ಶಿವಮೊಗ್ಗ: ರಾಜ್ಯ ಸರ್ಕಾರದ ಕ್ರಮ ಸೇರಿದಂತೆ ರೈತ ವಿರೋಧಿ ನೀತಿಗಳ ವಿರುದ್ಧ ಸಾಗರ ತಾಲೂಕಿನ ತಾಳಗುಪ್ಪದಲ್ಲಿ ರೈತರಿಂದ ಕಪ್ಪು ದಿನವನ್ನು ಆಚರಿಸಲಾಯಿತು.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತಾಳಗುಪ್ಪ ಬಸ್ ನಿಲ್ದಾಣದ ಬಳಿಯಲ್ಲಿ, ಜಿಲ್ಲೆಯ ಶರಾವತಿ ಮುಳುಗಡೆ ಸಂತ್ರಸ್ಥರು, ಚಕ್ರಾ, ವರಾಹಿ, ಸಾವೆಹಕ್ಕು, ಸಂತ್ರಸ್ಥರು, ಬಗರ್ ಹುಕುಂ ಸಂತ್ರಸ್ಥರು, ಅರಣ್ಯ ಭೂಮಿ ಸಂತ್ರಸ್ಥರ ವಿಚಾರದಲ್ಲಿ ಸರ್ಕಾರ ಮತ್ತು ಶಿವಮೊಗ್ಗ ಜಿಲ್ಲೆಯ ಜನ ಪ್ರತಿನಿಧಿಗಳ ನಿರ್ಲಕ್ಷ್ಯ ಮತ್ತು ಈ ವಿಚಾರದಲಿ 1973 ರಲ್ಲಿ ರದ್ದಾಗಿದ್ದ ಟಾಸ್ಕ್ ಪೋರ್ಸ್ ಅನ್ನು ರಚನೆ ಮಾಡುವಂತೆ ಹಲವಾರು ಬಾರಿ ಮನವಿ ಮಾಡಿಕೊಂಡರೂ ಟಾಸ್ಕ್ ಪೋರ್ಸ್ ರಚನೆ ಮಾಡಲು ಮುಂದಾಗದ ಸರ್ಕಾರದ ನಡೆ ಖಂಡಿಸಲಾಯಿತು.
ಇದಲ್ಲದೇ ಅಧಿಕಾರಿಗಳ ಅಸಹಕಾರ ಮತ್ತು ದೌರ್ಜನ್ಯದಿಂದ ಬೇಸತ್ತು ಹಾಗೂ ಸಾಗರ ತಾಲ್ಲೂಕಿನ ಕಂದಾಯ ಇಲಾಖೆಯ ಕಚೇರಿಗಳಲ್ಲಿ ರೈತರ ಭೂಮಿಗೆ ಸಂಬಂಧಿಸಿದ ದಾಖಲಾತಿ ಕಡತಗಳು ನಾಪತ್ತೆಯಾಗುತ್ತಿರುವುದನ್ನು ಖಂಡಿಸಲಾಯಿತು. ರಾಜ್ಯ ಸರ್ಕಾರದ ಆದೇಶವಿದ್ದರೂ ಆದೇಶದ ಪ್ರಕಾರ ರೈತರ ಕೆಲಸಗಳನ್ನು ಮಾಡದ ಅಧಿಕಾರಿಗಳ ನಡೆಯನ್ನು ಖಂಡಿಸಿ ದಿನಾಂಕ : 04.01.2024 ರಂದು ಸಂಬ್ರಮದಿಂದ ಆಚರಿಸಬೇಕಾಗಿದ್ದ ಸಂಸ್ಥಾಪನಾ ದಿನವನ್ನು, “ಕಪ್ಪು ದಿನ” ಎಂದು ಆಚರಿಸುವುದರ ಮುಖಾಂತರ ಸರ್ಕಾರ ಮತ್ತು ಜನ ಪ್ರತಿನಿಧಿಗಳ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ನಡೆಯನ್ನು ಖಂಡಿಸಿ ಪ್ರತಿಭಟನಾ ಸಭೆಯನ್ನು ನಡೆಸಲಾಯಿತು.
