Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಐಐಎಸ್‌ಸಿ ಬೆಂಗಳೂರು ಸಂಶೋಧನಾ ನವೀನತೆಗೆ ಉತ್ತೇಜನ ನೀಡಲಿರುವ ಶಾಫ್ಲರ್ ಇಂಡಿಯಾ

BREAKING : ನಾಳೆ ನಟ ದರ್ಶನ್ ಗೆ ಬಿಗ್ ಡೇ : ಕೊಲೆ ಕೇಸ್ ಕುರಿತು, ಸುಪ್ರೀಂ ಕೋರ್ಟ್ ನಲ್ಲಿ ಜಾಮೀನು ಅರ್ಜಿ ವಿಚಾರಣೆ!

ಕರ್ನಾಟಕ ಸೇರಿದಂತೆ 16 ರಾಜ್ಯಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ ಚುನಾವಣಾ ಆಯೋಗ ಆದೇಶ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶಿವಮೊಗ್ಗ: ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪುಸ್ತಕಗಳ ಪಾತ್ರ ಬಹುದೊಡ್ಡದು: ಹಿರಿಯ ಪತ್ರಕರ್ತ ಎನ್. ರವಿಕುಮಾರ್ ಟೆಲೆಕ್ಸ್
KARNATAKA

ಶಿವಮೊಗ್ಗ: ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪುಸ್ತಕಗಳ ಪಾತ್ರ ಬಹುದೊಡ್ಡದು: ಹಿರಿಯ ಪತ್ರಕರ್ತ ಎನ್. ರವಿಕುಮಾರ್ ಟೆಲೆಕ್ಸ್

By ವಸಂತ ಬಿ ಈಶ್ವರಗೆರೆ

ಶಿವಮೊಗ್ಗ: ವ್ಯಕ್ತಿತ್ವನ್ನು ರೂಪಿಸುವಲ್ಲಿ ಪುಸ್ತಕಗಳು ಬಹುದೊಡ್ಡ ಪಾತ್ರವನ್ನು ವಹಿಸುತ್ತವೆ ಎಂದು ಹಿರಿಯ ಪತ್ರಕರ್ತ,  ಚಿಂತಕ, ಬರಹಗಾರ ಎನ್. ರವಿಕುಮಾರ್ ಟೆಲೆಕ್ಸ್  ಹೇಳಿದರು.

ಇಂದು ನಗರದ ಪ್ರಜ್ಞಾ ಬುಕ್ ಗ್ಯಾಲರಿಯ ವತಿಯಿಂದ ಆಯೋಜಿಸಿದ್ದ ಪುಸ್ತಕ ಸುಗ್ಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,  ಅನುಭವ ಲೋಕದಿಂದ ಗಳಿಸಿದ ಅರಿವು ಓದಿನಿಂದ ವಿಸ್ತಾರಗೊಳ್ಳುತ್ತದೆ.  ಸಮಾಜವನ್ನು ಮಾನವೀಯಗೊಳಿಸುವಲ್ಲಿ ಪುಸ್ತಕಗಳ ಪಾತ್ರ ದೊಡ್ಡದ್ದಾಗಿದ್ದು, ಇಂದಿನ ಡಿಜಿಟಲ್ ಯುಗದಲ್ಲೂ  ಜನರು ಓದುಗ ಸಂಸ್ಕೃತಿಗೆ ಮರುಳುತ್ತಿರುವುದು ಆಶಾದಾಯಕ ಸಂಗತಿಯಾಗಿದೆ ಎಂದರು.

ಯಾವುದೇ ಪುಸ್ತಕಗಳು ನಮ್ಮ ಬೌದ್ಧಿಕ ಆಯುಧಗಳೇ ಆಗಿರುತ್ತವೆ. ಜರ್ಮನ್ ನ  ಹಿಟ್ಲರ್ ಮೊದಲು ಪುಸ್ತಕಗಳನ್ನು, ಗ್ರಂಥಾಲಯಗಳನ್ನು ಸುಡುವ ಮೂಲಕ ಜನರನ್ನು ಅರಿವಿನಿಂದ ದೂರವಿಟ್ಟು ತನ್ನ ಸರ್ವಾಧಿಕಾರವನ್ನು ಜಾರಿಗೊಳಿಸಲು ಮುಂದಾಗಿದ್ದನು.  ಸಂವಿಧಾನವನ್ನು ಓದದೆ ಇರುವವರು ಸಂವಿಧಾನವನ್ನು ತಿರಸ್ಕರಿಸುವ ನಡವಳಿಕೆಗಳನ್ನುತೋರುತ್ತಿದ್ದಾರೆ. ಆದರೆ ಸಂವಿಧಾನವನ್ನು ಓದುವುದರಿಂದ ಭಾರತ ಅರಿವಾಗಲಿದೆ.  ಇದು ಓದಿನ  ಮಹತ್ವವನ್ನು ತಿಳಿಸುತ್ತದೆ ಎಂದು  ವಿಶ್ಲೇಷಿಸಿದರು.

