ಶಿವಮೊಗ್ಗ: 11 ಕೋಟಿ ರೂ. ವೆಚ್ಚದಲ್ಲಿ ಸಾಗರದ ಹಾನಂಬಿ ಹೊಳೆಗೆ ಚಾನಲ್ ನಿರ್ಮಾಣ ಮಾಡಲಾಗುತ್ತಿದೆ. ಸುಮಾರು 50 ಕೋಟಿ ರೂ. ವೆಚ್ಚದಲ್ಲಿ ಹಾನಂಬಿ ಹಳ್ಳಕ್ಕೆ ಚಾನಲ್ ನಿರ್ಮಿಸಿ, ಮಳೆಯಿಂದ ಆಗುವ ಹಾನಿಯನ್ನು ತಡೆಯಬೇಕು ಎನ್ನುವ ಉದ್ದೇಶ ಹೊಂದಲಾಗಿದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ನೆಹರೂ ನಗರದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆ ವತಿಯಿಂದ ಹಾನಂಬಿಹಳ್ಳ ದುರಸ್ತಿಗೆ 1 ಕೋಟಿ ರೂ. ವೆಚ್ಚದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದಂತ ಅವರು, ಹಾನಂಬಿ ಹಳ್ಳ ಮಳೆಗಾಲದಲ್ಲಿ ಉಕ್ಕಿ ಅಕ್ಕಪಕ್ಕದ ಮನೆಗಳ ಜೊತೆಗೆ ವಿನೋಬಾ ನಗರದ ಕೆಲವು ಬಡಾವಣೆಗಳಿಗೆ ಸಹ ನೀರು ನುಗ್ಗುತಿತ್ತು. ಸಾಕಷ್ಟು ಮನೆಗಳು ಕೊಚ್ಚಿಕೊಂಡು ಹೋದ ಉದಾಹರಣೆಗಳಿವೆ. ಈ ಹಿನ್ನೆಲೆಯಲ್ಲಿ ಜನರ ದೂರಿನ ಮೇರೆಗೆ ಮೊದಲು 10 ಕೋಟಿ, ಈಗ 1 ಕೋಟಿ ರೂ. ಬಿಡುಗಡೆ ಮಾಡಿದ್ದು ಸದ್ಯದಲ್ಲಿಯೆ ಉಳಿದ 40 ಕೋಟಿ ಹಣವನ್ನು ಉಪ ಮುಖ್ಯಮಂತ್ರಿಗಳಿಗೆ ಮನವಿ ಮಾಡಿ ಮಂಜೂರು ಮಾಡಿಸಲಾಗುತ್ತದೆ ಎಂದರು.
ಇದರ ಜೊತೆಗೆ ಸಣ್ಣ ನೀರಾವರಿ ಇಲಾಖೆಯಿಂದ ಕಣ್ಣೂರು, ಗೌತಮಪುರ ಚಾನಲ್ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಿದೆ. ಇದರ ಜೊತೆಗೆ ಕೆರೆಗಳ ಹೂಳೆತ್ತಲು ಹಣ ಮಂಜೂರು ಮಾಡಿದೆ. ಸಾಗರ ಕ್ಷೇತ್ರದ ಅಭಿವೃದ್ದಿಗೆ ಬೇಕಾದ ಎಲ್ಲ ಕೆಲಸಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪೌರಾಯುಕ್ತ ನಾಗಪ್ಪ ಎಚ್.ಕೆ., ಮದನ್, ಗಣಪತಿ ಮಂಡಗಳಲೆ, ಸುರೇಶ್ ಬಾಬು, ತಸ್ರೀಫ್, ಫ್ರಾನ್ಸಿಸ್ ಗೋಮ್ಸ್, ಉಷಾ, ಮರಿಯಾ ಲೀಮಾ, ರವಿ ಲಿಂಗನಮಕ್ಕಿ, ನವೀನ ಆರ್ಟ್ಸ್, ಮಧು ಮಾಲತಿ, ಸೈಯದ್ ಜಾಕೀರ್, ಭವ್ಯ ಕೃಷ್ಣಮೂರ್ತಿ ಸೇರಿದಂತೆ ಇನ್ನಿತರರು ಹಾಜರಿದ್ದರು.
BREAKING : ಹೈಕಮಾಂಡ್ ಅವಕಾಶ ಕೊಟ್ಟರೆ ಮತ್ತೆರಡು ಬಜೆಟ್ ಮಂಡನೆ : 5 ವರ್ಷ ನಾನೇ CM ಎಂದ ಸಿದ್ದರಾಮಯ್ಯ
ಚಾಳಿ ಬಿಡದ ಅಧಿಕಾರಿಗಳಿಗೆ ಚಳಿ ಬಿಡಿಸಿದ ಕರ್ನಾಟಕ ಮಾಹಿತಿ ಆಯೋಗ: BDA ಅಧಿಕಾರಿಗೆ 1 ಲಕ್ಷ ದಂಡಾಸ್ತ್ರ