ಈ ಪ್ರತಿಭಟನಾ ಸಭೆಗೆ ಜಿಲ್ಲೆಯ ರೈತ ಬಾಂಧವರು ರೈತಪದ ಕಾಳಜಿಯುಳ್ಳ ಸಾಮಾಜಿಕ ಕಾರ್ಯಕರ್ತರು, ಹೋರಾಟಗಾರರು, ಪಾಲ್ಗೊಂಡಿದ್ದರು..
ಇಂದಿನ ಪೀಳಿಗೆ ಈ ತರ ಸಂಘಟನೆಯ ಉದ್ದೇಶಗಳನ್ನು ಅರಿತುಕೊಂಡು ಸಂಘಕ್ಕೆ ಸೇರ್ಪಡೆ ಆಗಬೇಕು ಎಂದು ಎಮ್ ಎನ್ ನಾಯಕ್ ಕರೆ ನೀಡಿದರು. ಎಲ್ಲ ಕಳ್ಳರೆ ತುಂಬಿರುವ ಈ ಅಧಿಕಾರಿಗಳು, ರಾಜಕೀಯ ಪಕ್ಷಗಳು ಎಲ್ಲ ಕಳ್ಳರು ಎಂದು ಎಮ್ ಎನ್ ನಾಯಕ ಹೇಳಿದರು.
ತಿ.ನಾ ಶ್ರೀನಿವಾಸ ಮಾತಾನಾಡಿ ಇವತ್ತಿನ ರಾಜಕಾರಣಿ ಗಳು ನಾಚಿಕೆ ಪಡಬೇಕು ಎಂದರು…ಗೊಪಲ ಗ್ವಡರ ಆಡಳಿತ ನೊಡಿ ಕಲಿಯಬೇಕು ಎಂದರು.
ಹಕ್ಕು ಪತ್ರಕೊಡಲು ಯೋಗ್ಯತೆ ಇಲ್ಲದೆ ಇರುವ ಸರ್ಕಾರ. ಇದು ಎಂದು ಸರಕಾರದ ವಿರುದ್ದ ಹರಿ ಹಾಯ್ದರು. ಬಿ.ಜೆ.ಪಿ ಅವರು ಬರಿ ದೇವರ ಪೋಟೋ ಇಡಕೊಂಡು ಆಡಳಿತ ಕೇಳೊಕೆ ಹೊಗ್ತಾ ಇದಾರೆ ಎಂದು ಕಿಡಿಕಾರಿದರು.
Bjp. ಸರ್ಕಾರ ಯಾವುದೇ ರೀತಿಯ ಪ್ರಯೋಜನ ಇಲ್ಲ ಆಗಿದ್ದ ಸರಕಾರ. Bjp ಆಗಲಿ ಕಾಂಗ್ರೆಸ್ ಪಕ್ಷದಲ್ಲಿ ಯಾರಿಗು ದಮ್ ಇಲ್ಲ ಎಂದು ಮಾತನಾಡಿದರು ಜನರಿಗೆ ಮೊಸ ಮಾಡೊದೆ ರಾಜಕೀಯ ಪಕ್ಷಗಳ ನಾಟಕ ಆಗಿದೆ. ಹೆಣ ಹೊರೊ ಸರ್ಕಾರ ಇತ್ತು ಎಂದು bjp ಪಕ್ಷದ ವಿರುದ್ದ ತಿ.ನಾ ಶ್ರೀನಿವಾಸ್ ಗಂಬಿರ ಆರೋಪ ಮಾಡಿದರು.
ದುಡ್ಡು ಕೊಟ್ಟು ಒಟು ಪಡೆಯುವ ಪ್ರತಿಯೊಬ್ಬ ರಾಜಕಾರಣಿ ಮಾಡೊ ಕೆಲಸ ನಿಮಗೆ ಚೊರಿ ಹಾಕೊದು ನೆನಪಿಡಿ ಎಂದರು…
ರೈತ ಸಂಘದ ರಾಜ್ಯಾಧ್ಯಕ್ಷ ಜೊನಪ್ಪ ಪೂಜಾರಿ ಅಧಿಕಾರಕ್ಕೆ ಬರೊ ಮೊದಲು ನಾಟಕ ಅಮೆಲೆ ಅವರ ಚಿತ್ರ ಬೇರೆನೆ ಅದು ಆ ಪಕ್ಷ ಈ ಪಕ್ಷ ಅಲ್ಲ ಎಲ್ಲ ಒಂದೆ
ಹೊರಾಡದಿಂದ ಅದಿಕಾರಕ್ಕೆ ಬಂದರು ಕೊಡಾ ರೈತ ರಿಗೆ ಯಾವುದೇ ನ್ಯಾಯ ಸಿಗಲಿಲ್ಲ ಎಂದರು.