ಪುಸ್ತಕಗಳು ಹಿಮ್ಮುಖ ಮತ್ತು ಮುನ್ನಡೆಯ ಎರಡೂ ಬಗೆಯ ದರ್ಶನವನ್ನು ಕೊಡಬಲ್ಲವು.  ಪುಸ್ತಕಗಳನ್ನು ಓದುವುದರಿಂದ  ನಮ್ಮ ವರ್ತಮಾನ ಮತ್ತು ಭವಿಷ್ಯದ ಬದುಕಿಗೆ ಸೂಕ್ತ ದಾರಿಗಳನ್ನು ಕಂಡುಕೊಳ್ಳಲು ಸಾಧ್ಯವಾಗಲಿದೆ.. ವ್ಯಕ್ತಿತ್ವದ ಪರಿಪೂರ್ಣತೆಗೆ ಪುಸ್ತಕಗಳು ದಾರಿದೀಪವಾಗಿರುತ್ತವೆ ಎಂದು  ಎನ್ .ರವಿಕುಮಾರ್ ಟೆಲೆಕ್ಸ್ ತಿಳಿಸಿದರು.

ಪ್ರಜ್ಞಾಬುಕ್ ಗ್ಯಾಲರಿ ಕೇವಲ ವ್ಯಾಪಾರ ದೃಷ್ಟಿಯ ಆಚೆಗೂ  ಪುಸ್ತಕಗಳ ಮಹತ್ವ, ಓದುಗರ ಚಿಂತನೆಗಚ್ಚುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ಬೌದ್ಧಿಕ ವಲಯಕ್ಕೆ ದೊಡ್ಡ ಕೊಡುಗೆ ಯಾಗಲಿದೆ ಎಂದರು.

ಇದೇ ಸಂದರ್ಭದಲ್ಲಿ ಸುವ್ವಿ ಪ್ರಕಾಶನದ  ಬಿ.ಎನ್  ಸುನೀಲ್‌ಕುಮಾರ್  ಅವರಿಗೆ ಪ್ರಜ್ಞಾ  ಪುರಸ್ಕಾರ ನೀಡಿ ನೀಡಿ ಗೌರವಿಸಲಾಯಿತು. ಅಲ್ಲದೇ ಪ್ರಜ್ಞಾ ಬುಕ್ ಗ್ಯಾಲರಿಯ ನೂತನ ಯುಟ್ಯೂಬ್ ಜಾಲವನ್ನು ಲೋಕಾರ್ಪಣೆಗೊಳಿಸಲಾಯಿತು.

ಈ ವೇಳೆ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಎಂ.ಎಂ.ಸ್ವಾಮಿ, ಪತ್ರಕರ್ತ  ಆರುಂಡಿ ಶ್ರೀನಿವಾಸ್ ಅತಿಥಿಗಳಾಗಿ ಭಾಗವಹಿಸಿದ್ದರು. ಪ್ರಜ್ಞಾ ಬುಕ್ ಗ್ಯಾಲರಿ ಮುಖ್ಯಸ್ಥರಾದ ಕೃಷ್ಣಮೂರ್ತಿ, ಲೇಖಕಿ ಅಂಜುಂ, ರಂಗಕರ್ಮಿ ಸತೀಶ್ ಸಾಸ್ವೆಹಳ್ಳಿ, ಸೌಮ್ಯ, ಶಂಕರ್ ಉಪಸ್ಥಿತರಿದ್ದರು.

