ಶಿವಮೊಗ್ಗ: ಇಂದು ಕಳೂರು ರಾಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ ನಾಗರಾಜ್ ಗೆ ಭಾರೀ ಮುಖಭಂಗವೇ ಉಂಟಾಗಿದೆ. ಸಾಲಗಾರರಲ್ಲದ ಕ್ಷೇತ್ರದಲ್ಲಿನ ಚುನಾವಣೆ ಕಣದಲ್ಲಿ ಶ್ರೀನಿವಾಸ್ ಎದುರು ಸೋಲು ಕಂಡಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಕಳೂರು ರಾಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಹೊಸನಗರದ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ ನಾಗರಾಜ್ ಅವರು ಸಾಲಗಾರರಲ್ಲದ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಇಂತಹ ಅವರು ಶ್ರೀನಿವಾಸ್ ಎದುರು ಕೇವಲ 10 ಮತಗಳ ಅಂತರದಿಂದ ಸೋಲನ್ನಪ್ಪಿದ್ದಾರೆ.
ಇನ್ನೂ ಸಾಲಗಾರರಲ್ಲದ ಕ್ಷೇತ್ರದಲ್ಲಿ ಶ್ರೀನಿವಾಸ್ ಗೆಲುವು ಸಾಧಿಸಿದ್ದರೇ, ಸಾಲಗಾರರ ಕ್ಷೇತ್ರದಿಂದ ಹಾಲಿ ಅಧ್ಯಕ್ಷ ದುಮ್ಮಾ ವಿನಯ್ ಗೌಡ ಗೆಲುವು ಸಾಧಿಸಿದ್ದಾರೆ. ಇಂದಿನ ಕಳೂರು ರಾಮೇಶ್ವರ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ 12 ಸ್ಥಾನಗಳನ್ನು ಗೆದ್ದು ಕ್ಲೀನ್ ಸ್ವೀಪ್ ಅನ್ನು ಹಾಲಿ ಅಧ್ಯಕ್ಷ ದುಮ್ಮಾ ವಿನಯ್ ಗೌಡ ಮಾಡಿದ್ದಾರೆ.
ಹೀಗಿದೆ ಚುನಾವಣೆ ಫಲಿತಾಂಶದ ಅಂಕಿ ಅಂಶಗಳ ವಿವರ
ಸಾಲಗಾರ ರಲ್ಲದ ಕ್ಷೇತ್ರದ ಅಭ್ಯರ್ಥಿಗಳು ಪಡೆದ ಮತಗಳು
1). ನಾಗರಾಜ ಬಿ.ಜಿ 164 ಮತಗಳು
2). ವಿಶ್ವೇಶ್ವರಯ್ಯ 07 ಮತಗಳು
3). ಶ್ರೀನಿವಾಸ ಹೆಚ್ 174 ಮತಗಳು – ಗೆಲುವು
ಸಾಲಗಾರ ಕ್ಷೇತ್ರದ ಅಭ್ಯರ್ಥಿಗಳು ಪಡೆದ ಮತಗಳು
1). ಈಶ್ವರಪ್ಪ ಕೆ ಆರ್ 66 ಮತಗಳು
2). ರವಿ ಜಿ ಎಸ್ 239 ಮತಗಳು
3). ವಿನಯ್ ಕುಮಾರ ಡಿ ಆರ್ 244 ಮತಗಳು – ಗೆಲುವು
ಕ್ರೀಡೆಗೆ ರಾಜಕಾರಣಿಗಳು ಅಪಾಯಕಾರಿ, ಕ್ರಿಕೆಟ್ ಆಟವನ್ನ ರಾಜಕಾರಣಿಗಳಿಂದ ದೂರವಿಡಿ: ಡಿಕೆಶಿ ಕಿವಿಮಾತು
ಡಿ.31ರಂದು ಅಲ್ಲಿ ಇಲ್ಲಿ ಯಾಕೆ? ‘ಫ್ಯಾಮಿಲಿ ಸಹಿತ’ ಇಲ್ಲಿಗೆ ಹೋಗಿ, ಹೊಸ ವರ್ಷಾಚರಣೆ ಮಾಡಿ
ಅಫ್ಘಾನ್ ತಾಲಿಬಾನ್ ಪಡೆಗಳ ಗುಂಡಿನ ದಾಳಿ: ಪಾಕ್ ಸೈನಿಕ ಸಾವು, 11 ಮಂದಿಗೆ ಗಾಯ