ಶಿವಮೊಗ್ಗ: ಹಿಂದುಳಿದ ಆಯೋಗದ ಮೂಲಕ ಜಾತಿ ಗಣತಿಗೆ ಸರ್ಕಾರ ಮುಂದಾಗಿದೆ. ಅಖಿಲ ಕರ್ನಾಟಕ ಬ್ರಾಹ್ಮಣ ಸಮಾಜದ ನೇತೃತ್ವದಲ್ಲಿ ನಿರ್ಣಯ ಮಾಡಲಾಗಿದ್ದು, ಧರ್ಮದ ಕಲಂ 1ಲ್ಲಿ ಹಿಂದೂ ಎಂದೂ ಕಲಂ 2ರಲ್ಲಿ ಬ್ರಾಹ್ಮಣ ಎಂದೇ ನಮೂದಿಸಬೇಕು ಎಂದು ಬ್ರಾಹ್ಮಣ ಸಮಾಜದ ಸೊರಬ ತಾಲ್ಲೂಕು ಅಧ್ಯಕ್ಷ ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಸಮಾಜದ ಸಂಘಟನಾ ಕಾರ್ಯದರ್ಶಿ ಪ್ರಕಾಶ್ ತಲಕಾಲಕೊಪ್ಪ ಹೇಳಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸೊರಬ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ವಾಸ್ತವವಾಗಿ ಸುಮಾರು 45 ಲಕ್ಷ ಜನಸಂಖ್ಯೆ ಬ್ರಾಹ್ಮಣರಿದ್ದಾರೆ. ಈ ಹಿಂದಿನ ಸಮೀಕ್ಷೆಯಲ್ಲಿ ಕೇವಲ 12 ಲಕ್ಷ ಜನಸಂಖ್ಯೆ ತೋರಿಸಲಾಗಿತ್ತು. ಉಪ ಪಂಗಡಗಳ ಜಾತಿ ಹೆಸರನ್ನು ನಮೂಸಿದ್ದರಿಂದ ಈ ರೀತಿ ಸಂಖ್ಯೆಯಲ್ಲಿ ವ್ಯತ್ಯಾಸ ಆಗಿತ್ತು. ಆದ್ದರಿಂದ ಈ ಬಾರಿ ಜಾತಿ ಸಮೀಕ್ಷೆಯಲ್ಲಿ ಬ್ರಾಹ್ಮಣ ಎಂದೇ ನಮೂದಿಸಿ ಎಂದು ಮನವಿ ಮಾಡಿದರು.
ಅಸಮಾನತೆಯ ಕಾರಣಕ್ಕಾಗಿ ಕ್ರಿಸ್ಟಿಯನ್ ಧರ್ಮಕ್ಕಾಗಿ ಮತಾಂತರಗೊಂಡ ಹಲವರಿಗೆ ಕ್ರಿಶ್ಚಿಯನ್ ಮತ್ತು ಜಾತಿ ನಮೂದಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಮತಾಂತರಗೊಂಡಾಗ ಮತ್ತೆ ಅವರಿಗೆ ಧರ್ಮ ಜಾತಿ ಕಲಂ ನಮೂದಿಸಲು ಅಧಿಸೂಚನೆಯಲ್ಲಿ ಸೂಚಿಸುವ ಅವಶ್ಯಕತೆ ಏನಿದೆ ಎಂದು ಪ್ರಶ್ನಿಸಿದರು.
ವಾರ್ಷಿಕ ವರಮಾನ 8 ಲಕ್ಷಕ್ಕಿಂತ ಕಡಿಮೆವಿರುವ ವ್ಯಕ್ತಿಗಳಿಗೆ ಮೀಸಲಾತಿ ಕಲ್ಪಿಸಲು ಅವಕಾಶವಿದೆ. ದೇಶದ ಬೇರೆ ಬೇರೆ 13 ರಾಜ್ಯಗಳ ಅನುಷ್ಠಾನಕ್ಕೆ ತರಲಾಗಿದೆ. ಆದರೆ ಕರ್ನಾಟಕದಲ್ಲಿ ಈ ವ್ಯವಸ್ಥೆ ಜಾರಿಗೊಳಿಸಿಲ್ಲ. ವರಮಾನವಿರುವ ಸಮುದಾಯಕ್ಕೆ ಶೈಕ್ಷಣಿಕ, ಔದ್ಯೋಗಿಕ ದೃಷ್ಟಿಯಿಂದ ಕಾಯ್ದೆ ಜಾರಿಗೊಳಿಸುವಂತೆ ಒತ್ತಾಯಿಸಿದರು.
ಜಾತಿ ಗಣತಿಗೆ ನಮ್ಮ ವಿರೋಧವಿಲ್ಲ. ಪರಿಶಿಷ್ಟ ಜಾತಿ,ಪಂಗಡಗಳಿಗೆ ಹಾಗೂ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಜಾತಿ ಗಣತಿಯು ಮಾನವೀಯ ಹಾಗೂ ಸಾಂವಿಧಾನಿಕವಾಗಿ ಸರಿ ಇದೆ. ಆದರೆ ಧರ್ಮ ಬಿಟ್ಟು ಹೋದ ಸಮುದಾಯಕ್ಕೆ ಜಾತಿ ಕಲಂನ ಅವಶ್ಯಕತೆಯಿಲ್ಲ ಎಂದು ತಿಳಿಸಿದರು.
ಈ ವೇಳೆ ಸೊರಬ ಬ್ರಾಹ್ಮಣ ಸಮಾಜದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಕಾಳಿಗರಾಜ್, ಉಪಾಧ್ಯಕ್ಷರಾದ ಹೊಸಬಾಳೆ ಸುರೇಶ್ ನಾಡಿಗರ್, ಪ್ರಭಾ ಹೊಂಕಣ, ಮಹೇಶ್ ಕಟ್ಟಿನಕೆರೆ, ರಘು ಸ್ವಾದಿ, ಭಾರ್ಗವ್ ನಾಡಿಗ್, ಪ್ರಭಾಕರ್ ಗೋಖಲೆ ಇದ್ದರು.
ಶಿವಮೊಗ್ಗ: ಸೆ.22ರಿಂದ ಚಂದ್ರಗುತ್ತಿಯಲ್ಲಿ ಅದ್ಧೂರಿಯಾಗಿ ‘ದಸರಾ ಉತ್ಸವ’ ಆಚರಣೆ- ಅಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ
ರಾಜ್ಯದ ರೈತರ ಜಮೀನುಗಳಿಗೆ ಕಾಲುದಾರಿ, ಬಂಡಿದಾರಿ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