್, ಬಲೀಂದ್ರಪ್ಪ ಗುಂಜನೂರು. ವಕೀಲ ಸುಧಾಕರ ನಾಯ್ಕ, ಕೃಷ್ಣಮೂರ್ತಿ ಓಲೇಕರ್, ಮಂಜಪ್ಪ ಮಂಚೇರ್, ರವಿ ಎನ್.ಸಿ., ರಾಘವೇಂದ್ರ ಎಂ.ಪಿ. ನಾರಾಯಣಪ್ಪ, ಗೋಪಾಲ ಪೂಜಾರ್, ನಾಗೇಶ್, ಈಶ್ವರಪ್ಪ ನೆಲ್ಲೂರು, ಕೃಷ್ಣ ಕಾಮತ್, ಚಂದ್ರಪ್ಪ ಕತವಾಯಿ, ಪರಮೇಶ್ವರ ಕಾಡಪ್ಪ ಭಾಗವಹಿಸಲಿದ್ದಾರೆ. ಅಂದು ರಾತ್ರಿ 9ಗಂಟೆಗೆ ಕಮರೂರು ಗ್ರಾಮದ ಲಕ್ಷ್ಮೀನರಸಿಂಹ ಯುವಕ ಸಂಘದಿಂದ “ಸಮಾಜ ರೂಪಿಸಿದ ರೌಡಿ” ಸಾಮಾಜಿಕ ನಾಟಕ ಪ್ರದರ್ಶನವಿದೆ ಎಂದು ಹೇಳಿದರು.
ಸೆಪ್ಟೆಂಬರ್ 26ರ ಶುಕ್ರವಾರ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕಾರ್ಕಳ ಶಾಸಕ ಸುನಿಲ್ ಕುಮಾರ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಚಿಕ್ಕಮಗಳೂರು ನ್ಯಾಯಾಧೀಶ ಎಸ್.ಬಿ. ದ್ಯಾವಪ್ಪ ಬಿದರಗೇರಿ, ಸಹಾಯಕ ನಿರ್ದೇಶಕ ಶ್ರೀ ಉಮೇಶ್,ಸಿಪಿಐ ರಾಜಶೇಖರ್, ಚಂದ್ರಗುತ್ತಿ ದೇವಸ್ಥಾನದ ಆಡಳಿತಾಧಿಕಾರಿ ಪ್ರಮೀಳಾ ಕುಮಾರಿ, ಕೃಷಿ ಅಧಿಕಾರಿ ಕುಮಾರ್, ಉದ್ಯಮಿ ಎಲ್ .ಜಿ. ರಾಜಶೇಖರ್, ವಕೀಲ ಸುಮಂತ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜೈಶೀಲಗೌಡ, ವೈದ್ಯ ಡಾ. ನಾಗೇಂದ್ರಪ್ಪ ಭಾಗವಹಿಸಲಿದ್ದಾರೆ. ಅಂದು ರಾತ್ರಿ 9 ಗಂಟೆಗೆ ಶಿವಮೊಗ್ಗ ಸಹಚೇತನ ಕಲಾ ನಾಟ್ಯ ತಂಡದಿಂದ ‘ಸಮೂಹ ನೃತ್ಯ”(ಜಾನಪದ ನೃತ್ಯ) ಕಾರ್ಯಕ್ರಮವಿದೆ ಎಂದರು.
