ಶಿವಮೊಗ್ಗ : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ ತಡ, ಮಹಿಳೆಯರಿಗೆ ಅನುಕೂಲವಾಗಲೆಂದು ಬಸ್ನಲ್ಲಿ ಉಚಿತ ಪ್ರಯಾಣಕ್ಕೆ ಶಕ್ತಿ ಯೋಜನೆ ಜಾರಿಗೊಳಿಸಿತು. ಯೋಜನೆ ಜಾರಿಗೆ ಬಂದಿದ್ದೆ ತಡ ಬಸ್ ನಲ್ಲಿ ಆಸನಕ್ಕಾಗಿ ಹೊಡೆದಾಟ ಬಡಿದಾಟ ಜಗಳ ಗಲಾಟೆ ನಡೆದಂತ ಪ್ರಸಂಗಗಳು ನಡೆದಿವೆ.
ಇದೀಗ ಶಿವಮೊಗ್ಗದಲ್ಲಿ ಬಸ್ ಸೀಟ್ಗಾಗಿ ಮಹಿಳೆಯರಿಬ್ಬರೂ ಹೊಡೆದಾಡಿಕೊಂಡಿದ್ದು ಇವರ ಇಬ್ಬರ ಜಗಳ ಬಿಡಿಸಲಾಗದೆ ಬಸ್ಸಿನ ನಿರ್ವಾಹಕ ನೇರವಾಗಿ ಬಸ್ಸನ್ನು ಠಾಣೆ ಮುಂದೆ ನಿಲ್ಲಿಸಿ ಪೊಲೀಸರನ್ನು ಕರೆದು ನಿರ್ವಾಹಕ ಘಟನೆ ವಿವರಿಸಿದ್ದಾರೆ. ಸಾಗರ ನಿಲ್ದಾಣದಿಂದ ಶಿವಮೊಗ್ಗಕ್ಕೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಸೀಟಿಗಾಗಿ ನಾರಿಯರಿಬ್ಬರ ನಡುವೆ ಜಗಳ ನಡೆದಿದೆ.
ಜಗಳ ಬಿಡಿಸಲಾಗದೇ ನಿರ್ವಾಹಕ ಬಸ್ಸನ್ನು ನೇರವಾಗಿ ಸಾಗರಪೇಟೆ ಪೊಲೀಸ್ ಠಾಣೆಗೆ ಕೊಂಡೊಯ್ದ ಘಟನೆ ನಡೆದಿದೆ. ಬಸ್ಸನ್ನು ಠಾಣೆ ಮುಂದೆ ನಿಲ್ಲಿಸಿ ಪೊಲೀಸರನ್ನು ಕರೆದು ನಿರ್ವಾಹಕ ಘಟನೆ ವಿವರಿಸಿದ್ದಾರೆ. ನಾರಿಯರ ಜಗಳ ಬಗೆಹರಿಸಲಾಗದೆ ಹೈರಾಣಾದ ಪೊಲೀಸರು ಕೊನೆಗೆ ಬೇಸತ್ತು ಅವರಿಬ್ಬರನ್ನೂ ಕೆಳಗಿಳಿಸಿ ಬಸ್ ಕಳುಹಿಸಿದ್ದಾರೆ.