ಕೇವಲ ಮತು ಅಸ್ಟೆ ಇವರದ್ದು. ಬಡಕೊಂಡು ತಿನ್ನೊ ಜಾತಿ ಅವರದ್ದು ಎಂದು ರಾಜಕೀಯ ಪಕ್ಷಗಳು ವಿರುದ್ಧ ಹರಿಹಾಯ್ದರು.
ಇಲ್ಲೇ ಹುಟ್ಟಿ ಇಲ್ಲೆ ಬೇಳೆದು ಇವತ್ತು ರಾಜ್ಯ ವ್ಯಾಪಿ ರೈತ ಸಂಘ ಸ್ತಾಪನೆ ಆಗಿದೆ. ಎಲ್ಲಾ ಕಾನೂನು ತಿದ್ದುಪಡಿ ಮಾಡಿದ್ದು ಯಾಕೆ ಅವರ ಬೆಳೆ ಬೆಯಿಸಿಕೊಳ್ಳೊದಕ್ಕೆ ಲೊಟಿ ಹೊಡೆಯೊದಕ್ಕೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
50000 ರೈತ ರಿಗೆ ಅನ್ಯಾಯ ಆಗಿದೆ. ಅದಕ್ಕೆ ಇವಗ ಬರೊ ಚುನಾವಣೆ ಬಹಿಷ್ಕಾರ ಮಾಡೊ ಮೊಲಕ ನಾವು ನಮ್ಮ ಕೆಲಸ ಮಾಡಿಸಬೇಕು ಎಂದರು.
ಜಿಲ್ಲಾಧ್ಯಕ್ಷರು ದಿನೇಶ್ ಶರುವಾಳ ಮಾತನಾಡಿ, ಕಪ್ಪದಿನ ಯಾಕೆ ಅಂದರೆ ಅದಿಕಾರ ಕಪ್ಪಾಗಿದೆ ಎಲ್ಲಾ ರಾಜಕೀಯ ಪಕ್ಷಗಳಿಗು ಅದಿಕಾರಿಗಳಿಗು ಕಪ್ಪು ಕವೆದಿದೆ ಎಂದರು.
ಸರಕಾರ ಇನ್ನು ಎಚ್ಚೆತ್ತು ಕೊಂಡಿಲ್ಲ ಅಂದರೆ ನಾವು ಮುಂದಿನ ದಿನದಲ್ಲಿ ಉಗ್ರವಾಗಿ ಹೊರಾಟ ಮಾಡಬೇಕಾಗುತ್ತೆ. ಈ ಹೊರಾಟ ಕೇವಲ ಹೊರಾಟ ಅಲ್ಲ ಇದು ಎಚ್ಚರಿಕೆ. ಹೆಬ್ಬಟ್ಟುಗಳನ್ನು ಆಯ್ಕೆ ಮಾಡಿದ್ದು ನಮ್ಮ ತಪ್ಪಾಗಿದೆ ಎಂದರು.
ಗಮನಿಸಿ: ‘KSRTC ತಾಂತ್ರಿಕ ಸಹಾಯಕ ಹುದ್ದೆ’ಯ ‘ಸಂಭವನೀಯ ಆಯ್ಕೆ ಪಟ್ಟಿ’ ಪ್ರಕಟ
BREAKING : ಅಪಹರಣಕ್ಕೊಳಗಾದ ಸರಕು ಹಡಗು ನೌಕಾಪಡೆ ವಶಕ್ಕೆ ; ಕಡಲ್ಗಳ್ಳರಿಗೆ ಎಚ್ಚರಿಕೆ