ಸೆಪ್ಟೆಂಬರ್ 27ರಂದು ಶನಿವಾರ ಸಂಜೆ 7-30 ಗಂಟೆಗೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮವಿದ್ದು, ಆದಾಯ ತೆರಿಗೆ ನ್ಯಾಯ ಮಂಡಳಿ ಸದಸ್ಯ ಮಂಜುನಾಥ್ ಮಳಲಗದ್ದೆ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಗೃಹ ಸಚಿವರ ಆಪ್ತ ಕಾರ್ಯದರ್ಶಿ ಚನ್ನಬಸಪ್ಪ, ತಬಲಿ ಬಂಗಾರಪ್ಪ, ಚಂದ್ರಶೇಖರ ಬಾಪಟ್, ಷಣ್ಮುಖಪ್ಪ, ಮಂಜಣ್ಣಸ್ವಾಮಿ, ರಾಜಶೇಖರ ಕೆ.ಎಸ್., ಚಂದ್ರಕಾಂತ, ಲಕ್ಷ್ಮೀ ರವಿ, ಸದಸ್ಯರು, ಲೋಕೇಶ್, ಸುಧಾ ಬಂಗಾರಪ್ಪ, ಪ್ರದೀಪ್ ಗೌಡ, ತಿರುಪತಿ, ಹನುಮಂತಪ್ಪ ಮಂಚೇರ್, ನಾಗರಾಜ ಭಾಗವಹಿಸಲಿದ್ದಾರೆ. ಅಂದು ರಾತ್ರಿ 9 ಗಂಟೆಗೆ ಡಾ. ಸುವರ್ಣ ಮೋಹನ್ ಮತ್ತು ತಂಡ ಅವರಿಂದ ಭರತನಾಟ್ಯಂ ಮತ್ತು ಕಥಕ್ ನೃತ್ಯ ಹಾಗೂ ಸಮೂಹ ಗಾಯನವಿದೆ ಎಂದು ತಿಳಿಸಿದರು.
ಸೆಪ್ಟೆಂಬರ್ 28ರಂದು ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಶಿಮುಲ್ ಅಧ್ಯಕ್ಷ ವಿದ್ಯಾಧರ, ಉಪಾಧ್ಯಕ್ಷ ಎಸ್.ಕೆ. ಮರಿಯಪ್ಪ, ಬಿ. ಮಂಜುನಾಥ್, ಅನಸೂಯಮ್ಮ,ಗಣಪತಿ, ಹೆಚ್.ಕೆ. ಯಶವಂತ, ರವಿಕುಮಾರ ಕೋಡಂಬಿ, ಈರಪ್ಪನಾಯ್ಕ ಹೊರಬೈಲು, ಮೋಹನ ಕಾನಡೆ, ಚಂದ್ರಪ್ಪ ಭಾಗವಹಿಸಲಿದ್ದಾರೆ. ಅಂದು ರಾತ್ರಿ9 ಗಂಟೆಗೆ ಜ್ಯೋತಿ ಮೆಲೋಡೀಸ್ ತುಮಕೂರು ಇವರಿಂದ “ಕನ್ನಡ ರಸಮಂಜರಿ” ಕಾರ್ಯಕ್ರಮವಿದೆ ಎಂದರು.
ಸೆಪ್ಟೆಂಬರ್ 29ರಂದು ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಾಂಬಾರು ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ರಾಮಚಂದ್ರ ಮಡಿವಾಳ್, ಪೀತಾಂಬರ ಸ್ವಾಮಿ, ಸಂದೇಶ್ ತಬಲೀರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗುರುಕುಮಾರ ಪಾಟೀಲ್, ರೇಖಾ, ಕೋಲ್ಗುಣಸಿ, ಕಂಚಿ ಶಿವರಾಮ ಹೆಗಡೆ, ವಕೀಲ ಸೈಯದ್, ಪ್ರಶಾಂತ್, ರಾಮಪ್ಪ ಗದ್ದೆಮನೆ, ಪರಶುರಾಮ ಸರಡಿ, ಕೇಶವ, ಉದ್ಯಮಿ ಗಜಾನನ ನಾಯಕ್, ರಾಮಣ್ಣ ಮಣ್ಣ ಕಾಳಪ್ಪ ಭಾಗವಹಿಸಲಿದ್ದಾರೆ. ಅಂದು ರಾತ್ರಿ 9 ಗಂಟೆಗೆ ಸರಸ್ವತಿ ಸಂಗೀತ ವಿದ್ಯಾಲಯ ತಂಡದವರಿಂದ ವೀಣಾವಾದನ ಕಾರ್ಯಕ್ರಮವಿದೆ ಎಂದು ಅವರು ಹೇಳಿದರು.