ಸಂಡೂರು ವಿಧಾನಸಭೆ ಉಪಚುನಾವಣೆ: ಸ್ಪರ್ಧೆಯಲ್ಲಿನ ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆ

‘ರೇಷನ್ ಕಾರ್ಡ್’ದಾರರಿಗೆ ಬಿಗ್ ಶಾಕ್: ‘ಇ-ಕೆವೈಸಿ’ ಅಪ್ ಡೇಟ್ ಮಾಡದವರಿಗೆ ಪಡಿತರ ಸಿಗಲ್ಲ, ಕಾರ್ಡ್ ರದ್ದು | Ration Card Rule Change

Share. Facebook Twitter LinkedIn WhatsApp Email

Related Posts

ಐಐಎಸ್‌ಸಿ ಬೆಂಗಳೂರು ಸಂಶೋಧನಾ ನವೀನತೆಗೆ ಉತ್ತೇಜನ ನೀಡಲಿರುವ ಶಾಫ್ಲರ್ ಇಂಡಿಯಾ

2 Mins Read

BREAKING : ನಾಳೆ ನಟ ದರ್ಶನ್ ಗೆ ಬಿಗ್ ಡೇ : ಕೊಲೆ ಕೇಸ್ ಕುರಿತು, ಸುಪ್ರೀಂ ಕೋರ್ಟ್ ನಲ್ಲಿ ಜಾಮೀನು ಅರ್ಜಿ ವಿಚಾರಣೆ!

1 Min Read

ಕರ್ನಾಟಕ ಸೇರಿದಂತೆ 16 ರಾಜ್ಯಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ ಚುನಾವಣಾ ಆಯೋಗ ಆದೇಶ

2 Mins Read
Recent News

ಐಐಎಸ್‌ಸಿ ಬೆಂಗಳೂರು ಸಂಶೋಧನಾ ನವೀನತೆಗೆ ಉತ್ತೇಜನ ನೀಡಲಿರುವ ಶಾಫ್ಲರ್ ಇಂಡಿಯಾ

BREAKING : ನಾಳೆ ನಟ ದರ್ಶನ್ ಗೆ ಬಿಗ್ ಡೇ : ಕೊಲೆ ಕೇಸ್ ಕುರಿತು, ಸುಪ್ರೀಂ ಕೋರ್ಟ್ ನಲ್ಲಿ ಜಾಮೀನು ಅರ್ಜಿ ವಿಚಾರಣೆ!

ಕರ್ನಾಟಕ ಸೇರಿದಂತೆ 16 ರಾಜ್ಯಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ ಚುನಾವಣಾ ಆಯೋಗ ಆದೇಶ

ಜೆಇಇ ಅಡ್ವಾನ್ಸ್‌ಡ್-2026: ಪರೀಕ್ಷಾ ಮಾರ್ಗಸೂಚಿ ಪ್ರಕಟ; ಅಭ್ಯರ್ಥಿಗಳು ಗಮನಿಸಬೇಕಾದ ಪ್ರಮುಖ ಅಂಶಗಳು ಇಲ್ಲಿವೆ

State News
KARNATAKA

ಐಐಎಸ್‌ಸಿ ಬೆಂಗಳೂರು ಸಂಶೋಧನಾ ನವೀನತೆಗೆ ಉತ್ತೇಜನ ನೀಡಲಿರುವ ಶಾಫ್ಲರ್ ಇಂಡಿಯಾ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ಶಾಫ್ಲರ್ ಇಂಡಿಯಾ, ಬೆಂಗಳೂರಿನ ಫೌಂಡೇಶನ್ ಫಾರ್ ಸೈನ್ಸ್ ಇನೋವೇಶನ್ ಅಂಡ್ ಡೆವಲಪ್‌ಮೆಂಟ್ (ಎಫ್‌ಎಸ್‌ಐಡಿ) ನಲ್ಲಿ ಅತ್ಯಾಧುನಿಕ ಗಣಕ ಸಂಶೋಧನಾ…

BREAKING : ನಾಳೆ ನಟ ದರ್ಶನ್ ಗೆ ಬಿಗ್ ಡೇ : ಕೊಲೆ ಕೇಸ್ ಕುರಿತು, ಸುಪ್ರೀಂ ಕೋರ್ಟ್ ನಲ್ಲಿ ಜಾಮೀನು ಅರ್ಜಿ ವಿಚಾರಣೆ!

ಕರ್ನಾಟಕ ಸೇರಿದಂತೆ 16 ರಾಜ್ಯಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ ಚುನಾವಣಾ ಆಯೋಗ ಆದೇಶ

ಜೆಇಇ ಅಡ್ವಾನ್ಸ್‌ಡ್-2026: ಪರೀಕ್ಷಾ ಮಾರ್ಗಸೂಚಿ ಪ್ರಕಟ; ಅಭ್ಯರ್ಥಿಗಳು ಗಮನಿಸಬೇಕಾದ ಪ್ರಮುಖ ಅಂಶಗಳು ಇಲ್ಲಿವೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.