ಸೆಪ್ಟೆಂಬರ್ 30ರಂದು ಮಂಗಳವಾರ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ಜಿ.ಕೆ., ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಮೆಗ್ಗಾನ್ ಆಸ್ಪತ್ರೆ ಮುಖ್ಯ ಅಧೀಕ್ಷಕ ಡಾ. ತಿಮ್ಮಪ್ಪ,ರಾಜೇಶ್ವರಿ ಗಣಪತಿ, ಶಿವಾನಂದ ತಬಲಿ, ಜಿಲ್ಲಾ ಪಂಚಾಯಿತಿ ಎಂಜನಿಯರ್ ಮುರುಗೇಶಿ, ಯಶೋಧರ, ಸದಾನಂದ ಗೌಡ ನ್ಯಾರ್ಶಿ, ಸುರೇಂದ್ರ ಗೌಡ, ಶಕುಂತಲಾ ಪಿ. ರೇಣುಕಾ ಶ್ರೀಧರ್ ಭಾಗವಹಿಸಲಿದ್ದಾರೆ. ಅಂದು ರಾತ್ರಿ 9 ಗಂಟೆಗೆ ಶ್ರೀ ರೇಣುಕಾಂಬಾ ಮಹಿಳಾ ಕಲಾ ತಂಡ ಚಂದ್ರಗುತ್ತಿ ಅವರಿಂದ “ಲಂಕಾ ದಹನ” ಪೌರಾಣಿಕ ನಾಟಕ ಪ್ರದರ್ಶನವಿದೆ ಎಂದು ತಿಳಿಸಿದರು.
ಅಕ್ಟೋಬರ್ 01ರ ಬುಧವಾರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಜಡೆ ಸಂಸ್ಥಾನ ಮಠದ ಡಾ. ಮಹಾಂತ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದು, ಸಂಸದ ಬಿ.ವೈ. ರಾಘವೇಂದ್ರ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಪುರಸಭೆ ಮಾಜಿ ಅಧ್ಯಕ್ಷ ಎಚ್.ಎಸ್. ಮಂಜಪ್ಪ, ಚಂದ್ರಗುತ್ತಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರೇಣುಕಾಪ್ರಸಾದ್ ಎಂ.ಬಿ, ವೈದ್ಯ ಡಾ.ಹೆಚ್.ಇ. ಜ್ಞಾನೇಶ್, ಜಿಲ್ಲಾ ಪಂಚಾಯಿತಿ ಸದಸ್ಯ ಎ.ಎಲ್. ಅರವಿಂದಪ್ಪ, ಎನ್. ವಸಂತ ಶೇಟ್, ರತ್ನಾಕರ ಎಂ.ಪಿ., ಎನ್.ಜಿ. ನಾಗರಾಜ ಭಾಗವಹಿಸಲಿದ್ದಾರೆ. ಅಂದು ರಾತ್ರಿ 9ಗಂಟೆಗೆ ಮೈತ್ರೇಯಿ ನೃತ್ಯ ಕಲಾ ಟ್ರಸ್ಟ್ (ರಿ.). ಶಿರಸಿ ಅವರಿಂದ “ನಾಟ್ಯ ವೈಭವ” ನೃತ್ಯ ರೂಪಕ ಕಾರ್ಯಕ್ರಮ ನಡೆಯಲಿದೆ. 10 ನೇ ವರ್ಷದ ಚಂದ್ರಗುತ್ತಿ ರೇಣುಕಾಂಬಾ ದಸರಾ ಉತ್ಸವಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದಸರಾ ಉತ್ಸವವನ್ನು ಯಶಸ್ಸಿಗೊಳಿಸಿಕೊಡುವಂತೆ ಮನವಿ ಮಾಡಿದರು.
ವಸಂತ ಬಿ ಈಶ್ವರಗೆರೆ.., ಸಂಪಾದಕರು
ವಿಜಯಪುರ ವಿಮಾನ ನಿಲ್ದಾಣಕ್ಕೆ ಹೆಚ್ಚುವರಿ 270 ಕೋಟಿ ಕೊಡಲು ಒಪ್ಪಿಗೆ: ಸಚಿವ ಎಂ.ಬಿ ಪಾಟೀಲ್
ರಾಜ್ಯದ ರೈತರ ಜಮೀನುಗಳಿಗೆ ಕಾಲುದಾರಿ, ಬಂಡಿದಾರಿ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ
ರಾಜ್ಯದ ಜನತೆಗೆ ಗುಡ್ ನ್ಯೂಸ್: 10 ತಾಲ್ಲೂಕಲ್ಲಿ ಯೋಗ, ಪ್ರಕೃತಿ ಚಿಕಿತ್ಸಾ ಕೇಂದ್ರ ತೆರೆಯಲು ಸರ್ಕಾರ ಆದೇಶ